Discover millions of ebooks, audiobooks, and so much more with a free trial

Only $11.99/month after trial. Cancel anytime.

Gone With The Wind
Gone With The Wind
Gone With The Wind
Ebook1,670 pages7 hours

Gone With The Wind

Rating: 0 out of 5 stars

()

Read preview

About this ebook

Born in Mangalore, Shyamala had schooling at Besant National Girls High School and college education at St Agnes College, Mangalore.

Her father, Narayana Uchil, was an educationist and reformist and mother U Vasanthi worked as PT and Guiding teacher at the Besant National Girls School.

With an inborn passion for books and reading and with a treasury of books at home, she read a lot and soon took to writing. Her first poem 'KaDalina Kare' was published in 'Rashtrabandhu, when she was just eleven.

Married life brought her to Mumbai. Memoirs of her grandmother were published in 'Amrita Varshini' in 'BeLLi' in 1971. Her other works are Kannada stories, features, translated stories and travelogues in different magazines in Karnataka and Mumbai.

She has worked for Sound and Picture Archive for Research On Women (SPARROW) in the field of transcription and translation. She has also served on the editorials of Mumbaivani special issues and Nityavani daily in Mumbai. She has presented a research paper on Mumbai-based Kannada fiction at PUKAR in Mumbai.

Besides, she was the president of Srijana, a forum of women writers in Kannada in Mumbai for two years. During her tenure, she had organized seminars, book releases and workshops in collaboration with the Anuvada Academy, Bangalore.

Her published works include 'Alamapanah', translated from the Hindi version of the Urdu novel of the same name by Rafia Manzurul Amin and it was brought out Bhagirathi Prakashana in 1994, translation of Margaret Mitchell's great Classic 'Gone With The Wind' published by Ankita Pustaka, Bangalore in 2004, translation of Mary Shelly's Classic, 'Frankenstein' published by Ankita Pustaka, Bangalore in 2007 and many others.
LanguageKannada
Release dateAug 12, 2019
ISBN9789385545733
Gone With The Wind

Read more from Shyamala Madhav

Related to Gone With The Wind

Related ebooks

Reviews for Gone With The Wind

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Gone With The Wind - Shyamala Madhav

    http://www.pustaka.co.in

    ಗಾನ್ ವಿತ್ ದ ವಿಂಡ್

    Gone With The Wind

    Author :

    ಶ್ಯಾಮಲಾ ಮಾಧವ

    Shyamala Madhav

    For more books
    http://www.pustaka.co.in/home/author/shyamala-madhav

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಒಂದು ಮಾತು

    ವಿಶ್ವಸಾಹಿತ್ಯದಲ್ಲಿ ಆತ್ಮಪೂರ್ವ ಕೃತಿಯಾಗಿ ಖ್ಯಾತಿ, ಜನಪ್ರಿಯತೆಯ ಶಿಖರಕ್ಕೇರಿಸ’ಗಾನ್ ವಿತ್ ದ ವಿಂಡ್’ ನನ್ನ ಮನದಲ್ಲಿ ಅಚ್ಚಳಿಯದ ಶಬ್ಧಚಿತ್ರವಾಗಿ ಮೂಡಿನಿಂತ ಮಹತ್ ಕೃತಿ. ಜಗತ್ತಿನಾದ್ಯಂತಯ ಮಿಲಿಯಾಂತರ ಓದುಗರಂತೇ ನನ್ನನ್ನೂ ಪ್ರಭಾವಿತಳಾಗಿಸಿದ ಈಕೃತಿ ಕನ್ನಡ ಓದುಗರನ್ನು ತಲುಪಲೆಂಬ ನನ್ನ ಆಕಾಂಕ್ಷೆಯ ಸಾಕಾರವೇ ಈ ನನ್ನ ಕನ್ನಡಾನುವಾದ.

    ಅಮೇರಿಕಾದ ಅಟ್ಲಾಂಟ್ ಸಂಜಾತೆ, ಲೇಖಕಿ ಮಾರ್ಗರೆಟ್ ಮಿಶೆಲ್ ಸೃಷ್ಟಿಸಿದ ಈ ಕರತಿ, ಅಲ್ಲಿನ ದಕ್ಷಣ ನಾಡು ಕೌಂಟಿಯ ಚೆಲುವೆ ಸ್ಕಾರ್ಲೆಟ್‍ಳ ರಮ್ಯಾದ್ಬುತ ಚಿತ್ರಣದೊಂದಿಗೆ, ಅಂದಿನ ಅಂತರ್ಯುದ್ದದ: ಈ ಯುದ್ಧ ಕೆಡವಿ ನಾಶಗೈದ ಆ ಮೌಲಿಕ, ಸಂಸ್ಕಾರಪೂರ್ಣ ಸಮಾಜದ: ಕಾಡಿದ ಬರ, ಬಡತನ. ಕೊಲೆ, ಸುಲಿಗೆಗಳ, ಮತೆ ನಡೆದ ಪುನರುಜ್ಜೀವನದ ವಿಹಂಗಮ ನೋಟವನ್ನು ಚಿತ್ರಪರದೆಯಂತೆ ಓದುಗರೆದುರು ತೆರೆದಿಡುತ್ತದೆ.

    ಅಮಿತ ಜೀವನೋತ್ಸಾಹದ, ಬಯಸಿದ್ದನ್ನು ಪಡೆದೇ ತೀರುವ ಚಲದ, ಇಚ್ಚೆ ಹಾಗೂ ಪ್ರಾಪ್ತಿ ಎರಡೂ ಭಿನ್ನ ವಿಷಯಗಳು ಎಂಬುದನ್ನೇ ಅರಿಯದ ಹದಿಹರೆಯದ ಮೋಹಕ ಚೆಲುವೆ ಸ್ಕಾರ್ಲೆಟ್! ಈ ಮನಸ್ಥಿನಿಯ ರಮ್ಯಲೋಕ ಯುದ್ಧದ ಕಾವಿಗೆ ಕರಗಿ ಕುಸಿದಾಗ, ಆ ಬೂದಿಯಿಂದೆದ್ದು ಬಂದು, ಇನ್ನಿಲ್ಲದ ರ್ಸಥೈರ್ಯ, ಛಲದೊಂದಿಗೆ ಪುನಃ ತನ್ನ ಮನೆ, ಭೂಮಿಯನ್ನು ಎತ್ತಿ ನಿಲ್ಲಿಸವು ಸ್ಯಾರ್ಲೆಟ್‍ಳ ಯಶೋಗಾಥೆಯೊಂದಿಗೆ ಅವಳು ಕಳಕೊಳ್ಳುವ ಜೀವನ ಮೌಲ್ಯಗಳ ಕರುಣಕಥೆಯ ಅದ್ಬುತ ಚಿತ್ರಣ ಎಲ್ಲಿದೆ. ಕೌಂಟಿಯ ತಮ್ಮ ಭೂಮಿಯಲ್ಲಿ ಹತ್ತಿಯ ಹೊನ್ನ ಬೆಳೆ ಬೆಳೆವ ತಂದೆ ಜೆರಾಲ್ಡ್ ಒಹಾರಾನ ಭೂಮಿ ಪ್ರೇಮವನ್ನು ತನ್ನ ಹದಿಹರೆಯದ ಹುಚ್ಚಿನಲ್ಲಿ ಅರಿಯದೆ ಹೋದರೂ, ಮುಂದೆ ಅದೇ ಹಿಡಿಮಣ್ಣನೆತ್ತಿ ಇನ್ನೆಂದಿಗೂ ಹಸಿದಿರಲಾರೆನೆಮದು ಶಪಥಗೈದು, ಐರಿಶ್ ರಕ್ತ ಹೌದೆನ್ನುವಂತೆ ಮಣ್ಣಿನ ಮಗಳಾಗಿ ಬೆಳೆದ ಸ್ಕಾರ್ಲೆಟ್‍ಳ ಸಾಧನೆಯ ಅಮರಗಾಥೆಯಿದು.

    ಸ್ಕಾರ್ಲೆಟ್‍ಳಂತೇ ರಮ್ಯಾದ್ಬುತ ಪ್ರಚಂಡ ವ್ಯಕ್ತಿತ್ವದ, ಆತ್ಯಾಕರ್ಷಕ ಮಾತುಗಳ ರ್ಹೆಟ್ ಬಟ್ಲರ್, ಸೌಮ್ಯ ಸೌಜನ್ಯದಾಂತರ್ಯದಲ್ಲಿ ದೈರ್ಯ, ಸ್ಥೆರ್ಯ ಮೈಗೂಡಿಸಿಕೊಂಡ ಮೆಲನಿ, ಸಾಹಿತ್ಯ, ಕನಸುಗಳಲ್ಲೇ ಕಳೆದು ಹೋಗಿ ಪೂರ್ವೇತಿಹಾಸದಿಂದ ಹೊರಬರಲಾರದ ಆಶ್‍ಲಿ: ಶಿಸ್ತು,  ಸೇವೆಯೇ ಉಸಿರಾದ ತಾಯಿ ಎಲೆನ್ ಈಹಾರಾ: ಈಹಾರಾ ಮನೆತನಕ್ಕೆ ತಮ್ಮನ್ನೇ ತೆತ್ತುಕೊಂಡ ಶಿಸ್ತು, ನಿಷ್ಟೆಯ ಪ್ರತಿರೂಪಗಳಾದ ಮ್ಯಾಮಿ, ಪೋರ್ಕ್: ಚೈತನ್ಯೋತ್ಸಾಹದಿಂದ ಪುಟದ ಟಾರ್ಲ್‍ಟನ್ ಅವಳಿಗಳು, ಆಂಟ್ ಪಿಟ್, ಬೆಲ್, ಡಾ, ಮಿಡ್, ಮೆರಿವೆದರ್ ದಂಪತಿಗಳು, ಇತರ ಹಲವು ಪಾತ್ರಗಳೊಂದಿಗೆ ನಮ್ಮ ಮನದಲ್ಲಿ ಅಚ್ಚೊತ್ತಿದ ಚಿತ್ರಗಳಾಗುತ್ತಾರೆ.

    ‘ಗಾನ್ ವಿತ್ ದ ವಿಂಡ್’ ಎಮ್ಯ ಕಥೆಯಂತೆನಿಸಿದರೂ, ಅದು ಸಾರುವ ಪ್ರಬಲ ಯುದ್ಧ ವಿರೋಧೀ ಸಂದೇಶ ನಿಚ್ಚಳವಾಗಿದೆ. ಕಾದುವವರ ಪಾಲಿಗೆ ಎಲ್ಲ ಯುದ್ಧಗಳೂ ಪವಿತ್ರವೇ! ಯುದ್ಧಗಳನ್ನು ಆರಂಬಿದುವವರು ಅವನ್ನು ಪವಿತ್ರವಾಗಿಸದಿದ್ದಲ್ಲಿ ಹೋರಾಡುವ ಮೂರ್ಖತನ ತೋರುವವರಾರು? ಎಂದು ಸಂಘಟನೆಯ ಧ್ಯೇಯದ ಬಗ್ಗೆ ಅಣಕವಾಡುವ ರ್ಹೆಟ್‍ನ ಬಿಚ್ಚು ನುಡಿಗಳು, ಸಾರ್ವಕಾಲಿಕ ಸತ್ಯ.

    ಗಾನ್ ವಿತ್ ದ ವಿಂಡ್ ಕೃತಿಯನ್ನು ನಾನು ಅನುವಾದಿಸಿ ವರ್ಷಗಳೇ ಕಳೆದರೂ ಪ್ರಕಟಣೆಯ ಭಾಗ್ಯ ಕಾಣಲಿಲ್ಲ. ಉತ್ತ ಪರಭಾಷಾ ಕೃತಿಗಳು ಕನ್ನಡಕ್ಕೆ ಬರಬೇಕೆನ್ನುವ ಸವಿಮಾತು ಒಂದೆಡೆ ಸ್ವಾಭಿರುಚಿಯಿಂದ ವರ್ಷವೊಂದರೊಳಗೆ ಅನುವಾದಿದಿ ಸಿದ್ದವಿಟ್ಟ ಈ ಜಗತ್ಪ್ರಸಿದ್ದ, ಅತಿ ಜನಪ್ರಿಯಕೃತಿ ಬೆಳಕು ಕಾಣದ ಘೋರ ಕತ್ತಲರ ಇನ್ನೊಂದೆಡೆ! ನನ್ನ ಆತ್ಮೀಯರಾದ ಶ್ರೀ ಕೆ.ಟಿ.ಗಟ್ಟಿ ಅವರು, ನಿಮ್ಮ ಕೃತಿಯ ಮಹಾಗಾತ್ರವೊಂದೇ ಸಮಸ್ಯೆ", ಎಂದನ್ನುತ್ತಾ ಮನದೊಳಗೇ ನನ್ನ ಯತ್ನಕ್ಕೆ ಬೆಳಕು ಕಾಣಿಸುವ ವಿಚಾರ ಮಂಥನ ನಡೆಸಿದ್ದರು. ‘ಅಂಕಿತ ಪುಸ್ತಕ’ದ ಪ್ರಕಾಶ್ ಕಂಬತ್ತಳ್ಳಿಯವರನ್ನು ಸಂಪರ್ಕಿಸಿ, ನನ್ನೀ ಹಂಬಲ ಕೈಗೊಡುವಂತೆ ಮಾಡಿದ ಶ್ರೇಯ ಅವರದಾಗಿದೆ.

    ಲೇಖಕಿ ಮಾರ್ಗರೆಟ್ ಮಿಶೆಲ್, ಕೃತಿ ರಚಿಸಿ ಹತ್ತು ವರ್ಷಗಳ ವಳಿಕ ಗಾನ್ ವಿತ್ ದ ವಿಂಡ್ ಬೆಳಕು ಕಂಡಂತೆ, ನನ್ನೀ ಅನುವಾದವೂ ಬೆಳಕು ಕಾಣಲು ಹತ್ತು ವರ್ಷ ತಗಲಿತು.ಮೂಲಕೃತಿಯ ಕಥಾವಸ್ತು, ಪ್ರಕೃತಿಚಿತ್ರ, ಪಾತ್ರಚಿತ್ರನ, ಎಲ್ಲವೂ ಅದ್ಬುತ ದೃಶ್ಯಚಿತ್ರವಾಗಿ, ಓದುತ್ತಿದ್ದಂತೆ ನನ್ನ ಮನದಲ್ಲಿ ಅಚ್ಚೋತ್ತಿ ಉಳಿದಿದೆ. ಅಮಿತ ಜೀವನೋತ್ಸಾಹದ, ಮನಸ್ವಿನಿ ಸ್ಕಾರ್ಲೆಟ್‍ಳ ಯಶೋಗಾಥೆಯೊಂದಿಗೆ, ಅವಳು ಕಳಕೊಳ್ಳುವ ಜೀವನಮೌಲ್ಯಗಳ ಕರುಣಕಥೆಯ ಅ ಅದ್ಬುತ ಚಿತ್ರಣವನ್ನು ಉಳಿದೆಲ್ಲ ಪಾತ್ರ ವೈಭವದೊಂದಿಗೆ ನನ್ನ ಕನ್ನಡ ಓದುಗರೆದುರು ಸಾಕಾರ ಪಡಿಸುವ ನನ್ನ ಹಂಬಲ ಇಲ್ಲಿ ತೆರೆದುಕೊಂಡಿದೆ.

    ನನ್ನೀ ಕೃತಿ ಬೆಳಕು ಕಾಣುವಲ್ಲಿ ಶ್ರೀ.ಕೆ.ಟಿ.ಗಟ್ಟಿಯವರ ಸಹೃದಯ ಸಹಕಾರ, ಬೆಂಬಲ, ಆಸರೆಯನ್ನು ಕೃತಜ್ಞೆ ಎಮಬೊಂದು ಮಾತಿನಿಂದ ಸರಿದೂಗಲಾಗದು. ಆ ಧೀಮಂತ ಕರ್ತೃತ್ವ ಶಕ್ತಿಗೆ........

    ಹಸ್ತಪ್ರತಿಯನ್ನು, ತಮ್ಮ ಅಸೌಖ್ಯದಲ್ಲೂ ಆಸಕ್ತಿಯಿಂದ ಸಮಪೂರ್ಣವಾಗಿ ಓದಿ, ಮೆಚ್ಚಿ ಪ್ರೋತ್ಸಾ ಹಿಸಿದ ದಿವ್ಯಚೇತನ ನನ್ನ ಪ್ರಿಯ ತಂದೆಗೆ-

    ತನ್ನ ಅನುಪಮ ಆಂಗ್ಲಭಾಷಾ ಸಂಪತ್ತಿನಿಂದ ಬಾಲ್ಯದಿಂದಲೂ ನನ್ನಲ್ಲಿ ಕೌತುಕ ಮೂಡಿಸಿದ ನನ್ನಮ್ಮನಿಗೆ-

    ಸಾಹಿತ್ಯಾಸಕ್ತಿ ಸಂಬಂಧ ಸನ್ನೆಲ್ಲ ಖರ್ಚು, ವೆಚ್ಚ, ದುಂದುಗಾರಿಕೆಯನ್ನು ಸಹನೆಯಿಂದ ಮೌನವಾಗಿ ಭರಿಸಿದ ನನ್ನವರಿಗೆ-

    ಇಂಬಾಗಿ ನಿಂತ ನನ್ನ ತುಷಾರನಿಗೆ-

    ನನ್ನನ್ನು ಓದಿ, ವಿಮರ್ಶಿಸಿ, ವ್ಯಕ್ತಿತ್ವ ವಿಕಸನಕ್ಕೆ ಕಾರಣರಾದ ನನ್ನವರಾದ ನನ್ನ ಗೆಳತಿಯರಿಗೆ-

    ನಲ್ಮೆಯಿಂದ ಹರಿಸಿ, ಪ್ರೋತ್ಸಾಹಿಸಿದ ಶ್ರೀ ಬಲ್ಲಾಳರಿಗೆ-

    ಕೃತಿಪ್ರಕಾಶನದ ಮಹತ್ಕಾರ್ಯವನ್ನು ಕೈಗೆತ್ತಿಕೊಂಡು ಪೂರೈಸಿದ ಸಹೃದಯಿ ಪ್ರಕಾಶ್ ಕಂಬತ್ತಳ್ಳಿ ಅವರಿಗೆ…

    ಹಾಗೂ ಓದುಗರಿಗೆ ನನ್ನ ಹೃದಯ ತುಂಬಿದ ಪ್ರೀತಿಯ ಈ ಕಾಣ್ಕೆ.

    --ಶ್ಯಾಮಲಾ ಮಾಧವ

    ಮಾರ್ಗರೆಟ್ ಮಿಶೆಲ್

    1900ರ ನವೆಂಬರ್ 8 ರಂದು ಅಟ್ಲಾಂಟಾದಲ್ಲಿ ಜನಿಸಿದ ಮಾರ್ಗರೆಟ್ ಮಿಶ್ರೆಲ್, ಬಾಲ್ಯದಲ್ಲೇ ತನ್ನ ಸುತ್ತ ಬೆಳಸಿಕೊಂಡ ಗೆಳತಿಯರ ಗುಂಪಿನೊಂದಿಗೆ, ಕತೆ ಕಟ್ಟಿ ಹೇಳುವ, ನಾಟಕಗಳನ್ನು ಬರೆದು ಆಡಿಸುವ ಹವ್ಯಾಸ ಬೆಳೆಸಿಕೊಂಡಿದ್ದಳು. ಮಾರ್ಗರೆಟ್‍ಗೆ ತನ್ನ ಅಟ್ಲಾಂಟಾ ನಗರಿಯ ಮೇಲೆ ಅನನ್ಯ ಪ್ರೀತಿ, ಅನ್ಯೋನ್ಯ ಸಂಬಂಧ ಬೆಳೆಸಿಕೊಂಡಿದ್ದ ಮಿಶೆಲ್‍ಳಿಗೆ ನಗರದ ಚರಿತ್ರೆ ಹಾಗೂ ಅಂತರ್ಯುದ್ಧದ ವರ್ಣನೆಗಳು ಎಳವೆಯಲ್ಲೇ ಅವಳನ್ನು ಸೆಳೆದುವು.

    ತಂದೆ-ತಾತಿಗಳೊಂದಿಗೆ ಸ್ನೇಹಕೂಟಗಳಿಗೆ ತೆರಳುತ್ತಿದ್ದ ಪುಟ್ಟ ಮಾರ್ಗರೆಟ್, ಅಲ್ಲಿನ ಉತ್ಸಾಹೀ ಕಂಠಗಳಿಂದ ಯುದ್ಧ, ಇತಿಹಾಸದ ರೋಚಕ ಕಥೆಗಳನ್ನು ಕೇಳುತ್ತಿದ್ದಳು. ಧರ್ಮನಿಷ್ಕಳಾಗಿದ್ದು, ತನ್ನ ಐಂಶ್ ಮೂಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ತಾಯಿ ಶ್ರೀಮತಿ ಮಿಶೆಲ್ ತನ್ನ ಮಕ್ಕಳಲ್ಲೂ ಈ ಅಭಿಮಾನವನ್ನು ಮೂಡಿಸುವಲ್ಲಿ ಸಫಲಳಾಗಿದ್ದಳು. ಸ್ತ್ರೀಯರ ಮತದಾನದ ಹಕ್ಕುಗಳಿಗಾಗಿ ರೂಪುಗೊಂಡ ಸಂಘದ ಸ್ಥಾಪಕ ಸದಸ್ಯೆಯಾಗು ಜಾರ್ಜಿಯಾದಲ್ಲಿ ಸ್ತ್ರೀ ಸ್ವಾತಂತ್ರ್ಯದ ಪರ ವೈಚಾರಿಕ ಅಲೆಯೆಬ್ಬಿಸಿದ ಆಕೆ ಆರ್ಥಿಕ ಸ್ವಾತಂತ್ರ್ಯದ ಮಹತ್ವವನ್ನೂ ಮನಗಾಣಿಸಿದ್ದಳು.

    ಶಾಲಾಭ್ಯಾಸದ ಬಳಿಕ ಸ್ಮಿತ್ ಕಾಲೇಜ್ ನಲ್ಲಿ ವೈದ್ಯ ವಿದ್ಯಭ್ಯಾಸಕ್ಕಾಗಿ ಸೇರಿಕೊಂಡ ಮಾರ್ಗರೆಟ್, ಲೆಫ್ರಿನೆಂಟ್ ಕ್ಲಿರ್ಪ್ ಹೆನ್ರಿ ಎಂತಾತನನ್ನು ಪ್ರೇಮಿಸಿದರೂ, ಯುದ್ಧದಲ್ಲಿ ಅತನ ಸಾವಿನಿಂದ ಹತ ಹೃದಯೆಯಾದಾಕೆ. ಆ ನಂತರ ಕಿನಾರ್ಡ್ ಅಪ್‍ಶಾನನ್ನು ವಿವಾಹವಾದಳು. ದುರಂತವಾಗಿ ಪರಿಣಮಿಸಿದ ಈ ಮದುವೆಯು ಕೆಲವೇ ತಿಂಗಳೊಳಗೆ ಮುರಿದುಬಿತ್ತು. ದಾಂಪತ್ಯ ವಿರಸ, ಬಲಾತ್ಕಾರದಿಂದ ಮುಕ್ತಿ ದೊರಕಿತು.

    1925 ಜುಲೈ 4 ರಂದು ಮಾರ್ಶ್‍ನನ್ನು ಮದುವೆಯಾದಳು. ಪುಟ್ಟದೊಂದು ಅವಘಡದಿಂದ ಕಾಲಿನ ಮಣಿಗಂಟು ಓದಲು ಪುಸ್ತಕಗಳನ್ನು ತಂದಿತ್ತ. ನಿರಂತರ ಓದಿನ ಕೊನೆಗೆ ಪುಸ್ತಕಗಳೆಲ್ಲ ಮುಗಿದಾಗ, ಇನ್ನೂ ಬೇಕಿದ್ದರೆ ನೀನೇ ಬರೆದು ಓದಬೇಕಷ್ಟೇ ಎಂದಾತ ಅಂದಾಗ ಏನು ಬರೆಯಲೆಂಬ ಪ್ರಶ್ನೆಗೆ, ನಿನಗೆ ತಿಳಿದಿರುವುದನ್ನು ಬರೆ, ಎಂದು ಮಾರ್ಶ್ ಸೂಚಿಸಿದ. ಮೊದಲಿಗೆ ನೋಟ್‍ಪುಸ್ತಕದ ಹಾಳೆಯ ಕೊನೆಯ ಪುಟದಿಂದ ಹಿಂದಕ್ಕೆ ಬರೆಯಲಾರಂಭಿಸಿದ ಆಕೆಗೆ ರೆಮಿಂಗ್ಟನ್ ಟೈಫ್‍ರೈಟರ್ ಒಂದನ್ನು ಮಾರ್ಶ್ ತಂದಿತ್ತ. ಅಂದಿನಿಂದ ಹತ್ತು ವರ್ಷಗಳ ಅವಧಿಯಲ್ಲಿ ಈ ಚರಿತ್ರಾರ್ಹ ಕೃತಿ ಪೂರ್ಣಗೊಂಡ ಪ್ರಕಟವಾಗಯಿತು. ಅಂತರ್ಯುದ್ಧ ಹಾಗೂ ಇನ್ನಿತರ ಐತಿಹಾಸಿಕ ಮಾಹಿತಿಗಳನ್ನು ಸುಸಂಬದ್ಧವಾಗಿ ನಿರೂಪಿಸುವಲ್ಲಿ ಮಿಶೆಲ್ ಈ ಕಾಲವನ್ನು ಕಳೆದಳು.

    1935 ಫೆಬ್ರವರಿ ತಿಂಗಳಲ್ಲಿ ಮ್ಯಾಕ್ಮಿಲನ್ ಪಬ್ಲಿಷರ್ಸ್‍ನ ಸಂಪಾದಕ ಹೆರಾಲ್ಡ್ ಲಾಥಮ್, ಹೊಸ ಲೇಖನ ಪ್ರತಿಬೆಯನ್ನರಸುತ್ತಾ ಅಟ್ಲಾಂಟಾಕ್ಕೆ ಬಂದಾಗ ಮಾರ್ಗರೆಟ್ ಮಿಶೆಲ್ ಸ್ವತಃ ಆತನಿಗೆ ಮಾರ್ಗದರ್ಶಕಿಯಾಗಿದ್ದಳು. ಆತನ ಕುತೂಹಲದ ಪ್ರಶ್ನೆಗೆ, ಕೃತಿಯ ಹಸ್ತಪ್ರತಿಯನ್ನು ತೋರಿಸಿದಳು. ಹಸ್ತಪ್ರತಿಯ ಅವಲೋಜನದಿಂದಲೇ ಅದರ ಮಹತ್ವವನ್ನು ಮನಗೊಂಡ ಪ್ರಕಾಶಕರ ಉತ್ಸಾಹ, ಮುತುವರ್ಜಿಯಿಂದಾಗಿ ಪ್ರಥಮ ಪ್ರತಿ ಮಾರುಕಟ್ಟೆಗೆ ಪ್ರವೇಶಿಸುವ ಮುನ್ನವೇ ‘ಗಾನ್ ವಿತ್ ದ ಮಿಂಡ್’ ಅಪಾರ ಯಶಸ್ಸನ್ನು ಕಂಡಿತು. 1949 ಆಗಸ್ಟ್ 11 ರಂದು ತನ್ನ ಮನೆಯ ಮುಂದಿನ ಪೀಚ್‍ಟ್ರೀ ರಸ್ತೆ ದಾಟುತ್ತಿದ್ಧಾಗ ಟ್ಯಾಕ್ಸಿಯೊಂದು ಢಿಕ್ಕಿಯಾದದ್ದೇ ಕಾರಣವಾಗಿ ಆಗಸ್ಟ್ 16 ರಂದು ನಿಧನಳಾದಳು.

    ಮಿಶೆಲ್‍ಳ ಮಟ್ಟಿಗೆ ‘ಗಾನ್ ವಿತ್ ದ ವಿಂಡ್’ ಅಲ್ಲಿಗೇ ಮುಗಿದಿತ್ತು. ಸ್ಕಾರ್ಲೆಂಟ್ ಪುನಃ ರ್ಹೆಟ್‍ನನ್ನು ಪಡೆದಳೇ ಎಂಬ ಪ್ರಶ್ನೆಗೆ ಅವಳಲ್ಲಿ ಉತ್ತರವಿರಲಿಲ್ಲ, ಆದರೂ 1992ರಲ್ಲಿ ಅಲೆಕ್ಲಾಂಡ್ರಾ ರಿಪ್ಲೇ ಎಂಬ ಲೇಖಕಿ ಮಿಶೆಲ್‍ಳ ಕೃತಿಗೆ ‘ಸ್ಯಾರ್ಲೆಟ್’ ಎಂಬ ಉತ್ತರಾರ್ಧವನ್ನು ಬರೆದಳು.

    ಚಲನಚಿತ್ರವಾಗಿ ‘ಗಾನ್ ವಿತ್ ದ ವಿಂಡ್’

    ಅತ್ಯಂತ ಜನಪ್ರಿಯ ಚಿತ್ರವೆಂದು ದಾಖಲೆ ಸ್ಥಾಪಿಸಿದ ‘ಗಾನ್ ವಿತ್ ದ ವಿಂಡ್’ನ ನಿರ್ಮಾಣ ಒಂದು ದಂತಕಥೆಯಾಗುಳಿದಿದೆ.

    ಚಿತ್ರ ನಿರ್ಮಾಣದ ಹಕ್ಕುಗಳಿಗಾಗಿ ಕೃತಿಕರ್ತೆ ಮಿಶೆಲ್‍ಳಿಗೆ ನಿರ್ಮಾಪಕ ನೀಡಿದ ಮೊತ್ತ 50,000 ಡಾಲರ್‍ಗಳು. ಚಿತ್ರ ಬಿಡುಗಡೆಯಾದಾಗ ಆತ ಆಕೆಗೆ ಇನ್ನೊಂದು 50,000 ಡಿಸೆಂಬರ್ 15 ರಂದು ಅಟ್ಲಾಂಟಾದ ಗ್ರಾಂಡ್ ಥಿಯೇಟರ್‍ನಲ್ಲಿ ಚಲಚಿತ್ರದ ಪ್ರೀಮಿಯರ್ ಶೋ ಪ್ರದರ್ಶಿತವಾಯ್ತು. ಆರಂಭದಲ್ಲಿ ಚಿತ್ರ ನಿರ್ದೇಶಕನಾಗಿದ್ದ ಜಾರ್ಜ್ ಕ್ಯೂಕರ್‍ನನ್ನು ಕೈಬಿಟ್ಟು ವಿಕ್ಟರ್ ಪ್ಲಿಮಿಂಗ್‍ಗೆ ನಿರ್ದೇಶನದ ಹೊಣೆ ಒಪ್ಪಿಸಲಾಯ್ತು. ಚಿತ್ರದ ನಾಯಕಿ ಸ್ಕಾರ್ಲೆಟ್ ಒಹಾರಾಳ ಪಾತ್ರಕ್ಕೆ 1400 ಆರಂಭವಾಗುವವರೆಗೂ ಸ್ಕಾರ್ಲೆಟ್‍ಳ ಪಾತ್ರ ಆತ್ಕೆ ರಹಸ್ಯವಾಗಿರಿಸಲ್ಪಟ್ಟಿತು. ಬ್ರಿಟಿಶ್ ನಟಿ ವಿವಿಯಾನ್ ಲೇೈಯನ್ನು ಪ್ರಥಮ ಚಿತ್ರೀಕೃತ ದೃಶ್ಯವಾದ ಅಟ್ಲಾಂಟಾದ ಯುದ್ದ ಜ್ವಾಲೆಯ ಹಿನ್ನೆಲೆಯಲ್ಲಿ ಮೂಡಿಸಿ ಆ ಬೆಂಕಿಯ ಕಾವಿಗೆ ಆ ಹಸಿರು ಕಂಗಳು ಪ್ರಜ್ವಲಿಸಿದಾ ಕ್ಷಣವೇ ಅಲ್ಲಿ ಸ್ಕಾರ್ಲೆಂಟ್ ಒಹಾರಾ ಸಾಜಕಾರವಾದಳು.

    ನಟನಟಿಯರಿಗಾಗಿ ಇನ್ನಿಲ್ಲದ ಪರಿಪೂರ್ಣತೆಯ ಹುಡುಕಾಟ ನಡೆಸಿದ ನಿರ್ಮಾಪಕ ಡೇವಿಟ್ ಸೆಲ್ಹೆನಿಕ್‍ನಿಗೆ ರ್ಹೆಟ್ ಬಟ್ಲರ್‍ನ ಪಾತ್ರದಲ್ಲಿ ಮಾತ್ರ ಆಯ್ಕೆಯೇ ಉಳಿಯದಂತೆ ಸಾರ್ವಜನಿಕರ ಒಕ್ಕೊರಲಿನ ಅಭ್ಯಾರ್ಥಿಯಾಗಿ ಕ್ಲಾರ್ಕ್‍ಗೇಬಲ್ ಮಿಂಚಿದ. ಆಶ್‍ಲಿ ವಿಲ್ಕ್ಸ್‍ನ ಪಾತ್ರದಲ್ಲಿ ಲೆಸ್‍ಲೀ ಹೊವರ್ಡ್, ಮೆಲನಿಯಾಗಿ ಒಲಿವಿಯಾ ಡಿ ಹ್ಯಾವಿಲಾನ್, ಜೆರಾಲ್ಡ್ ಒಹಾರಾನ ಪಾತ್ರದಲ್ಲಿ ಥಾಮಸ್ ಮಿಸೆಲ್. ಎಲೆನ್ ಒಹಾರಾಳಾಗಿ ಚಾರ್ಬರಾ ಒನೀಲ್, ಮ್ಯಾಮಿಯಾಗಿ ಹ್ಯಾಟ್ಟೀ ಮಾಕ್‍ಡೇನಿಯೆಲ್, ಪೋರ್ಕ್‍ನ ಪಾತ್ರದಲ್ಲಿ ಆಸ್ಕರ್‍ಫೋಕ್, ಪ್ರಿನ್ಸಿಯಾಗಿ ಬಟರ್‍ಪ್ಲೈ ಮಾಕ್‍ಕ್ವೀನ್, ಬ್ರೆಂಟ್ ಹಾಗೂ ಸ್ಟೈವರ್ಟ್ ಟಾರ್ಲ್‍ಟನ್‍ರ ಪಾತ್ರಗಳಲ್ಲಿ ಫ್ರೆಡ್‍ಕ್ರೇನ್ ಹಾಗೂ ಜಾರ್ಜ್‍ರೀವ್ಸ್ ಇಂತಹ ಇನ್ನೂ ಹತ್ತು ಹಲವು ಅದ್ಬುತ ಪಾತ್ರನಿರ್ವಹಣೆ ಚಿತ್ರಕಥೆಯನ್ನು ಸಜೀವವಾಗಿಸಿದೆ. ಕಾದಂಬರಿಯನ್ನು ಸಂಪೂರ್ಣ ಅಳವಡಿಸಿದ್ದರೆ ಒಂದು ವಾರದ ಅವಧಿ ಯುದ್ದದ ಚಿತ್ರವಾಗುವಂತಿದ್ದುದರಿಂದ ಹಲವು ದೃಶ್ಯಯಗಳನ್ನೂ, ಪಾತ್ರಗಳನ್ನೂ ಕೈಬಿಟ್ಟು ಚಿತ್ರದ ಅವಧಿಯನ್ನು 31/2 ಗಂಟೆಗಳಿಗಿಳಿಸಲಾಯ್ತು. ಕುಡಿತ, ಬಲಾತ್ಕಾರ, ಅನೀತಿ, ಹಾದರದ ವಿಷಯಗಳಿದ್ದ ಕಥೆ ಚಿತ್ರನಿರ್ಮಾಣಕ್ಕೆ ಸವಾಲೊಡ್ಡಿದಂತಿತ್ತು. ಆರಂಭದಲ್ಲಿ ಚಿತ್ರಕಥೆ ಬರೆದ ಸಿಡ್ಡಿ ಹೂವರ್ಡ್‍ನನ್ನು ಕೈಬಿಟ್ಟು ಇತರ ಐವರನ್ನು ಕ್ರಮಶಃ ನೇಮಿಸಲಾಯ್ತು.

    13 ಅಕಾಡೆಮಿ ಪ್ರಶಸ್ತಿಗಳಿಗೆ ನಾಮಾಂಕಿತವಾಗಿ, 8 ಪ್ರಶಸ್ತಿಗಳನ್ನೂ, ಇನ್ನೆರಡು ಫಲಕಗಳನ್ನು ‘ಗಾನ್ ವಿತ್ ದ ವಿಂಡ್’ ಪಡೆದುಕೊಂಡಿತು. ಉತ್ತಮ ಚಿತ್ರ, ಉತ್ತಮ ನಿರ್ದೇಶನ (ವಿಕ್ಟರ್ ಪ್ರಶಸ್ತಿಯಾಗಿ), ಉತ್ತಮ ಪೋಷಕ ನಟಿಯಾಗಿ ಮ್ಯಾಮಿಯ ಪಾತ್ರದಲ್ಲಿ ಹ್ಯಾಟ್ಟಿ ಮ್ಯಾಕ್‍ಡೇನಿಯಲ್‍ಗೆ (ಆಫ್ರಿಕನ್-ಅಮೆರಿಕನನ್ ಮಹಿಳೆಯೊಬ್ಬಳಿಗೆ ಸಿಕ್ಕ ಪ್ರಥಮ ಪುರಸ್ಕಾರ), ಉತ್ತಮ ಸಿನೆಮೊಟೊಗ್ರಫಿ. ಉತ್ತಮ ಒಳಾಂಗಣ ಚಿತ್ರಣ ಹಾಗೂ ಎರಡು ಸಮ್ಮಾನ ಫಲಕಗಳು-ನಿರ್ಮಾಪಕನ ವಿನ್ಯಾಸಕ್ಕಾಗಿ ವಿಲಿಯಮ್ ಕ್ಯಾಮರೂನ್ ಮೆನ್ಜಸ್‍ಗೆ ಹಾಗೂ ತಾತ್ರಿಕ ನಿರ್ವಹಣೆಗಾಗಿ ಡಾನ್ ಮಾಸ್‍ಗ್ರೇವ್‍ಗೆ ಪ್ರಶಸ್ತಿಪ್ರಧಾನವಾದವು.

    ಜನಪ್ರಿಯತೆ ಹಾಗೂ ವಿಶ್ವವಿಖ್ಯಾತಿಯ ದೃಷ್ಟಿಯಲ್ಲಿ ಇದನ್ನು ಮೀರಿಸಿದ ಚಿತ್ರ ಈವರೆಗೂ ತೆರೆಕಂಡಿಲ್ಲ.

    ‘ಗಾನ್ ವಿತ್‍ದ ವಿಂಡ್’ಚಿತ್ರದೊಂದಿಗೆ ತಳಕು ಹಾಕಿಕೊಂಡ ದುರಂತಗಳು

    ವಿವಿಯಾನ್ ಲೇ ತನ್ನ ಈ ಭಾಗ್ಯಕ್ಕಾಗಿ ಕೊನೆವರೆಗೂ ಮರುಗುವಂತಾಯ್ತು. ಚಿತ್ರ ನಿರ್ಮಾಣದ ದೀರ್ಘಾವಧಿಯ ‘ಟಾರಾ’ದ ವಾಸ, ನಿರಂತರ ಚಿತ್ರೀಕರಣವು ಈ ತಾರೆಯ ಆರೋಗ್ಯವನ್ನು ಕೆಡಿಸಿ, ಬಾರಿಬಾರಿಗೂ ಕ್ಷಯಪೀಡಿತಳಾಗಿ ಸಂಕಟ ಪಡುವತಾಯ್ತು. ಸ್ಕಾರ್ಲೆಟ್‍ಳಂತಹುದೇ ದುರ್ದಮ್ಯ ಛಲವಂತ ಆಕರ್ಷಕ ಪಾತ್ರಗಳಲ್ಲಿ ಮಿಂಚುತ್ತಾ, ಗೆ ಎರಡನೇ ಅಕಾಡೆಮಿ ಪ್ರಶಸ್ತಿ ಪಡೆದ ವಿವಿಯನ್ ತನ್ನ ಅನಾರೋಗ್ಯದೊಡನೆ ಹೋರಾಡುತ್ತಾ, ಅಸೀಮ ಉತ್ಸಾಹದೆದುರು ಕಾಯವು ಸೋತು, ಕೊನೆಗೂ54ರ ಪ್ರಾಯದಲ್ಲಿ ಕೊನೆಯುಸಿರೆಳೆದಳು.

    ಕ್ಲಾರ್ಕ್ ಗೇಬಲ್ (ರ್ಹೆಟ್‍ಬಟ್ಲರ್):- 1941ರಲ್ಲಿ ನೆವಡಾದಲ್ಲಿ ನಡೆದ ವಿಮಾನಾಪಘಾತದಲ್ಲಿ ತನ್ ಪ್ರಿಯೆ ಹಾಗೂ ಹೊಸ ಚಿತ್ರದ ಸಹನಟಿಯಾಗಿದ್ದ ಕೆರೋಲ್ ಲೊಂಬಾರ್ಡ್‍ಳನ್ನು ಕಳಕೊಂಡು ಹತಹೃದಯನಾದ ಕ್ಲಾರ್ಕ್ ಗೇಬಲ್‍ತಕ್ಷಣ ಸೈನ್ಯ ಸೇರಿ ವಿಮಾನದಳದಲ್ಲಿಎರಡು ವರ್ಷಗಳ ಸೇವೆಯ ಬಳಿಕ ಚಿತ್ರರಂಗಕ್ಕೇ ಮರಳಿದ. ‘ಗಾನ್ ವಿತ್ ದ ವಿಂಡ್’ ಗಳಿಸಿದ ಅಪಾರ ಲಾಭದಲ್ಲಿ ತನಗೆ ತಕ್ಕ ಪಾಲು ದೊರೆಯದಿದ್ದ ಬಗ್ಗೆ ಅಸಮಾಧಾನದಿಂದಿದ್ದ ಗೇಬಲ್ ಎಂ.ಜಿ.ಎಂ. ತೊರೆದು ಸ್ವತಂತ್ರವಾಗಿ ನಟಿಸಲಾರಂಭಿಸಿದರೂ ತಕ್ಕ ಯಶಸ್ಸು ಕಾಣದಾಯ್ತು. 1960ರಲ್ಲಿ ಯುನೈಟೆಡ್ ಆರ್ಟಿಸ್ಟ್‍ನ ಗಾಗಿ ನೆವಡಾದ ಉರಿಬಿಸಿಲಲ್ಲಿ ಸಾಹಸದೃಶ್ಯಗಳಲ್ಲೂ ತಾನೇ ನಟಿಸಿ ದಣಿದ ಗೇಬಲ್ ಚಿತ್ರೀಕರಣ ಮುಗಿದ ಎರಡು ದಿನಗಳಲ್ಲಿ ಹೃದಯಾಘಾತಕ್ಕೊಳಗಾಗಿ ಮತ್ತೆ ಹನ್ನೆರಡು ದಿನಗಳಲ್ಲಿ ಕೊನೆಯುಸಿರಳೆದಾಗ ಚಿತ್ರರಂಗದ ಈ ದೊರೆ ಇನ್ನಿಲ್ಲವಾದರೂ, ರ್ಹೆಟ್ ಉಳಿದ.

    ಲೆಸ್‍ಲೀ ಹೊವಾರ್ಡ್ (ಆಶ್‍ಲಿ ವಿಲ್ಕ್ಸ್):- ತನ್ನ ಪಾತ್ರದ ಆಶ್‍ಲಿಯಂತೆ ಚಿತ್ರದ ಯಾವುದೇ ಪ್ರಶಸ್ತಿಗೆ ಪಾತ್ರನಾಗುವಲ್ಲಿ, ಇಲ್ಲವೇ ನಾಮಾಂಕಿತನಾಗುವಲ್ಲಿ ವಿಫಲನಾದ ಲೆಸ್‍ಲೀ ಹೂವರ್ಡ್, ಇದನ್ನೇನೂ ಗಣಿಸದೆ ತನ್ನಭಿರುಚುಯ ನಿರ್ಧೇಶನದ ಕ್ಷೇತ್ರಕ್ಕೆ ಕಾಲಿಟ್ಟರೂ, ನಟನಾಗಿ ಗಳಿಸಿದ ಸಾಫಲ್ಯ ಇಲ್ಲೂ ಆತನಿಗೆ ದೊರೆಯದೆ ಹೋಯ್ತು. ಬ್ರಿಟಿಶ್ ಕೌನ್ಸಿಲ್ ಪರವಾಗಿ ಪೋರ್ಚುಗಲ್‍ಗೆ ಉಪನ್ಯಾಸಕನಾಗಿ ತೆರಳಿದ ಆತ, ಇಂಗ್ಲೆಂಡ್‍ಗೆ ಹಿಂತಿರುಗಿವ ವಿಮಾನಯಾನದಲ್ಲಿ ತಪ್ಪು ತಿಳಿವಳಿಕೆಯಿಂದ ಜರ್ಮನ್ ವಿಮಾನಗಳು ನಡೆಸಿದ ವಾಯುದಾಳಿಯಲ್ಲಿ ಹತನಾದಾಗ ಆತನ ಪ್ರಾಯ 53 ವರ್ಷ.

    ವಿಕ್ಟರ್ ಪ್ಲೆಮಿಂಗ್ (ನಿರ್ದೇಶಕ):- ಕೀರ್ತಿ, ಯಶಸ್ಸಿನ ಶಿಖರಕ್ಕೇರಿದ ನಂತರ ಮುಂದಿನ ಹೆಜ್ಜೆ ಅವರೋಹಣವೆಂಬಂತೆ, ಈ ಚಿತ್ರಕ್ಕೆ ಸಂಬಂಧಿಸಿದ ಖ್ಯಾತನಾಮರನೇಕರಂತೆ ನಿರ್ದೇಶಕ ಫ್ಲೆಮಿಂಗ್ ಕೂಡ, ಮುಂದೆ ಅವನತಿಯನ್ನೇ ಕಾಣುವಂತಾಯ್ತು. ಸದಾ ತನ್ನಿಚ್ಚೆಯನ್ನೇ ಸಾಧಿಸ ಬಯಸಿ ತಂಡದ ನಿಷ್ಠುರ ಕಟ್ಟಿಕೊಳ್ಳುತ್ತಿದ್ದ ಫ್ಲೆಮಿಂಗ್, ಚಿತ್ರ ಬಿಡುಗಡೆಯಾದಾಗ ನಿರ್ಮಾಪಕ ಸೆಲ್ಜೆನಿಕ್‍ನೊಡನೆಯೂ ಅಸಮಾಧಾನವನ್ನು ಬೆಳೆಸಿಕೊಂಡ ಕಾರನ, ಮುಂದೆ ಚಿತ್ರರಂಗದಲ್ಲಿ ಯಶಸ್ಸು ಅವನಿಗೊದಗದೆ ಹೋಯ್ತು.

    ಡೇವಿಡ್ ಸೆಲ್ಜೆನಿಕ್ (ಚಿತ್ರ ನಿರ್ಮಾಪಕ) :- ಚಿತ್ರದೊಡನೆ ಸಾಫಲ್ಯ, ಯಶಸ್ಸಿನ ಪರಾಕಾಷ್ಠೆಗೇರಿದ ಸೆಲ್ಜೆನಿಕ್‍ಗೆ ಅದೇ ಉರುಲಾಗಿ, ಮುಂದೆ ಆತನ ರಚನಾತ್ಮಕ ಶಕ್ತಿ ಕುಂಠಿತವಾಯ್ತು. ಯಾವುದೇ ಚಿತ್ರವನ್ನು ಕೈಗೆತ್ತಿಕೊಂಡರೂ, ಅದು ‘G,W.T.W.’ ನ್ನು ಮಿರಿಸಲೆಂಬ ಆತನ ಆಕಾಂಕ್ಷೆ ಈಡೇರದಾಗಿ ಚಿತ್ರ ನಿರ್ಮಾಣ ಇಳಿಮುಖವಾಯ್ತು. ತಾನೇ ಕುದುರಿ, ‘Spellbound’, ‘Duel in the sun’, ‘A Farewell to arms’ ನಂತಹ ಉತ್ತಮ ಚಿತ್ರಗಳು ಬಂದರು ಅವಾವುದೂ ನಂತೆ ‘G,W.T.W.’ ದಂತ ಕಥೆಯಾಗಲಿಲ್ಲ. ಇದರೊಂದಿಗೆ ಚಿತ್ರನಿರ್ಮಾಣಕ್ಕೆ ವಿದಾಯ ಹೇಳಿದ ಈ ಪ್ರಸಿದ್ಧ ನಿರ್ಮಾಪಕ 1965ರಲ್ಲಿ ಚಿರನಿದ್ರೆಗೆ ಸಂದ.

    ಸಿಡ್ಡಿ ಹೊವೆರ್ಡ್:- ಚಿತ್ರಕಥೆ ಬರೆದ ಸಿಡ್ನಿ ಹೊವರ್ಡ್, ಪೆನ್ಸಿಲ್ವೇನಿಯಾದ ತನ್ನ ಹೊಲದಲ್ಲಿ ತಾನೇ ನಡೆಸಲೆತ್ನಿಸಿದ ಟ್ರಾಕ್ಟರ್‍ನಿಂದ ಆಕಸ್ಮಿಕವಾಗಿ ಗೋಡೆಗೆ ಜಜ್ಜಲ್ಪಟ್ಟು ದುರ್ಮರಣವನ್ನಪ್ಪಿದ.

    ಒನಾ ಮನ್ ಸನ್:- ಅಟ್ಲಾಂಟಾ ಮ್ಯಾಡಮ್ ಎಂದು ಬೆಲ್‍ಳ ಪಾತ್ರದಲ್ಲಿ ಪ್ರಸಿದ್ಧಳಾದ ಈಕೆ, ಮುಂದೆ ಇಂತಹುದೇ ಪಾತ್ರಗಳು ತನ್ನನ್ನರಸಿ ಬಂದುದರಿಂದಾಗಿ ನೊಂದು, 49ರ ಪ್ರಾಯದಲ್ಲಿ ನಿದ್ರಾಮಾತ್ರೆಗಳ ಸಹಾಯದಿಂದ ತನ್ನ ಜೀವನವನ್ನು ತಾನೇ ಕೊನೆಗೊಳಿಸಿಕೊಂಡಳು.

    ಜಾರ್ಜ್ ರೀವ್ಸ್ :- ಟಾರ್ಲ್‍ಟನ್ ಅವಳಿಗಳಲ್ಲೊಬ್ಬನ ಪಾತ್ರದ ಜಾರ್ಜ್ ರೀವ್ಸ್ ಮುಂದೆ ಟಿ.ವಿ ಧಾರಾವಾಹಿಯ ‘ಸುಪರ್ ಮ್ಯಾನ್’ ಆದ ಬಳಿಕ, ತನ್ನ ಪ್ರತಿಭೆ ನಷ್ಟವಾಯ್ತೆಂದುಕೊಂಡು ಚಿತ್ತಶಾಂತಿ ಕಳಕೊಂಡು, ತನ್ನ ಗುಂಡಿಗೆ ತನ್ನನ್ನೇ ಬಲಿಯಾಗಿಸಿಕೊಂಡು ಮೃತನಾದ.

    ಲಾರಾ ಹೋಪ್:- ಅಂಟ್ ಪಿಟಿಪ್ಯಾಟ್‍ಳ ಪಾತ್ರದ ಲಾರಾ ಹೋಪ್ ಚಿತ್ರ ಬಿಡುಗಡೆಯಾದ ಎರಡು ವರ್ಷಗಳ ಬಳಿಕ ಕಿಡ್ನಿಯ ತೊಂದರೆಯಿಂದ ಸಾವನ್ನಪ್ಪಿದಳು.

    ಮಾರ್ಗರೆಟ್ ಮಿಶೆಲ್:- ಕೃತಿಕರ್ತೆ ಮಿಶೆಲ್, ತನ್ನ ಕಾದಂಬರಿಯಲ್ಲಿ ತಾನು ಅಮರವಾಗಿಸಿದ ಮನೆಯೆದುರಿನ ಪೀಚ್ ಟ್ರೀ ರಸ್ತೆಯನ್ನು ದಾಟುತ್ತಿರುವಾಗ ನಿಯಂತ್ರಣ ತಪ್ಪಿದ ಕ್ಯಾಬ್ ಒಂದು ಢಿಕ್ಕಿ ಹೊಡೆದು, ಮತ್ತೈದು ದಿನಗಳಲ್ಲಿ 1949 ಆಗಸ್ಟ್ 16 ರಂದು ತನ್ನ 49ರ ಪ್ರಾಯದಲ್ಲಿ ನಿಧನಳಾದಳು.

    ಗಾನ್ ವಿತ್ ದ ವಿಂಡ್
    ಪಾತ್ರ ಪರಿಚಯ

    ಸ್ಕಾರ್ಲೆಟ್ ಇಹಾರಾ – ಕಥಾ ನಾಯಕಿ; ಕೌಂಟಿಯ ಮೋಹಕ ಮನಸ್ವಿನಿ ಕನ್ಯೆ.

    ರ್ಹೆಟ್ ಬಟ್ಲರ್ – ಕಥಾ ನಾಯಕ; ಆಕರ್ಷಕ ವ್ಯಕ್ತಿತ್ವದ ಧನಾಢ್ಯ; ಸಮಾಜ ಬಹುಷ್ಕøತ.

    ಜೆರಾಲ್ಡ್ ಇಹಾರಾ - ಸ್ಕಾರ್ಲೆಟ್‍ಳ ತಂದೆ: ಟಾರಾದ ಒಡೆಯನಾದ ಕೌಂಟಿಯ ಜಮೀನ್ದಾರ.

    ಎಲೆನ್ ಒಹಾರಾ - ಸ್ಕಾರ್ಲೆಟ್‍ಳ ತಾಯಿ; ಶಿಸ್ತು, ಸೇವೆಯೇ ಉಸಿರಾದ ಟಾರಾದ ಒಡತಿ.

    ಸ್ಯುಲೆನ್, ಕ್ಯಾರಿನ್ - ಸ್ಕಾರ್ಲೆಟ್‍ಳ ಸೋದರಿಯರು.

    ಮ್ಯಾಮಿ – ಎಲೆನ್‍ಗೂ, ಒಹಾರಾ ಮನೆತನಕ್ಕೂ ತನ್ನನ್ನೇ ತೆತ್ತುಕೊಂಡ ಸ್ತ್ರೀ, ಶಿಸ್ತಿನ ಪ್ರತಿರೂಪ.

    ಪೋರ್ಕ್ – ಜೆರಾಲ್ಡ್ ಒಹಾರಾನ ಮುಖ್ಯ ಪರಿಚಾರಕ; ನಂಬಿಗಸ್ಥ ಅಳು.

    ಬ್ರೆಂಟ್. ಸ್ಪ್ಯವರ್ಟ್. ಟಾಮ್, ಬಾಯ್ಡ್ - ಸ್ಕಾರ್ಲೆಟ್‍ಳ ಒಡನಾಡಿಗಳಾದ ಟಾರ್ಲ್‍ಟನ್ ಅವಳಿಗಳು.

    ಹೆಟಿ, ಕ್ಯಾಮಿಲಾ, ಬೆಟ್ಸಿ, ರ್ಯಾಂಡಾ – ಟಾರ್ಲ್‍ಟನ್ ಅವಳಿ ಸೋದರಿಯರು.

    ಆಶ್‍ಲಿ ವಿಲ್ಕ್ಸ್ - ಸ್ಕಾರ್ಲೆಟ್‍ಳ ಕಲ್ಪತ ಪ್ರೇಮಿಯಾದ ಬಾಲ್ಯದ ಒಡೆಯ.

    ಹನಿ, ಇಂಡಿಯಾ – ಮಿಲ್ಕ್ಸ್ ಸೋದರಿಯರು.

    ಬಿಟ್ರನ್ ಟಾರ್ಲ್‍ಟನ್ – ಆಶ್ಚಪ್ರಿಯಳಾದ ಶಕ್ಯ್ತತ್ಸಾಹದ ಮಹಿಳೆ: ಅವಳಿಗಳ ತಾಯಿ.

    ಟಾಮ್ – ವಿಲ್ಕ್ಸ್ ಗಳ ಅಡಿಗೆಯಾಳು.

    ಚಾಲ್ರ್ಸ್ ಮತ್ತು ಮೆಲನಿ - ವಿಲ್ಕ್ಸ್ ಬಂದುಗಳಾದ ಹ್ಯಾಮಿಲ್ಟನ್ ಸೋದರ, ಸೋದರಿಯರು.

    ಆಂಟ್‍ಪಿಟಿ ಪ್ಯಾಟ್ ಹ್ಯಾಮಿಲ್ವನ್ – ಚಾಲ್ರ್ಸ್, ಮೆಲನಿಯರ ಅಟ್ಲಾಂಟಾ ವಾಸಿ ಅಂಟ್.

    ಅಂಕಲ್ ಹೆನ್ರಿ - ಪಿಟಿಪ್ಯಾಟ್‍ಳ ಸೋದರ.

    ಅಂಕ್ಲ ಪೀಟರ್ – ಮನೆಯವರಲ್ಲೊಬ್ಬನಂತಿರುವ, ಪಿಟಿಪ್ಯಾಟ್‍ಳ ಗಾಡಿಯಾಳು.

    ಶ್ರೀ ಮತ್ತು ಶ್ರೀಮತಿ ಕ್ಯಾಲ್ವರ್ಟ್, ಮಕ್ಕಳು-ರ್ವೇಪೋರ್ಡ್, ಕೇಡೆ, ಕ್ಯಾತ್‍ಲೀನ್-ನೆರೆಯ ಕುಟುಂಬದ ಒಹಾರಾ ಮನೆಯ ಮಿತ್ರರು.

    ಗ್ಯಾಂಡ್‍ಮಾ ಪೋಂಟೇನ್, ಜೋ, ಅಲೆಕ್ಸ್, ಟೋನಿ- ಟಾರಾದ ನೆರೆಯ ಬಂಧುಗಳು,

    ಪ್ರಾಂಕ್ ಕೆನಡಿ – ಕೌಂಟಿಯ ಅವಿವಾಹಿತ; ಒಹಾರಾ ಹುಡುಗಿಯರ ಗೆಳೆಯ.

    ಸ್ಮಾಲಿ, ಡಿಮಿಟಿ ಮನ್ರೋ- ಒಹಾರಾ ಹುಡುಗಿಯರ ಗೆಳತಿಯರು.

    ಮಿಸ್ಟರ್ ಮ್ಯಾಕ್‍ರೇ - ಫಯಟವಿಲಾದ ಕಿವುಡ ಮುದುಕ; ಮಾಜಿ ಯೋಧ.

    ಡಿಲ್ಸ-ಪೋರ್ಕ್ ವರಿಸಿ ತಂದ ಕರಿಯಾಳು; ಪ್ರಿಸ್ಸಿ-ಡಿಲ್ಲಿಯ ಮಗಳು.

    ಡಾ. ವಿೂಡ್ ದಂಪತಿ, ಮೆರಿವೆದರ್ ದಂಪತಿ, ಶ್ರೀಮತಿ ಎಲ್ಸಿಂಗ್, ಶ್ರೀಮತಿ ವೈಟಿಂಗ್-ಅಂಟ್ ಪಿಟಿಯ ಗೆಳತಿಯರು; ಅಟ್ಲಾಂಟಾದ ಗಣ್ಯರು.

    ಫಿಲ್, ಡಾರ್ಸಿಮೂಡ್-ಡಾ. ವಿೂಡ್‍ರ ಮಕ್ಕಳು.

    ಬೆಲ್ ವ್ಯಾಟ್ಲಿಂಗ್ – ಅಟ್ಲಾಂಟಾದ ಬೆಲೆವೆಣ್ಣು.

    ರೆನಿಪಿಕಾರ್ಡ್, ಫ್ಯಾನಿ ಎಲ್ಸಿಂಗ್, ಮೈಬೆಲ್ ಮೆರಿವೆದರ್, ಮ್ಯಾಕ್‍ಲ್ಯೂರ್ ಹುಡುಗಿಯರು- ಮೆಲನಿಯ ಗೆಳತಿಯರು.

    ಲೆವಿ-ಮೆರಿವೆದರ್‍ಳ ಗಾಡಿಯಾಳು.

    ಜನರಲ್ ಜಾನ್‍ಸ್ಟ್‍ನ, ಪ್ರೆಸಿಡೆಂಟ್ ಡೇವಿಸ್, ಅಲೆಕ್ಸ್ ಸ್ಟೀಫನ್ಸ್, ಜನರಲ್ ಲೀ, ಕ್ಯಾಪ್ಟನ್ ಆಶ್‍ಬರ್ನ್, ಲೆಫ್ಡಿನೆಂಟ್ ಡಲ್ಲಾಸ್ ಮ್ಯಾಕ್‍ಲ್ಯೂರ್, ಜನರಲ್ ಬ್ಯೂ ರಿಗಾರ್ಡ್-ಸಂಘಟನೆಯ ಆಧಾರ ಸ್ಥಂಭಗಳು.

    ಜನರಲ್ ಶರ್ಮನ್ – ಯಾಂಕೀ ಸೈನ್ಯಾಧಿಕಾರಿ.

    ಜನರಲ್ ಶರ್ಮನ್ –ಯಾಂಕೀ ಸ್ಯನ್ಯಾಧಿಕಾರಿ.

    ಮಗು ವೇಡ್- ಸ್ಕಾರ್ಲೆಟ್-ಚಾಲ್ರ್ಸ್ ಹ್ಯಾಮಿಲ್ಟನ್‍ರ ಮಗು.

    ಮಗು ಎಲ್ಲಾ- ಸ್ಕಾರ್ಲೆಟ್-ಪ್ರಾಂಕ್ ಕೆನಡಿಯರ ಮಗು.

    ಮಗು ಬಾನಿ ಬ್ಲೂ ಬಟ್ಲರ್ - ಸ್ಯಾರ್ಲೆಟ್-ರ್ಹೆಟ್ ಮಗು.

    ವಿಲ್-ಗಾಯಾಳುವಾಗಿ ಒಂದು ಟಾರಾದಲ್ಲಿ ನೆಲೆನಿಂತ ಯೋಧ.

    ಗವರ್ನರ್ ಬುಲಕ್-ರಿಪಬ್ಲಿಕನ್ ಗವರ್ನರ್.

    ಆಂಟ್ ಪಾಲಿನ್, ಆಂಟ್ ಯುಲಾಲಿ-ಚಾಲ್ರ್ಸ್‍ಟನ್‍ನಲ್ಲಿನ ರ್ಹೆಟ್‍ನ ಅಂಟಿಯರು.

    ಬ್ಯೂ-ಆಶ್‍ಲಿ-ಮೆಲಿನಿಯರ ಮಗು.

    ಆರ್ಚೀ- ಕೈದಿಯಾಗಿದ್ದು ಸೈನ್ಯ ಸೇರಿ, ಯುದ್ದ ಮುಗಿದಾಗ ಬಂದು ಮೆಲನಿಯ ರಕ್ಷಕನಾಗಿ ನಿಂತಾತ.

    ಕ್ಯಾಪ್ಟನ್ ಟಾಮ್ – ಯಾಂಕೀ ಕ್ಯಾಪ್ಟನ್.

    ಜಾನಿ ಗಲೆಗರ್ - ಸ್ಕಾರ್ಲೆಟ್‍ಳ ಮಿಲ್‍ನಲ್ಲಿ ಜೀತದಾಳು ಕೈದಿಗಳನ್ನು ದುಡಿಸುವ ಮೇಲ್ವಿಚಾರಕ.

    ಭಾಗ-1                        ಅಧ್ಯಾಯ – 1

    ಸ್ಕಾರ್ಲೆಟ್ ಒಹಾರಾ ಅಂತಹ ಅಸಾಮಾನ್ಯ ಚೆಲುವೆಯೇನೂ ಆಗಿರಲಿಲ್ಲ. ಆದರೆ, ಟಾರ್ಲ್‍ಟನ್ ಅವಳಿಗಳಂತೆ ಅವಳ ಮೊಹಕತೆಗೆ ಮಾರುಹೋವರು ಇದನ್ನೇನೂ ಅರಿಯುವಂತಿರಲಿಲ್ಲ. ಫ್ರೆಂಚ್ ಹಿನ್ನೆಲೆಯ ತನ್ನ ತಾಯಿಯ ನಾಜೂಕು ರೂಪುರೇಷೆಗಳೂ, ಐರಿಶ್ ತಂದೆಯ ಗಡಸು ಪ್ರತಿರೂಪಗಳೂ ಅವಳ ಮುಖದಲ್ಲಿ ಮಿಳಿತವಾಗಿದ್ದವು. ಚೂಪಾದ ಗದ್ದ, ಚಚ್ಚೌಕ ಗಲ್ಲಗಳ ಆ ಮುಖವು ನೋಡುವವರ ದೃಷ್ಟಿಯನ್ನು ಹಿಡಿದಿಡುವಂತಿತ್ತಿ. ಕಡುಕಪ್ಪಾದ ಕಣ್ರೆಪ್ಪೆಗಳ ನಸುಹಸಿರು ಕಂಗಳು ತುದಿಗಳಲ್ಲಿ ಕೊಂಚವೇ ಬಾಗಿದಂತಿದ್ದುವು. ದಕ್ಷಿಣದ ಸ್ತ್ರೀಯರು ಅತಿ ಎಚ್ಚರಿಕೆಯಿಂದ ಟೊಪ್ಪಿಗೆ, ಶಿರೋವಸ್ತ್ರಗಳಲ್ಲಿ ರಕ್ಷಿಸಿಕೊಂಡು ಬಂದಂತಹ ಮ್ಯಾಗ್ಮೋಲಿಯಾ ಬಿಳುಪಿನ ಅವಳ ಮುಖದಲ್ಲಿ ದಟ್ಟ, ಕಡುಕಪ್ಪು ಹುಬ್ಬುಗಳು ಎದ್ದು ಕಾಣುತ್ತಿದ್ದವು.

    ತನ್ನ ತಂದೆಯ ತೋಟದ ಮನೆ ‘ಟಾರಾ’ದ ಮೊಗಸಾಲೆಯ ತಂಪುನೆರಳಲ್ಲಿ, ಆ 1861ರ ಏಪ್ರಿಲ್‍ನ ಒಂದು ಪ್ರಖರ ಮಧ್ಯಾಹ್ನ, ಸ್ಟುವರ್ಟ್ ಹಾಗೂ ಬ್ರೆಂಟ್ ಟಾರ್ಲೆಟನ್‍ರೊಡನೆ ಸ್ಕಾರ್ಲೆಟ್ ಕುಳಿತಿದ್ದ ಧೃಶ್ಯ ನೋಡುವಂತಿತ್ತು. ಹಸಿರುವರ್ಣದ ಹೊಗಳಿದ್ದ ತನ್ನ ಹನ್ನೆರಡು ಗಜದ ಮಸ್ಲಿನ್ ಉಡುಪನ್ನು ಹರವಿಕೊಂಡು ಕುಳಿತಿದ್ದ ಸ್ಕಾರ್ಲೆಟ್, ತನ್ನ ತಂದೆ ಅಟ್ಲಾಂಟಾದಿಂದ ತಂದಿದ್ದ ಹಸಿರು ಮೊರೊಕ್ಕೊ ಚಪ್ಪಲಿಗಳನ್ನು ಧರಿಸಿದ್ದಳು. ಉಡುಪಿನ ವಿನ್ಯಾಸವು ಮೂರು ಪ್ರಂತಗಳಲ್ಲೂ ಅನನ್ಯವಾಗಿದ್ದ ಆಹದಿನೇಳಿಂಚಿನ ಕಟಿಯನ್ನೂ. ಅದರ ಮೇಲ್ಕಡೆ ಬಿಗಿಯಾಗಿ ಎದ್ದು ಕಾಣುವ- ಹದಿನಾರು ವರ್ಷಕ್ಕೇ ಚೆನ್ನಾಗಿ ರೂಪುಗೊಂಡಿದ್ದ-ವಕ್ಷೋಜಗಳನ್ನೂ ತೋರುವಂತಿತ್ತು. ಆದರೆ, ಅವಳ ವಿಸ್ತøತ ಉಡುಪಿನ ಸಭ್ಯತೆಯಾಗಲೀ, ತಲೆಯ ಹಿಂಭಾಗದಲ್ಲಿ ನಯವಾಗಿ ಬಾಚಿ ಗಂಟು ಕಟ್ಟಿದ್ದ ಕೂದಲಾಗಲೀ, ಮಡಿಲಲ್ಲಿ ಮೌನವಾಗಿ ಒರಗಿಸಿಕೊಂಡಿದ್ದ ಪುಟ್ಟ ಬಳಿಯ ಹಸ್ತಗಳಾಗಲೀ ಅವಳ ನಿಜವಾದ ಸ್ವಭಾವವನ್ನು ಅಡಗಿಸಿಡಲು ಅಸಮರ್ಥವೇ ಆಗಿದ್ದುವು. ಅವಳ ಸೌಮ್ಯ ಹೊರರೂಪಕ್ಕೆ ವ್ಯತಿರಿಕ್ತವಾಗಿ ಆ ಮುದ್ದಾದ ಮುಖದಲ್ಲಿನ ಹಸಿರು ಕಣ್ಣುಗಳು ಸ್ವೇಚ್ಚೆ, ಬಯಕೆಗಳನ್ನು ಬಿಂಬಿಸುವ ಮಡುಗಳಾಗಿದ್ದವು. ತಾಯಿಯ ಸೌಮ್ಯ ಎಚ್ಚರಿಕೆಯೂ, ಮ್ಯಾಮಿಯ ಬಿಗುವಾದ ಶಿಸ್ತುಗಾರಿಕೆಯೂ ಅವಳ ನಡತೆಯನ್ನು ರೂಪಿಸಿದ್ದರೂ, ಆ ಕಣ್ಣುಗಳು ಮಾತ್ರ ಅವಳವೇ ಆಗಿದ್ದವು.

    ಅವಳ ಅತ್ತಿತ್ತ ಆರಾಮವಾಗಿ ಕುಳಿತು ಹೊರಗಿನ ಬೆಳಕನ್ನು ದಿಟ್ಟಿಸುತ್ತಾ, ನಗುತ್ತಾ ಮಾತಾಡುತ್ತಿದ್ದ ಅವಳಿಗಳು, ಕುದುರೆ ದವಾರಿಯಿಂದ ಬಲಿಷ್ಠವಾದ ಕಾಲ್ಗಳಲ್ಲಿ ಮೊಣಕಾಲವರೆಗಿನ ಬೂಟುಗಳನ್ನು ಧರಿಸಿದ್ದರು. ಎತ್ತರವಾಗಿ ಧೃಢಕಾಯರಾಗಿದ್ದು, ಸೂರ್ಯನ ಬಿಸಿಲಿಗೆ ಮಾಗಿದ ಮೈಬಣ್ಣ, ಕಡುಕೆಂಪು-ಕಂದುಬರ್ಣದ ತಲೆಗೂದಲು, ನೀಲಿಕೋಟು ಹಾಗೂ ಸಾಸಿವೆ ವರ್ಣದ ಪ್ಯಾಂಟಿನಲ್ಲಿ ಆ ಅವಳಿಗಳು ಎರಡು ಹತ್ತುಯುಂಡೆಗಳಷ್ಟು ಸಮರೂಪರಾಗಿ ತೋರುತ್ತಿದ್ದರು.

    ಹೊರಗೆ ಅಂಗಳದಲ್ಲಿ ಹಸಿದರಿನ ಹಿನ್ನೆಲೆಯಲ್ಲಿ ಬಿಳಿಹುಗಳು ರಾಶಿಯನ್ನೇ ಹೊತ್ತ ಪೊದರುಗಳ ಮೇಲೆ ಸೂರ್ಯರಶ್ನಿ ಓರೆಯಾಗಿ ಬಿದ್ದತ್ತು. ಅವಳಿಗಳ ಎರಡು ದೊಡ್ಡ ಕುದುರೆಗಳೂ, ಅವುಗಳ ಕಾಲ್ಗಳ ಸುತ್ತ ಅವರ ಎಳೆಯ ಬೇಟೆನಾಯಿಗಳೂ, ಅವುಗಳಿಂದ ದೂರ, ಧೀರ ಗಾಂಭೀರ್ಯದಿಂದ ತನ್ನೊಡೆಯರು ಮನೆಗೆ ಊಟಕ್ಕೆ ಹೊರಡುವುದನ್ನೇ ಸಹನೆಯಿಂದ ಕಾಯುತ್ತಿದ್ದ ಕಪ್ಪು ಚುಕ್ಕೆಗಳ ಮತ್ತೊಂದು ನಾಯಿಯೂ ಅಲ್ಲಿದ್ದುವು. ಕುದುರೆಗಳು ತಮ್ಮೊಡೆಯರ ಕೂದಲ ಕೆಂಚುಬಣ್ಣವನ್ನೇ ಹೊಂದಿದ್ದುವು.

    ಈ ಬೇಟೆನಾಯಿಗಳು, ಕುದುರೆಗಳು ಹಾಗೂ ಅವರೊಡೆಯರ ನಡುವೆ ಅವರ ಸತತ ಸಹಚರ್ಯೆಗಿಂತಲೂ ಅಳವಾದೊಂದು ಅನುವಂಧ ಬೆಳೆದು ಬಂದಿತ್ತು. ಆರೋಗ್ಯದಿಂದ ಹೊಳೆವ, ಅತ್ಯತ್ಸಾಹಸ, ಅದಮ್ಯ ಚಟುವಟಿಕೆಯ ಅಪಾಯಕಾರಿ ಜೀವಗಳಾದರೂ ತಮ್ಮೊಡನೆ ವ್ಯವಹರಿಸ ಬಲ್ಲವರೊಡನೆ ಸೌಜನ್ಯಪೂರ್ವಕವಾಗಿ, ಮಧುರವಾಗಿ ನಡಕೊಳ್ಳವಂತಹವರೂ ಆಗಿದ್ದರು.

    ಶೈಶವದಿಂದಲೇ ಕೈಕಾಲಿಗೆ ಆಳುಗಳಿದ್ದು, ಜಹಗೀರಿನ ಆರಾಮ ಜೀವನವನ್ನು ಅನುಬವಿಸಿದವ ರಾದರೂ, ಆ ಮುಖಗಳು ದುರ್ಬಲ ಮೃದುತ್ವವನ್ನೇನೂ ತೋರುತ್ತಿರಲಿಲ್ಲ. ಹೊರಗಿನ ವೈಶಾಲ್ಯದಲ್ಲಿ ಜೀವಿಸುವ, ಜಾಗೃತವೂ, ಸತ್ವಪೂರ್ಣವೂ, ಶಕ್ತಿಯುತವೂ ಆದ ಈ ವ್ಯಕ್ತಿತ್ವಗಳಿಗೆ ಪುಸ್ರಕಗಳಲ್ಲಿರುವ ನಿರಸಕ್ತಿಯ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿ ಬಂದಿರಲಿಲ್ಲ. ಕ್ಲೇಟನ್‍ನ ಉತ್ತ ಜಾರ್ಜಿಯಾ ಪ್ರಾಂತ್ಯದಲ್ಲಿನ ಜನಜೀವನವು ಇನ್ನೂ ಹೊಸದಾಗಿತ್ತು, ಆಗಸ್ಟಾ, ಸಾವನಾ, ಆಟ್ಲಾಂಟಾಗಳ ಮಟ್ಟಕ್ಕೆ ಹೋಲಿಸಿದರೆ ಒರಟಾಗಿಯೂ ಇತ್ತು. ದಕ್ಷಿಣದ ನಿಧಾನಸ್ಥ, ಹಳೆಯ ಪೆಂಪರೆಯ ಜನರು ಉತ್ತರ ಜಾರ್ಜಿಯಾದವರನ್ನು ಅವಗಣನೆಯಿಂದ ಕಾಣುತ್ತಿದ್ದರು. ಆದರೆ ಉತ್ತೆ ಜಾರ್ಜೆಯಾದಲ್ಲಿ ಶಾಸ್ತ್ರೀಯ ವಿದ್ಯಾಭ್ಯಾಸದ ಕೊರತೆ ನಾಚಿಕೊಳ್ಳಬೇಕಾದ ವಿಷಯವೇನೂ ಆಗಿರಲಿಲ್ಲ. ಉತ್ತಮ ಹತ್ತಿಬೆಳೆ ಬೆಳೆಯುವುದು, ಚೆನ್ನಾಗಿ ಕುದುರೆ ಸವಾರಿ ಮಾಡುವುದು, ಕೋವಿಯ ನಿಶಾನಿ ತಪ್ಪದಂತೆ ಪ್ರಯೋಗಿಸುವುದೇ ಮುಂತಾದವು ಮಹತ್ವದ ವಿಷಯಗಳಾಗಿದ್ದವು.

    ಈ ವಿಷಯಗಳಲ್ಲಿ ಟಾರ್ಲ್‍ಟನ್ ಅವಳಿಗಳ ಸಾಧನೆ ಅಸಾಧಾರಣವಾಗಿತ್ತು. ಹಾಗೆಯೇ ಪುಸ್ತಜಕಗಳಲ್ಲಿ ಅಡಕವಾದ ವಿಷಯಗಳನ್ನು ಕಲಿಯುವುದರಲ್ಲಿ ಅವರ ವಿಫಲತೆಯೂ ಅಷ್ಟೇ ಕುಖ್ಯಾತವಾಗಿತ್ತು. ಈ ಪ್ರಾಂತ್ಯದಲ್ಲಿ ಅತ್ಯಧಿಕ ಧನ, ಕುದುರೆ ಹಾಗೂ ಒತ್ತೆಯಾಳುಗಳಿದ್ದ ಮನೆತನ ಆವರದಿದ್ದರೂ, ನೆರೆಯ ಕಡುಬಡವರಿಗಿದ್ದಷ್ಟು ವ್ಯಾಕರಣ ಜ್ಞಾನವೂ ಅವರಿಗಿರಲಿಲ್ಲ.

    ಈ ಕಾರಣದಿಂದಲೇ ಇಂದಿಲ್ಲಿ ‘ಟಾರಾ’ ದ ಪೋರ್ಟೊಕೋದಲ್ಲಿ ಸಮಯ ಕಳೆವ ಹುನ್ನಾರಿನಲ್ಲಿ ಅವರಿದ್ದರು. ಜಾರ್ಜೆಯಾ ವಿಶ್ವವಿದ್ಯಾಲಯ ಅದೇ ತಾನೇ ಅವರನ್ನು ಹೊರಹಾಕಿತ್ತು. ಈ ಎರಡು ವರ್ಷಗಳಲ್ಲಿ ಅವರು ನಾಲ್ಕನೆಯ ಬಾರಿಗೆ ಹೊರಹಾಕಲ್ಪಟ್ಟ ವಿದ್ಯಾಲಯ ಇದಾಗಿತ್ತು. ಅವರ ಹಿರಿಯ ಸೋದರ ಅವಳಿಗಳಾದ ಟಾಮ್ ಹಾಗೂ ಚಾಯ್ಟಾರು, ತಮ್ಮಂದಿರಿಗೆ ಸ್ವಾಗತವಿರದಲ್ಲಿತಾವೂ ಇರಲಾರೆವೆಂದು ಅವರೊಡನೆ ಹೊರಟು ಬಂದಿದ್ದರು. ತಮ್ಮ ಈ ವಿಕ್ರಮ ಅವಳಿಗಳನ್ನು ಎಂಜಿಸಿದಂತೇ ವರ್ಷದ ಹಜಿಂದೆ ತನ್ನ ‘ಫಯಟ್ಟವಿಲ್ಲಾ’ ಮಹಿಳಾ ವಿದ್ಯಾಯವನ್ನು ಬಿಟ್ಟ ಬಳಿಕ ಮನಘಪೂರ್ವಕ ಒಂದಾದರೂ ಪುಸ್ತಕ ತೆರೆದಿರದಿದ್ದ ಸದಕಾರ್ಲೆಟ್‍ಳನ್ನೂ ಅವರಷ್ಟೇ ರಂಜಿಸಿತ್ತು.

    ನಿಮಗೇನೂ ಚಿಂತೆಯಿಲ್ಲ, ಬಲ್ಲೆ, ಆದರೆ ಬಾಯ್ಡ್? ಅವನಿಗೆ ಆಸಕ್ತಿ ಇದೆಯಲ್ಲ? ನೀವಿಬ್ಬರೂ ಅವನನ್ನು ವರ್ಜೀನಿಯಾ, ಅಲಬಾಮಾ, ದಕ್ಷಿಣ ಕೆರೊಲಿನಾ ಮೆತ್ತಿಗ ಜಾರ್ಜಿಯಾ ವಿಶ್ವವಿದ್ಯಾಲದಿಂದಲೂ ಹೊರಗೆಳೆದಿದ್ದಿರಿ. ಹೀಗಾದರೆ ಅವನು ವಿದ್ಯಾಭ್ಯಾಸ ಮುಗಿಸಿದಂತೆಯೇ ಎಂದಳು.

    ಈ! ಅದೇನೂ ದೊಡ್ಡದಲ್ಲ. ಹೇಗೂ ಟರ್ಮ್ ಮುಗಿವ ಮೊದಲೇ ನಾವೆಲ್ಲ ಮನೆಗೆ ಹಿಂತಿರುಗುವುದೇ ಇತ್ತು.

    ಯಾಕೆ?

    ಯುದ್ದ! ಪೆದ್ದೇ! ಯುದ್ದ ಯಾವ ದಿನವೂ ಆರಂಭ ಆಗಬಹುದು!

    ಯುದ್ದವೇನೂ ನಡೆಯುವುದಿಲ್ಲವೆಂದು ನಿನಗೆ ಗೊತ್ತು ಸ್ಕಾರ್ಲೆಟ್ ಬೇಸರದಿಂದ ನುಡಿದಳು, ಅದೆಲ್ಲ ಬರೇ ಮಾತು. ವಾಶಿಂಗ್ಟನ್ ನಲ್ಲಿರುವ ನಮ್ಮ ಕಮಿಶನರ್, ಸಂಘಟನೆಯ ಬಗ್ಗೆ ಮಿಸ್ಟರ್ ಲಿಂಕನ್‍ರೊಡನೆ ಅನುಕೂಲಕರ ಒಪ್ಪಂದಕ್ಕೆ ಬರುವರೆಂದು ಆಶ್‍ಲಿ ವಿಲ್ಕ್ಸ್ ಮತ್ತು ಅವನ ತಂದೆ, ನಮ್ಮ ಪಪ್ಪನೊಡನೆ ಹೇಳುತ್ತಿದ್ದರು. ಅಲ್ಲದೆ ಯಾಂಕಿಗಳು ನಮಗೆ ಎಷ್ಟು ಹೆಸರುವರೆಂದರೆ ಯುದ್ದವು ದೂರದ ಮಾತು.

    ಏನು, ಯುದ್ದವಿಲ್ಲವೇ? ಅವಳಿಗಳು ಏನನ್ನೋ ಕಳಕೊಂಡರಂತೆ ಚೀರಿದರು. ಯಾಕಿಲ್ಲ? ಖಂಡಿತ ಯುದ್ದ ನಡೆದೇ ನಡೆಯುವುದು ಸ್ಟುವರ್ಟ್ ನುಡಿದ, ಯಾಂಕಿಗಳಿಗೆ ನಮ್ಮ ಭಯವೇನೋ ಇರಬಹುದು. ಆದರೆ ಜನರಲ್ ಬ್ಯೂರಿಗಾರ್ಡ್, ಪೋರ್ಟ್ ಸಮ್ಟರ್‍ನಿಂದ ಅವರನ್ನು ಹೊರಹಾಕಿದ ಮೇಲೆ, ಅದಕ್ಕೆದುರಾಗಿ ಅವರೀಗ ಹೋರಾಡಲೇಬೇಕು. ಇಲ್ಲವೇ, ಹೇಡಿಗಳೆಂದು ಕರೆಸಿಕೊಳ್ಳಬೇಕು. ಸಂಘಟನೆಯು-

    ಸ್ಕಾರ್ಲೆಟ್ ಅಸಹನೆಯಿಂದ ಮೂತಿ ಉದ್ದಮಾಡಿದಳು-

    ಇನ್ನೊಂದು ಬಾರಿ ನೀವು ಯುದ್ದದ ಹೆಸರೆತ್ತಿದರೆ ನಾನು ಸೀದಾ ಮನೆಯೊಳಗೆ ಹೋದಿ ಬಾಗಿಲು ಹಾಕಿಕೊಳ್ಳುವೆ.  ಈ ಯುದ್ಧವೆಂಬ ಶಬ್ದದಷ್ಟು ಯಾವುದೂ ನನ್ನನ್ನು ಬೇಸರಗೊಳಿಸಿಲ್ಲ. ಪಪ್ಪನಿಗಂತೂ ಬೇರೆ ಮಾತೇ ಇಲ್ಲ. ಅವರ ಗೆಳೆಯರೂ ಅಷ್ಠೇ! ಪೋರ್ಟ್ ಸಮ್ಟರ್, ರಾಜ್ಯದ ಹಕ್ಕುಗಳು, ಅಬ್ರಹಾಂ ಲಿಂಕನ್- ಇವೇ ಮಾತು. ಹುಡುಗರೂ ಅಷ್ಟೇ! ಬೇರೆ ಮಾತೇ ಇಲ್ಲದೆ, ಈ ಬಾರಿ ಯಾವ ಪಾರ್ಟಿಯಲ್ಲೂ ಮಜವಲ್ಲ. ಇನ್ನೊಮ್ಮೆ ಯುದ್ದದ ಹೆಸರೆತ್ತಿದರೆ ನಾನು ಎದ್ದು ಹೋಗುವೆ.

    ಅವಳ ಮಾತು ನಿಜವಿತ್ತು. ಅಂಭಾಷಣೆಯ ಕೇಂದ್ರಬಿಂದು ತಾನೇ ಆಗಿರದಿದ್ದಲ್ಲಿ, ಅಲ್ಲಿರುವುದು ಅವಳಿಂದ ಅಸಾಧ್ಯವೇ ಇತ್ತು. ಆದರೂ, ನಗುತ್ತಲೇ, ಕೆನ್ನೆಗುಳಿಗಳನ್ನು ಆಳವಾಗಿಸುತ್ತಲೇ, ಕಣ್ರೆಪ್ಪೆಗಳನ್ನು ಚಿಟ್ಟೆಗಳಂತೆ ಪಟಪಟಿಸುತ್ತಲೇ ಅವಳು ಹಾಗಂದಳು. ಅವಳ ಎಣಿಕೆಯಂತೆಯೇ ಹುಡುಗರು ಸಮ್ಮೋಹಿತರಾಗಿ ಅವಸರಿಂದಲೇ ಕ್ಷಮೆ ಯಾಚಿಸಿದರು. ಆದರ ಬಗ್ಗೆ ಅವರ ವಿಚಾರ ಇನಿತೂ ಕುಗ್ಗಲಿಲ್ಲ. ಎಷ್ಟಾದರೂ ಯುದ್ದವು ಗಂಡದರ ವಿಷಯ. ಅವಳ ನಿಲುವು ಸ್ತ್ರೀತ್ವವನ್ನು ಸ್ಪಷ್ಟಪಡಿಸುತ್ತದೆ. ಎಂದು ಅವರು ಅಂದುಕೊಂಡರು.

    ಪುನಃ ಕುತೂಹಲಿಯಾದ ಸ್ಕಾರ್ಲೆಟ್ ಕೇಳಿದಳು, ನೀವು ಶಾಲೆಯಿಂದ ಹೊರಹಾಕಲ್ಟಟ್ಟ ಬಗ್ಗೆ ನಿಮ್ಮಮ್ಮ ಏನು ಹೇಳಿದರು?

    ಹಿಂದಿನ ಅನುಭವದ ನೆನಪಿನಿಂದ ವಿಷಲಿತರಾದ ಹುಡುಗರು ಮುಖ ಬಾಡಿಸಿದರು. ಇನ್ನೂ ಏನೂ ಹೇಳುವ ಅವಕಾಶವಾಗಿಲ್ಲ. ಬೆಳಿಗ್ಗೆ ನಾವೆದ್ದು ಹೊರಟಾಗ ಮಮಾ ಇನ್ನೂ ಮಲಗಿದ್ದರು, ಸ್ಟುವರ್ಟ್ ನುಡಿದ.

    ರಾತ್ರಿ?

    ಕಳೆದ ರಾತ್ರಿ ನಮ್ಮ ಅದೃಷ್ಟ ಚೆನ್ನಿತ್ತು. ಕಳೆದ ತಿಂಗಳು ಕೆಂಟಕಿಯಲ್ಲಿ ಕೊಂಡ ಆ ಕುದುರೆ ಆಗಷ್ಟೇ ಮನೆಸೇರಿದ್ದು, ಮನೆಯಲ್ಲಿಡೀ ಕೋಲಾಹಲವೆದ್ದಿತ್ತು. ಅದೇನು ಭವ್ಯವಾಗಿದೆ, ಸ್ಕಾರ್ಲೆಟ್! ನಿಮ್ಮ ಪಪ್ಪನೊಡನೆ ಕೂಡಲೇ ಬಂದು ನೋಡುವಂತೆ ಹೇಳು. ಬರುವಾಗಲೇ ತನ್ನ ಮಾಲಿಯನ್ನು ಕಚ್ಚಿ, ಜೋನ್ಸ್‍ಬರೋದಲ್ಲಿ ಇದಿರುಗೊಳ್ಳಲು ಬಂದ ಕರಿಯರಿಬ್ಬರನ್ನು ತುಳಿದು, ಮನೆಯ ಅಶ್ವಾಲಯವನ್ನು ಕೆಡವಿ ಹಾಕಿ, ಮಮ್ಮಾನ ಹಳೆಯ ಕುದುರೆಯನ್ನು ಅರೆಜಿವ ಮಾಡಿತ್ತು. ಮಮಾ ಸಕ್ಕರೆ ತಿನಿಸುತ್ತಾ ಅಕ್ಕರೆಯಿಂದ ಮಾತನಾಡಿಸುತ್ತಿದ್ದರೆ, ಕರಿಯರೆಲ್ಲ ಕಣ್ಣಗುಡ್ಡೆಗಳು ಹೊರಚಾಚುವಂತೆ ಅಚ್ಚರಿಯಿಂದ ದಿಟ್ಟಿಸುತ್ತಿದ್ದರು. ಕುದುರೆಗಳನ್ನು ಮಮಾನಂತೆ ಮಣಿಸಬಲ್ಲವರು ಯಾರು ಇಲ್ಲ, ನಮ್ಮನ್ನು ಕಂಡೊಡನೆ ಮಮಮಾ ಹೇಳಿದ್ರು. ದೇವ್ರೇ! ಏನಿದು? ಪುನಃ ನೀವಿಲ್ಲಿ? ಈಜಿಪ್ಟ್‍ನ ಪ್ಲೇಗ್‍ಗಿಂತಲೂ ಕಂಟಕರು ನೀವು ಅಷ್ಟರಲ್ಲಿ ಆ ಕುದುರೆ ಕೆನೆದು ಗಮನ ಸೆಳೆದುದರಿಂದ ಮಮಾ ಹೇಳಿದ್ರು, ‘ತೂಲಗಿಲ್ಲಿಂದ! ಈ ಮುದ್ದು ಜೀವ ಗಾಬರಿಗೋಲ್ಲುತ್ತಿದೆ. ನಿಮ್ಮ್ನೆಲ್ಲ ಬೆಳಿಗ್ಗೆ ನೋಡ್ತೇನೆ ಹಾಗೆ ಬಜಾವಾಗಿ, ಬೆಳಿಗ್ಗೆ ಬಾಯ್ಡ್ ಒಬ್ಬನನ್ನೇ ಮಮಾನನ್ನು ನಿಭಾಯಿಸಲು ಬಿಟ್ಟು ನಾವೆಲ್ಲ ಹೊರಟುಬಂದೆವು."

    ಬಾಯ್ಡ್‍ಗೆ ಪೆಟ್ಟು ಬೀಳಬಹುದೂಂತೀರಾ? ಕೌಂಟಿಯ ಇತರರಂತೆ ಸ್ಕಾಲೆಧಟ್‍ಗಳಿಗೂ, ಚಿಕ್ಕಗಾತ್ರದ ಶ್ರೀಮತಿ ಟಾರ್ಲ್‍ಟನ್ ತನ್ನ ಬೆಳೆದ ಕುವರರನ್ನು ಹೊಡೆವ, ಅಗತ್ಯವಿದ್ದರೆ ಚಾಟಿಯಿಂದಲೆ ಅವರ ಬೆನ್ನು ಚುರುಕಾಗಿದುವ ವಿಷಯ ಸೇರದಾಗಿತ್ತು.

    ಬ್ರೀಟ್ರಿಸ್ ವಾರ್ಲ್‍ಟನ್ ಅತ್ಯಂತ ವ್ಯಸ್ತಳಾಗಿರುತ್ತಿದ್ದು, ವಿಶಾಲವಾದ ಹತ್ತಿಬೆಳೆಯ ಜಮೀನ್ದಾರಿಕೆ, ನೂರು ನೀಗ್ರೋಗಳು, ಎಂಡು ಮಕ್ಕಳಷ್ಟೇ ಅಲ್ಲವೆ ಪ್ರಾಂತ್ಯದಲ್ಲೇ ಅತಿದೊಡ್ಡ ಆಶ್ವಪಾಲನಾ ಕೇಂದ್ರವನ್ನೂ ಹೊಂದಿದ್ದಳು. ಶೀಘ್ರಕೋಪೊಯಾದ ಆಕೆ ತನ್ನ ನಾಲ್ವರು ಗಂಡುಮಕ್ಕಳ ಉಪಟಳದಿಂದ ಆಗಾಗ ವ್ಯಗ್ರಳಾಗುತ್ತಿದ್ದಳು. ಕುದುರೆಗಳನ್ನಾಗಲಿ, ಕರಿಯಾಳುಗಳನ್ನಾಗಲೀ ಎಂದೂ ಹೊಡೆಯದಿದ್ದರೂ, ಆಗೀಗ ತನ್ನ ಗಂಡುಮಕ್ಕಳಿಗೆ ಚಾಟಿಯ ರುಚಿ ಕಾಣುಸುವುದರಿಂದ ಕೆಡುಕೆನೂ ಇಲ್ಲವೆಂದು ಆಕೆ ನಂಬಿದ್ದಳು.

    ಇಲ್ಲ ಬಾಯ್ಡ್‍ಗೆ ಪಟ್ಟು ಬೀಳಲಿಕ್ಕಿಲ್ಲ ಎಲ್ಲರಿಗೂ ದೊಡ್ಡವನೂ, ಗಾತ್ರದಲ್ಲಿ ಚಿಕ್ಕವನೂ ಆದ್ದರಿಂ ಆತ ಪೆಟ್ಟು ತಿಂದುದೇ ಕಡಿಮೆ. ಮಹಾ ನಮ್ಮನ್ನು ಹೊಡೆಯುವುದನ್ನು ಇನ್ನಾದರೂ ನಿಲ್ಲಿಸಬೇಕು. ಓ ಗಾಡ್! ಇನ್ನೂ ಅರುವರ್ಷದವರಂತೆ ನಮ್ಮನ್ನು ನಡೆಸಿಕೊಳ್ಳುತ್ತಾರೆ!

    ನಾಳೆ ವಿಲ್ಕ್ಸ್ ಮನೆಯ ವನಭೋಜನಕ್ಕೆ ನಿಮ್ಮನ್ನು ಅದನ್ನೇ ಏರಿ ಬರುವರೇ?

    ಅವರೇನೋ ಅದನ್ನೇ ಬಯಸಬಹುದು. ಅಪ್ಪಾ ಮಾತ್ರ ಅದು ತುಂಬಾ ಅಪಾಯಕಾರಿ ಎನ್ನುತ್ತಾರೆ. ಹೇಗಿದ್ರೂ ಹುಡುಗಿಯರಿ ಬಿಡಲಿಕ್ಕಿಲ್ಲ. ಈ ಒಂದು ಪಾರ್ಟಿಗಾದ್ರೂ ಮರ್ಯಾದಾನ್ವಿತೆಯರಂತೆ ಕುದುರೆಗಾಡಿಯಲ್ಲೇ ಬರಬೇಕೆಂದು ಅವರ ಹಠ.

    ನಾಳೆ ಮಳೆ ಸುರಿಯದಿದ್ದರೆ ಸಾಕಿತ್ತು. ಮಳೆ ಸುರಿದು, ವನಭೋಜನ ಮನೆಯೋಗಿನ ಪಾರ್ಟಿಯಾಗಿ ಮಾರ್ಪಟ್ಟರೆ, ಆದರಷ್ಟು ಕೆಟ್ಟದಿನ್ನಿಲ್ಲ.

    ನಾಳೆ ಖಂಡಿತ ಮಳೆಯುರದು. ನೋಡಲ್ಲಿ! ಇದಕ್ಕಿಂತ ಕೆಂಪಗಿನ ಅಸ್ತಮಿಸುವ ಸೂರ್ಯನನ್ನು ನಾನು ಕಂಡದ್ದಿಲ್ಲ. ಅದೇ ಹವೆಯ ಬಗ್ಗೆ ಹೇಳುತ್ತದೆ.

    ಎದುರಿಗೆ ಅನಂತವಾಗಿ ಹರಡಿಕೊಂಡಿದ್ದ, ಅದೇ ತಾನೇ ಉತ್ತಿದ್ದ ಜೆರಾಲ್ಡ್ ಇಹಾರಾನ ಹತ್ತಿಬೆಳೆಯ ಜಮೀನಿನಾಚೆಗಿನ ಕೆಂಪು ದಿಗಂತದಲ್ಲಿಅವರ ದೃಷ್ಟಿ ನೆಟ್ಟಿತು. ಫ್ಲಿಂಟ್ ನದಿಯಾಚೆಗಿನ ಬೆಟ್ಟಗಳ ಹಿಂದೆ ಚೆಲ್ಲಾಡಿದ ಕೆಂಪಿನೋಕುಳಿಯ ಸೂರ್ಯಾಸ್ತದಲ್ಲಿ ಏಪ್ರಿಲ್ ತಿಂಗಳ ಶಾಖವು ನುಣುಪಾದ ಶೀತಲ ತೆರೆಯಾಗಿ ಮಾರ್ಪಡುತ್ತಿತ್ತು.

    ಇದ್ದಕ್ಕಿದ್ದಂತೆ ಸುರಿವ ಮಳೆಯ ಸುಖೋಷ್ಣತೆಯೊಂದಿಗೆ ವಸಂತ ಈ ಬಾರಿ ಬೇಗನೇ ಕಾಲಿಟ್ಟಿದ್ದು, ಪೀಚ್ ವೃಕ್ಷಗಳ ಹೂಗಳ ಗುಲಾಬಿವರ್ಣವೂ, ವನಸುಮಗಳ ಶ್ವೇತವರ್ಣವೂ ನದೀ ಕಣಿವೆಯನ್ನೂ, ಬೆಟ್ಟವನ್ನೂ ಆಚ್ಚಾದಿಸಿತ್ತು. ಅದೇ ತಾನೇ ಉಳುವಿಕೆ ಮುಗಿದಿದ್ದು ಜಾಜಿಯಾದ ಆವೆಮಣ್ಣಿನ ಆ ಕೆಂಪುಭೂಮಿಯ ಮಡಿಗಳು ಸೂರ್ಯಾಸ್ತದ ರಕ್ತವರ್ಣದಿಂದಾಗಿ ಇನ್ನೂ ಅಳವಾದ ಕೆಂಪುಭಾಯೆಯನ್ನು ಸೂಸುತ್ತಿದ್ದುವು. ಸಣ್ಣ ಬಳಿದಿದ್ದ ಆ ತೋಟದ ಮನೆಯು ರುದ್ರಕೆಂಪುಸಾಗರದಿಂದ ಸುತ್ತುವರಿದ ದ್ವೀಪದಂತೆ ಕಾಣುತ್ತಿತ್ತು. ಸಮತಟ್ಟಾದ ಮಧ್ಯಜಾರ್ಜಿಯಾ ಪ್ರಾಂತ್ಯದ ಹಳದಿ ಆವೆಮಣ್ಣಿನ ನೇರ ಉದ್ಧಮಡಿಗಳಾಗಲೀ, ಕರಾವಳಿಯ ಫಲವತ್ತಾದ, ಸಮೃದ್ದವಾದ ಕಪ್ಪುಭೂಮಿಯಾಗಲೀ ಇಲ್ಲಿರಲಿಲ್ಲ. ಬೆಟ್ಟದ ಪದತಲದಲ್ಲಿ ಹರಡಿಕೊಂಡಿದ್ದ ಉತ್ತರ ಜಾರ್ಜಿಯಾ ಪ್ರಾಂತ್ಯದ ಈ ಫಲವತ್ತಾದ ಭೂಮಿಯು ಕೆಳಗನ ನದೀಪಾಲಾಗದಂತೆ ಅಸಂಖ್ಯ ತಿರುವುಗಳಲ್ಲಿ ಉಳಲ್ಪಟ್ಟಿತ್ತು.

    ಕಡುಕೆಂಪಿನ ಆ ಭೂಮಿಯು ಮಳೆಯ ಬಳಿಕ ರಕ್ತವರ್ಣವನ್ನು ತಳುತ್ತಿದ್ದು, ಹತ್ತಿಬೆಳೆಗೆ ಲೋಕದಲ್ಲೇ ಸರ್ವೋತ್ಕøಷ್ಟದುದಾಗಿತ್ತು. ಶ್ವೇತವರ್ಣದ ಮನೆಗಳಿಂದಲೂ, ಪ್ರಶಾಂತ ಕೃಷಿಭೂಮಿಯಿಂದಲೂ, ಹಳದಿ ನದಿಗಳಿಂದಲೂ ಕೂಡಿದ್ದ ಆ ಸಮತೃಪ್ತ ನಾಡಿನಲ್ಲಿ ಪ್ರಖರ ಸೂರ್ಯನ ಬೆಳಕೂ, ದಟ್ಟ ನೆರಳೂ ಮೇಳವಿಸಿಕೊಂಡಿದ್ದವು. ಮೈಲುಗಟ್ಟಲೆ ಹರಡಿಕೊಂಡಿದ್ದ ಹತ್ತಿಯ ಜಮೀನಿನಾಚೆ ಬಿರುಬಿಸಿಲಲ್ಲೂ ಕಪ್ಪಗೆ, ತಂಪಾಗಿ, ರಹಸ್ಯಾತ್ಮಕವಾಗಿ, ಭೀತಿಕಾರಕವಾಗಿ ಸುಯ್ಗುಡುವ ಪೈನ್ ವೃಕ್ಷಗಳ ಕಾಡು ಯುಗಗಳಿಂದಲೂ ತಾಳ್ಮೆಯಿಂದ ಕಾಯುತ್ತಾ ಎಚ್ಚರೆಚ್ಚರ! ಹಿಂದೊಮ್ಮೆ ಕಬಳಿಸಿದ್ದೇವೆ. ಪುನಃ ಕಬಳಿಸಬಲ್ಲೆವು ಎಂದು ಸುಯ್ಯುವಂತಿತ್ತು.

    ಮನೆಗೆ ಹಿಂದಿರುಗುತ್ತಿರುವ ಗದ್ದೆಯಾಳುಗಳ ಚಿಮತಾರಹಿತ ನಗುವಿನ ಸಪೂರ ಸ್ವರಗಳೂ, ಕುದುರೆಗಳ ಖುರಪುಟದನಿಯೂ, ಸಂಕೋಲೆಯ ಝುಣತ್ಕಾರವೂ ಪೋರ್ಟಿಕೋದಲ್ಲಿದ್ದವರ ಕಿವಿಗಳನ್ನು ತಲುಪಿದವು. ಸ್ಕಾರ್ಲೆಟ್‍ಳ ತಾಯಿ ಎಲೆನ್ ಒಹಾರಾ, ತನ್ನ ಬೀಗದ ಕೈಗಳ ಬಾಸ್ಕೈಟ್ ಒಯ್ಯುವ ಚಿಕ್ಕ, ಕರಿಯ ಅಳುಮಗಳನ್ನು ಕರೆವ ಮೃದುದನಿಯೂ, ಒಡನೇ ತಾರಕಸ್ವರದ ಬಾಲಿಶದನಿಯ ‘ಒಡತೀ’ ಎಂಬ ಉತ್ತರವೂ ಕೇಂಬಂದು, ಮೆಯೊಡತಿಯು ಅಳುಗಳಿಗೆ ಅವರವರ ಪಾಲಿನ ಆಹಾರವನ್ನು ಹಂಚಲು ಹೋಗುತ್ತಿರುವುದನ್ನು ಸೂಚಿಸಿದುವು. ‘ಟಾರಾ’ದ ಅಳುಗಳ ಮುಖ್ಯಸ್ಥ ಹಾಗೂ ಯಜಮಾನನ ವೈಯಕ್ತಿಕ ಪರಿಚಾರಕನಾದ ಪೋರ್ಕ್ ಊಟಕ್ಕೆ ಮೇಜನ್ನು ಸಿದ್ಧಗೊಳಿಸುತ್ತಿರುವ ಸೂಚನೆಯಾಗಿ ಪಿಂಗಾಣಿ, ಬೆಳ್ಳಿಯ ಕಿಂಕಿಣಿದನಿಯೂ ತೇಲಿಬಂತು.

    ಮನೆಗೆ ಹೊರಡುವ ಸಮಯವಾದದ್ದನ್ನು ಅರಿತ ಅವಳಿಗಳು ತಾಯನ್ನೆದುರಿಸುವ ದೈರ್ಯವಿಲ್ಲದೆ, ಸ್ಕಾರ್ಲೆಟ್ ತಮ್ಮನ್ನು ಊಟಕ್ಕೆ ಆಮಂತ್ರಿಸಬಾರದೇ ಎಂದು ಆಶಿಸಿದರು.

    ಸ್ಕಾರ್ಲೆಟ್, ನಾಳಿನ ವನಭೋಜನದಲ್ಲಿ ನಗೂ ನಿನ್ನೊಡನೆ ಸಾಕಷ್ಟು ಡಾನ್ಸ್‍ಗಳುಸಿಗುವುದಷ್ಟೇ? ನೋಡು, ಹನೀ: ಮೊದಲ ಸುತ್ತಿನ ವಾಲ್ಟ್ಸ್ ನನಗೆ: ಕೊನೆಯದು ಸ್ಪ್ಯೂಗೆ. ಒಟ್ಟಿಗೇ ಕುಳಿತು ಉಣ್ಣುವ, ಕಳೆದ ಸಲದಂತೆ ಮ್ಯಾಮಿಜಿನ್ಸಿಯ ಭವಿಷ್ಯವಾಣಿಯನ್ನೂ ಎದುರುನೋಡುವ.

    ಮ್ಯಾಮಿಜಿನ್ಸಿಯ ಭವಿಷ್ಯ ನನಗಿಷ್ಟವಿಲ್ಲ! ಕಪ್ಪುಕೂದಲು ಹಾಗೂ ಉದ್ದಮೀಸೆಯ ಮನುಷ್ಯನನ್ನು ನಾನು ಮದುವೆ ಆಗುತ್ತೇನೆಂದು ಆಕೆ ನುಡುದುದು ನೆನಪಿದೆಯೇ? ಕಪ್ಪು ಕೂದಲಿನವರು ನನಗಿಷ್ಟವಿಲ್ಲ.

    ನಿನಗೆ ಕೆಂಪು ಕೂದಲುಳ್ಳವರೇ ಇಷ್ಟವಲ್ಲವೇ ಹನೀ? ಈಗ ವಾಲ್ಸ್ಟ್ ಹಾಗೂ ಊಟದ ಬಗ್ಗೆ ಭಾಷೆ ಕೊಡು, ಬ್ರೆಂಟ್ ಹಲ್ಕಿರಿಯುತ್ತಾ ನುಡಿದ, ನೀನು ಭಾಷೆಯಿತ್ತರೆ, ನಿನಗೊಂದು ಗುಟ್ಟು ಹೇಳ್ತೇವೆ, ಸ್ಪ್ಯ ನುಡಿದ.

    ಏನದು? ಸ್ಕಾರ್ಲೆಟ್ ಒಮ್ಮೆಲೇ ಎಚ್ಚತ್ತು ಮಗುವಿನಂತೆ ಕುತೂಹಲ ತೋರಿದಳು.

    "ಆದರೆ, ನಾವು ಹೇಳುವುದಿಲ್ಲವೆಂದು ಭಾಷೆ ಕೊಟ್ಟಿದ್ದೆವಲ್ಲ ಸ್ಟ್ಯೂ?

    ಆದರೇನು? ಮಿಸ್ ಪಿಟಿ ತಾನಾಗೇ ಹೇಳಿದ್ದಲ್ಲ?

    ಯಾರು? ಕೇಳಿದಳು, ಸ್ಲಾರ್ಲೆಟ್.

    ಆಟ್ಲಾಂಟಾದಲ್ಲಿರುವ ಮಿಸ್ ಪಿಟಿಪ್ಯಾಟ್‍ಹ್ಯಾಮಿಲ್ಟನ್-ಆಶ್‍ಲಿ ವಿಲ್ಕ್ಸ್‍ನ ಕಸಿನ್;ಚಾಲ್ರ್ಸ್, ಮೆಲನಿ ಹ್ಯಾಮಿಲ್ಟನ್‍ರ ಆಂಟ್-ನಿನು ಬಲ್ಲೆ.

    ಹೌದು, ಬಲ್ಲೆ ಆಕೆಗಿಂತ ಮೂರ್ಖಳಾದ ವೃದ್ದೆಯನ್ನು ಬೇರೆಲ್ಲೂ ಕಂಡಿಲ್ಲ!

    ನಿನ್ನೆ ನಾವು ಅಟ್ಲಾಂಟಾದಲ್ಲಿ ಟ್ರೈನ್‍ಗೆ ಕಾಯುತ್ತಿದ್ದಾಗ ಆಕೆಯೇ ತಡೆದು ನಿಂತು ಮಾತನಾಡಿಸಿ, ನಾಳಿನ ನೃತ್ಯಕೂಟದಲ್ಲಿ ಒಂದು ಎಂಗೇಜ್‍ಮೆಂಟ್ ಘೋಷಿದಲಾಗುವುದೆಂದು ತಿಳಿಸಿದಳು.

    ಓ, ಅದೇ ಸ್ಯಾರ್ಲೆಟ್ ನಿರಾಶಳಾಗಿ ನುಡಿದಳು. ಆಕೆಯ ಮೂರ್ಖ ಸೋದರಳಿಯ ಚಾಲ್ರ್ಸ ಹ್ಯಾಮಿಲ್ಟನ್ ಹಾಗು ಹನೀ ವಿಲ್ಕ್ಸ್‍ನದ್ದು!

    ಅವನನ್ನು ಮೂರ್ಖನೆಂದು ನೀನು ತಿಳಿದುರವುದು ನಿಜವೇ? ಕಳೆದ ಕ್ರಿಸ್‍ಮಸ್‍ನಲ್ಲಿ ನಿನ್ನ ಸುತ್ತ ಅವನನ್ನು ಸಾಕಷ್ಟು ಸುಳಿಯಬಿಟ್ಟಿದ್ದೆ.

    ಅವನೊಬ್ಬ ಹೆಣ್ಣಿಗನಷ್ಟೇ!

    ಈಗ ಘೋಷಿಸಲ್ಪಡುವುದು ಅವನ ಮದುವೆಯ ನಿಶ್ಚಯವೇನು ಅಲ್ಲ,; ಅವನ ತಂಗಿ ಮೆಲನಿಯೊಡನೆ ಆಶ್‍ಲಿ ವಿಲ್ಕ್ಸ್‍ನ ಮದುವೆಯ ನಿಶ್ಚಯ! ಸ್ಟ್ಯುವರ್ಟ್ ವಿಜಯಗರ್ವದಿಂದ ನುಡಿದ.

    ಸ್ಕಾರ್ಲೆಟ್‍ಳ ಮುಖಬಾವ ಬದಲಾಗಲಿಲ್ಲ, ಆದರೆ ತುಟಿಗಳು ಬಣ್ಣಗೀರಿ ತೆಗೆದಂತೆ ವಳಿಚಿಕೊಂಡವು- ಮುನ್ನೆಚ್ಚರಿಕೆಯಲ್ಲದೆ ತೀವ್ರ ಅಘಾತಕ್ಕೊಳಗಾದ ವ್ಯಕ್ತಿಯಂತೆ; ತಿಳಿವು ಕಳಕೊಂಡಂತೆ; ಸ್ಟ್ಯುವರ್ಟ್‍ನನ್ನು ದಿಟ್ಟಿಸುತ್ತಿದ್ದ ಆಕೆಯ ಮುಕ ಎಷ್ಟು ಸ್ತವ್ಧವಾಗಿತ್ತೆಂದರೆ, ವಿವೇಚನೆಯಿರದ ಆತ, ಆಕೆ ಅಚ್ಚರಿ ಹಾಗೂ ಕುತೂಹಲಕ್ಕೆ ಒಳಗಾಗಿರುವಳೆಂದೇ ತಿಳಿದ.

    ಮಿಸ್ ಫಿಟಿಯ ಮಾತಿನಂತೆ, ಮಿಸ್ ಮೆಲನಿಯ ಆರೋಗ್ಯ ಚೆನ್ನಾಗಿಲ್ಲದುದರಿಂದ ಬರುವ ವರ್ಷದವರೆಗೆ ಇದನ್ನು ಘೋಷಿಸುವ ವಿಚಾರವಿಲಿಲ್ಲ. ಆದರೆ ಎಲ್ಲೆಡೆ ನಡೆಯುತ್ತಿರುವ ಯುದ್ಧದ ಮಾತಿನಿಂದಾಗಿ ಅದಷ್ಟು ಶೀಘ್ರವೇ ಮದುವೆ ನಡೆಸುವ ಯೋಚನೆ ಇಬ್ಬರಲ್ಲೂ ಇದೆ. ನಾಳೆಯೇ ಇದನ್ನು ಘೋಷಿಸಲಾಗುವುದು. ಈಗ ನಾವು ನಿನಗೆ ರಹಸ್ಯ ತಿಳಿಸಿದರಿಂದ ನಮ್ಮೊಡನೆ ಉಣ್ಣುವಿಯೆಂದು ಭಾಷೆ ಕೊಡು.

    ಖಂಡಿತ! ಯಾಂತ್ರಿಕವಾಗಿ ಉತ್ತರಿಸಿದಳು ಸ್ಕಾರ್ಲೆಟ್.

    ಮತ್ತೆ ಎಲ್ಲ ವಾಲ್ಟ್ಸ್‍ಗಳೂ?

    ಎಲ್ಲವೂ!

    ಓ ಸ್ವೀಟ್ !ಉಳಿದ ಹುಡುಗರೆಲ್ಲ ಹುಚ್ಚಾಗುವುದು ಖಂಡಿತ!           

    ಅವಳಿಗಳ ಸಂತಸ ಅಚ್ಚರಿಯಿಂದ ಕೂಡಿತ್ತು. ಹಿಂದೆಂದೂ ಹೀಗೆ- ಪುನಃ ಪುನಃ ಬೇಡಿಕೊಂಡು ಗೋಗರೆಯದೆ-ಸ್ಕಾರ್ಲೆಟ್ ಅವರ ಬೇಡಿಕೆಗೆ ಒಪ್ಪಿದ್ದೇ ಇರಲಿಲ್ಲ ವಿದ್ಯಾಲಯದಿಂದ ಉಚ್ಚಾಟನೆಯಗೊಂಡುದು ಈ ಸುಯೋಗಕ್ಕಾಗಿಯೇ ಎಂದು ಅವರ ಮನ ಉಬ್ಬಿತು. ಸ್ವಲ್ಪಕಾಲ ಮರುದಿನದ ವನಭೋಜನದ ಬಗ್ಗೆ ಹರಟುತ್ತಿದ್ದವರಿಗತೆ ಸ್ಕಾರ್ಲೆಟ್ ಎಂದಿನಂತಿಲ್ಲ; ತಮ್ಮ ಮಾತುಗಳಲ್ಲಿ ಅವಳಿಗೆ ಆಸಕ್ತಿ ಇಲ್ಲ ಎಂದರಿಯಲು ತಡವಾಗಲಿಲ್ಲ. ಕಾರಣ ಮಾತ್ರ ಅವರಿಗರಿವಾಗಲೇ ಇಲ್ಲ. ನಿರುಪಾಯರಾಗಿ ಎದ್ದ ಅವಳಿಗಳು ಅವಳಿಂದ ಬೀಳ್ಕೊಂಡು ಹೊರಟರು.

    ಹೊಸದಾಗಿ ಉತ್ತ ಗದ್ದೆಗಳಾಚೆ, ನದಿಯ ಹಿಂದಡದಾಚೆ ಕಪ್ಪನೆಯ ಕಾಡು ನಿಂತಿತ್ತು. ಕೋಳಿಗಳೂ, ಬಾತುಗಳೂ, ಟರ್ಕಿಗಳೂ ಗದ್ದೆಗಳಿಂದ ಅವಸರದ ನಡಿಗೆಯಲ್ಲಿ ಮನೆಯತ್ತ ಹಿಂದಿರುಗಿತ್ತಿದ್ದುವು.

    ಜೀಮ್ಸ್! ಎಂದು ಸ್ಟ್ಯುವರ್ಟ್ ಕೂಗಿ ಕರೆದುದೇ ತಡ: ಅವರದೇ ಪ್ರಾಯದ, ಎತ್ತರದ ಕರಿಯ ಅಳುಮಗ ಓಡುತ್ತಾ ಬಂದು ಕದುರೆಗಳತ್ತ ದಾಗಿದ. ತನ್ನೊಡೆಯರನ್ನು ಎಲ್ಲೆಡೆಯೂ ಹಿಂಬಾಲಿಸುವ ಜೀಮ್ಸ್ ಅವರ ಹತ್ತನೆಯ ವಯಸ್ಸಿನಲ್ಲಿ, ಅವರ ಸೇವೆಗಾಗಿ ಕೊಡಲ್ಪಟ್ಟ ಉಡುಗೊರೆಯಾಗಿದ್ದ. ಅವನನ್ನು ಕಂಡೊಡನೆ ಬೇಟೆನಾಯಿಗಳು ಎದ್ದುನಿಂತು ಒಡೆಯರಿಗಾಗಿ ನಿರೀಕ್ಷಸತೊಡಗಿದವು. ಅವಸರದಿಂದ ಒಂದು ಕುದುರೆಯೇರಿದ ಹುಡುಗರು ಗೆಳತಿಯತ್ತ ಕೈಬೀಸಿ. ಬೊಬ್ಬಿರಿದು, ವಿದಾಯ ಕೋರಿ ಸಿಡರ್‍ವೃಕ್ಷಗಳ ತೋಪಿನಗುಂಟ ವೇಗದಿಂದ ಸಾಗಿದರು.

    ದಾರಿಯ ತಿರುವು ದಾಟಿದೊಡನೆ ಬ್ರೆಂಟ್ ತನ್ನ ಕುದುರೆಯ ಲಗಾಮು ಎಳೆದು ನುಂತುಬಿಟ್ಟ. ಸ್ಟ್ಯುವರ್ಟ್‍ನೂ ಅಂತೆಯೇ ತಡೆದು ನಿಂತ. ಕುದುರೆಗಳು ಎಳೆಹುಲ್ಲನ್ನು ಮೇಯತೊಡಗಿದರೆ, ಅವುಗಳ ಕಾಲ್ಗಳ ಬಳ ಕುಳಿತ ಬೇಟೆನಾಯಿಗಳು ತಲೆಯೆತ್ತಿ ಮೇಲೆ ಮಬ್ಬು ಬೆಳಕಲಿ ಸುತ್ತಿತ್ತುದ್ದ ಹಕ್ಕಿಗಳನ್ನೇ ಆಸೆಯಿಂದ ದಿಟ್ಟಿಸತೊಡಗಿದುವು.

    ಸ್ಯಾರ್ಲೆಟ್ ನಮ್ಮನ್ನು ಊಟಕ್ಕೆ ನಿಲ್ಲುವಂತೆ ಹೇಳಬಹುದಿತ್ತಲ್ಲವೇ? ಬ್ರೆಂಟ್ ಅಸಮಾಧಾನದಿಂದ ನುಡಿದ.

    ಹೌದು; ನನಗೂ ಹಾಗೇ ಅನಿಸಿತು. ಆದರೇಕೋ ಅವಳು ಇದ್ದಕ್ಕಿದ್ದಂತೆ ಸಪ್ಪಗಾಗಿಬಿಟ್ಟಳು.

    ನಾವು ಹೇಳಿದ್ದೇನೋ ಅವಳಿಗೆ ಸರಿಯಾಗಲಿಲ್ಲವೆಂದು ತೋರುತ್ತದೆ, ಆದರೆ, ಏನದು?

    ನಾವು ಶಾಲೆಯಿಂದ ಉಚ್ಚಾಟಿಸಲ್ಪಟ್ಟುದುದೇ?

    ಮರುಳ ನಿನು! ವಿದ್ಯೆಯ ಬಗ್ಗೆ ಅವಳಿಗೆ ನಮಗಿಂತ ಹೆಚ್ಚಿನ ಕಾಳಜಿ ಏನೂ ಇಲ್ಲವೆಂದು ನೀನೂ ಬಲ್ಲೆ.

    ಬ್ರೆಂಟ್ ಹಿಂದಿರುಗಿ ನೋಡಿ ಕರೆದು: ಜೀಮ್ಸ್!

    ಒಡೆಯಾ!

    ನಾವು ಸ್ಕಾರ್ಲೆಟ್‍ಳೊಡನೆ ಮಾತಾಡಿದ್ದನ್ನು ನೀನು ಕೇಳಿದೆಯಲ್ಲ?

    ಇಲ್ಲ ನನ್ನೊಡೆಯಾ! ನೀವು ಬಿಳಿಯರು ಮಾತಾಡಿದ್ದನ್ನು ನಾನು ಹೊಂಚಿ ಕೇಳುವೆನೆಂದು ನೀವದೆಂತು ಎಣಿಸಿದಿರಿ?

    ಹೊಂಚಿ ಕೇಳುವುದೇನು ಬಿಡಿ! ನಿವು ಕರಿಯರಿಗೆ ನಡೆಯುವುದೆಲ್ಲ ತಿಳಿದುರತ್ತದೆ. ಅಲ್ಲೇ ಮಲ್ಲಿಗೆ ಪೊದರಿನ ಹಿಂದೆ ನೀನು ಚಲಿಸುವುದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಈಗ ಹೇಳು: ನಾವು ಹೇಳಿದ್ದೇನಾದ್ರೂ ಸ್ಕಾರ್ಲೆಟ್‍ಗೆ ನೋವುಂಟು ಮಾಡಿರಬಹುದೇ?

    ಈ ಅನುನಯದ ಬಳಿಕ ತನ್ನ ನಟನೆಯನ್ನು ಬಿಟ್ಟುಕೊಟ್ಟು ಹುಬ್ಬು ಸಂಕುಚಿಸಿ ಯೋಚಿಸುತ್ತಾ ಜೀಮ್ಸ್ ನುಡಿದ, ಇಲ್ಲ, ನನ್ನೊಡೆಯಾ; ಅಂಥದ್ದೇನನ್ನೂ ನಾನು ಕಾಣಲಿಲ್ಲ. ಮಿಸ್ ಸ್ಕಾರ್ಲೆಟ್ ನಿಮ್ಮನ್ನು ಕಂಡು ತುಂಬ ಸಂತೋಷಪಟ್ಟು ಹಕ್ಕಿಯಂತೆ ಚಲಿಪಿಲಿಗುಟ್ಟುತ್ತ ಇದ್ದುದನ್ನು ಕಂಡೆ. ಆದರೆ, ನೀವು ಮಿಸ್ಟರ್ ಆಶ್‍ಲಿ ಹಾಗೂ ಮಿಸ್ ಮೆಲನಿ ಹ್ಯಾಮಿಲ್ಟನ್‍ರ ಮದುವೆಯ ಬಗ್ಗೆ ಹೇಳಿದ್ದೇ, ಗಿಡಿಗನನ್ನು ಕಂಡ ಪಾರಿವಾಳದಂತೆ ಸುಮ್ಮನಾಗಿ ಬಿಟ್ಟಳಾಕೆ.

    ಅವಳಿಗಳು ಪರಸ್ಪರರನ್ನು ದಿಟ್ಟಿಸಿ ಹೌದೆಂದು ತಲೆಯಾಡಿಸಿದರು. ಆದರೂ ಅದು ಏಕೆಂದು ಅವರಿಗರಿವಾಗಲೇ ಇಲ್ಲ.

    ಆಶ್‍ಲಿಯ ಬಗ್ಗೆ ಸ್ಕಾರ್ಲೆಟ್‍ಗೆ ಅಂಥ ವಿಶೇಷ ಭಾವವೇನು ಇಲ್ಲವಲ್ಲ? ಮತ್ತೇಕೆ ಹೀಗೆ? ಆತ ತನಗೆ ಮೊದಲು ತಿಳಿಸಲಿಲ್ಲವೆಂಬ ಅದಮಾಧಾನವೇ ಹೀಗೆ? ಅದೇ ಇರಬಹುದು, ಬ್ರೆಂಟ್ ನುಡಿದ.

    ಅವಳಿಗಳು ಕಳೆದ ಬೇಸಿಗೆಯಲ್ಲಿ ಸ್ಕಾರ್ಲೆಟ್‍ಳ ಮೋಹಕತೆಗೆ ಮರುಳಾಗುವ ಮುನ್ನ ಕೆಲಕಾಲ, ಸ್ಟ್ಯವರ್ಟ್, ಇಂಡಿಯಾ ವಿಲ್ಕ್ಸ್‍ಳೊಡನೆ ಸುತ್ತಾಡುತ್ತಿದ್ದ. ತನ್ನ ಹೊರತು ಬೇರಾರಿಗೇ ಆದರೂ ಜೊತೆಯ ಹುಡುಗರು ಆಕರ್ಷಿತರಾಗಿರುವುದನ್ನು ಸಹಿಸದ ಸ್ಕಾರ್ಲೆಟ್, ತನ್ನ ಬಿಂಕ-ಬಿನ್ನಾಣ, ಅಂದ-ಚೆಂದಗಳಿಂದ ಅವರನ್ನು ಆಕರ್ಷಿಸಿ ಮರುಳುಗೊಳಿಸಿದ್ದಳು. ಅವಳ ಹಸಿರು ಕಂಗಳ ಕಿಣಿತವನ್ನೂ ನೋಡಿ ಚಕಿತರಾಗಿದ್ದರು, ಈ ಹುಡುಗರು, ಸ್ಕಾರ್ಲೆಟ್‍ಳ ಸೌಂದರ್ಯ ಇದುವರೆಗೂ ತಮ್ಮರಿವಿಗೆ ಬರದೇಹೋದುದೇ ಹೇಗೆಂದು ಅವರಿಗೆ ಅಚ್ಚರಿಯೇ ಆಯಿತು.

    ಇಂಡಿಯಾಳ ಬಗೆಗೆ ತಾನು ತಪ್ಪಿತಸ್ಥನೆಂಬ ಭಾವ ಅಂದಿನಿಂದಲೂ ಸ್ಟ್ಯುವರ್ಟ್‍ನ ಮನವನ್ನು ಕುಡುಕುತ್ತಿತ್ತು. ಉತ್ತಮ ಸ್ತ್ರೀತ್ವದ ಮೂರ್ತಿಯಾದ, ಶಂತಳೂ, ಸಚ್ಚರಿತೆಯೂ ಆದ, ಸಾಕಷ್ಟು ಪುಸ್ತಕಜ್ಞಾನವಿದ್ದ, ಸದ್ದುಣಿ ಇಂಡಿಯಾಳ ಬಗ್ಗೆ ಅವನಿಗೆ ಅಪಾರ ಗೌರವವಿದ್ದರೂ, ಚಂಚಲೆಯಾದ ಸ್ಕಾರ್ಲೆಟ್‍ಳ ಪ್ರಖರ ವ್ಯಕ್ತಿತ್ವದೆದುರು ಆಕೆ ಬಹುದು ಸಪ್ಪೆಯಾಗಿ ತೋರಿದ್ದಳು.

    ತಾಯನ್ನೆದುರಿಸುವ ಧೈರ್ಯವಿಲ್ಲದ ಅವಳಿಗಳು ಕೇಡ್‍ಕ್ಯಾಲ್ವರ್ಟ್‍ನ ಮನೆಗೆ ಊಟಕ್ಕೆ ಹೋಗುವ ಬಗ್ಗೆ ಯೋಚಿಸತೊಡಗಿದರು. ಆದರೆ ಆತನ ಯಾಂಕೀ ಮಲತಾಯಿಯ ನೆನಪಾಗಿ, ಸ್ಟ್ಯುವರ್ಟ್ ಇದನ್ನು ವಿರೋಧಿಸಿದ. ಆಕೆ ನನಗೆ ಹಿಡಿಸುವುದಿಲ್ಲ. ಒಳ್ಳೆಯುವಳಾಗಿ ತೋರುವ ಯತ್ನದಲ್ಲಿ ಆಕೆ ಏನಾದರೊಂದು ಎಡವಟ್ಟು ಮಾಡಿಬೊಡುತ್ತಾಳೆ; ನಾವು ದಕ್ಷಣದವರೆಂದರೆ ಹೆದರಿ ಸಾಯುತ್ತಾಳೆ. ನಮ್ಮನ್ನು ಕಾಡುಜನರೆಂದರು ಹೇಳುತ್ತಾಳೆ.

    ಆದರೆ, ಅವಳ ತಪ್ಪೇನೂ ಇಲ್ಲ: ನೀನು ಕೇಡ್‍ನ ಕಾಲಿಗೆ ಗುಂಡುಹೊಡೆದುದು ಸುಳ್ಳಲ್ಲವಷ್ಟೇ? ಅವನು ಅವಳ ಮಲಮಗನಲ್ಲೇ?

    ಅದಕ್ಕೇಕೆ ನನ್ನನ್ನು ಅಪಮಾನಿಸಬೇಕು? ಅಂದು ಟೋನಿ ಪೋಂಟ್ವೇನ್ ನಿನ್ನ ಕಾಲಿಗೆ ಗುಂಡು ಹೊಡೆದು ಗಾಯಗೊಳಿಸಿದಾಗ, ನಿನು ಸ್ವಂತ ಮಗನಾಗಿದ್ದರೂ, ಮಮಾ ಹೀಗೇನಾದ್ರೂ ಮಾಡಿದರೇ? ಸುಮ್ಮನೆ ಡಾಕ್ಟರನ್ನು ಕರೆಸಿ, ಟೋನಿಯ ಗುರಿ ಅಷ್ಟೊಂದು ಕೆಟ್ಟದಾಗಿರಲು ಕಾರಣವೇನೆಂದು ಡಾಕ್ಟರ್ ಫೋಂಟಿನ್‍ರೊಡನೆ ಚರ್ಚಿಸಿದರಷ್ಟೇ.

    ಇಬ್ಬರು ಹುಡುಗರೂ ಆ ಘಟನೆಯನ್ನು ನೆನೆದು ಮನಸೋಕ್ತ ನಕ್ಕುಬಿಟ್ಟರು.

    ಆದರೆ, ಬ್ರೆಂಟ್, ನಮ್ಮ ಯೂರೋಪ್ ಟೂರ್ ಕೈಬಿಟ್ಟಂತೇ, ಮಮಾ ಮೊದಲೆ ಎಚ್ಚರಿಸಿದ್ದರಲ್ಲ!

    ಹೋಗಲಿ ಬಿಡು! ಇಲ್ಲಿಲ್ಲದ್ದು ಅಲ್ಲೇನಿರಬಹುದು? ಇಲ್ಲಿಗಿಂತ ವೇಗದ ಕುದುರೆಗಳೋ, ಹೆಚ್ಚು ಚೆಲುವೆಯರಾದ ಹುಡುಗಿಯರೋ, ಉತ್ತಮ ಪಾನೀಯವೋ ಖಂಡಿತ ಅಲ್ಲಿರದು.

    ಅಲ್ಲಿ ತುಂಬಾ ರಮ್ಯ ಪ್ರಕೃತಿ ಹಾಗೂ ಸಂಗೀತವಿದೆಯೆಂದು ಆಶ್‍ಲಿ ಹೇಳಿದ. ಅವನೆಲ್ಲ ಸುತ್ತಿ ಬಂದಿರುವನಲ್ಲ!

    ಹೋಗಲಿ ಬಿಡು! ಇಲ್ಲಿಲ್ಲದ್ದು ಅಲ್ಲೇನಿರಬಹುದು? ಎಲ್ಲಿಗಿಂತ ವೇಗದ ಕುದುರೆಗಳೋ, ಹೆಚ್ಚು ಚೆಲುವೆಯರಾದ ಹುಡುಗಿಯರೋ, ಉತ್ತಮ ಪಾನೀಯವೋ ಖಂಡಿತ ಅಲ್ಲಿರದು.

    ಅಲ್ಲಿ ತುಂಬಾರಮ್ಯ ಪ್ರಕೃತಿ ಹಾಗೂ ಸಂಗೀತವಿದೆಯೆಂದು ಆಶ್‍ಲಿ ಹೇಳಿದ. ಅವನೆಲ್ಲ ಸುತ್ತಿ ಬಂದುರುವನಲ್ಲ!

    ವಿಲ್ಕ್ಸ್ ಬಗ್ಗೆ ನಿನಗೆ ಗೊತ್ತೇ ಇದೆ. ಸಂಗೀತ, ಪ್ರಕೃತಿ ಸೌಂದರ್ಯ, ಪುಸ್ತಕಗಳೆಂದರೆ ಅವರಿಗೆ ಜೀವ. ಅವರು ವರ್ಜಿನಿಯಾದಿಂದ ಬಂದವರಾದುದೇ ಇದಕ್ಕೆ ಕಾರಣವೆಂದು ಮಮಾ ಹೇಳುತ್ತಾರೆ.

    ನೋಡು, ಬ್ರೆಂಟ್, ನಾವು ಏಬಲ್ ವೈಂಡೆದನಲ್ಲಿಗೆ ಊಟಕ್ಕೆ ಹೋಗೋನ. ನಾಳೆಯಿಂದ ನಾವು ನಾಲ್ವರೂ ಕವಾಯತಿಗೆ ಬರಲು ತಯಾರಿದ್ದೇವೆಂದು ತಿಳಿಸಬಂದೆವೆಂದು ಹೇಳುವಾ.

    ಅದು ಸರಿ! ಸೈನ್ಯದ ವಿಷಯವೂ ತಿಳಿದಂತಾಗುವುದು. ಹಾಗೇ ಸಮವಸ್ತ್ರದ ಬಣ್ಣ ನಿಶ್ಚಯವಾಯಿತೇ ಎಂದೂ ತಿಳಿಯಬಹುದು.

    ಆದರೆ ಅಲ್ಲಿ ಊಟವೇನೂ ಸಿಗುವಂತಿಲ್ಲವೆಂದೂ, ಅಲ್ಲಿಯ ಅಡುಗೆಯಾತ ತೀರಿಕೊಂಡಿದ್ದು ಹೊಸಬರನ್ನು ಇರಿಸಿಕೊಳ್ಳುವ ಸಾಮಥ್ರ್ಯ ಆ ಬಡ ಬಿಳಿಯನಿಗಿಲ್ಲವೆಂದೂ, ಸದಾ ಒಡೆಯರ ಮಾತುಕತೆಗಳಿಗೇ ಕಿವಿಯಾಗಿರುತ್ತಿದ್ದ ಜೀಮ್ಸ್ ನುಡುದು, ಅವರ ಉತ್ಸಾಹಭಂಗ ಮಾಡಿದ. ವೈಂಡರ್‍ನನ್ನು ‘ಬಡ ಬಿಳಿಯ’ನೆಂದುದಕ್ಕೆ ಆತ ತನ್ನೊಡೆಯರ ಕೋಪಕ್ಕೂ ಗುರಿಯಾಗಬೇಕಾಯ್ತು. ಏಬಲ್ ಯೋಗ್ಯನೆಂದೇ ಆತನನ್ನು ಲೆಫ್ರಿನೆಂಟ್ ಆಗಿ ಆರಿಸಲಾಗಿದೆಯೆಂದು ಅವಳಿಗಳು ತಮ್ಮ ಈ ಆಳಿಗೆ ತಿಳಿಹೇಳಲೆಳಸಿದರು. ಯುದ್ಧದ ಯಾವುದೇ ಅನುಭವವಿರದ ಈ ಸೈನ್ಯಕ್ಕೆ, ಉತ್ತಮ ಸವಾರನೂ, ಸಮಚಿತ್ತನೂ ಆದ ಆಶ್‍ಲಿ ವಿಲ್ಕ್ಸ್‍ನನ್ನು ಕ್ಯಾಪ್ಟನ್ ಆಗಿಯೂ, ಸರ್ವಜನಪ್ರಿಯನಾದ ರ್ವಢಫರ್ಡ್ ಕ್ಯಾಲ್ವರ್ಟ್‍ನನ್ನು ಫಸ್ಟ್ ಲೆಫ್ರಿನೆಂಟ್ ಆಗಿಯೂ, ಚತಿರನೂ, ದಯಾಳುವೂ ಸಜ್ಜನನೂ ಆದ ಏಬಲ್‍ನನ್ನು ಸೆಕೆಂಡ್ ಲೆಫ್ರಿನೆಂಟ್ ಆಗಿಯೂ ನೇಮಿಸಲಾಗಿತ್ತು.

    ಮೊದಮೊದಲು ಸಿರಿವಂತ ಪ್ಲಆಂಟರುಗಳಿಂದಲೇ ಸೈನ್ಯಕ್ಕಾಗಿ ಜನರನ್ನು ಆರಿಸಲಾಗಿತ್ತು. ಕೆಲವು ಕತ್ತೆಗಳನ್ನು ಮಾತ್ರ ಹಿಂದಿದ್ದ ಸಣ್ಣ ರೈತರೂ, ಒಂದೇ ಕತ್ತೆಯನ್ನು ಹೊಂದಿದ ಬಡ ಬಳಿಯರೂ, ಏನೂ ಇರದ ಕಾಡುಪ್ರದೇಶದ ಕಿರಾತರೂ ತಮ್ಮ ಆತ್ಮಗೌರವಕ್ಕೆ ಕುಂದಾಗದ ರೀತಿಯಲ್ಲಿ ಸೈನ್ಯದಲ್ಲಿ ಪಾಲೊಗೊಳ್ಳುವಂತೆ ಸಿರಿವಂತ ಕುಡುಂಬಗಳು ಅವರಿಗೆ ಬೇಕಾದ ಕುದುರೆಗಳನ್ನೂ, ಆಯುಧಗಳನ್ನೂ ಒದಗಿಸಿದ್ದುವು.

    ಸೈನ್ಯವು ವಾರದಲ್ಲಿ ಎರಡು ಸಲ ಜೋನ್ಸ್ ಬರೋದಲ್ಲಿ ಸೇರಿ ಯುದ್ಧವು ಆರಂಭವಾಗಲೆಂದು ಪ್ರಾರ್ಥಿಸುತ್ತಿತ್ತು. ಕವಾಯತು ನಡೆಸುತ್ತಿತ್ತು. ಉತ್ತಮ ಗುರಿಕಾರರೆನಿಸಲು ಸ್ಪರ್ಧೆ ನಡೆಯುತ್ತಿತ್ತು. ದಕ್ಷಿಣದವರೆಲ್ಲರೂ ಜನ್ಮತಃ ಉತ್ತಮ ಗುರಿಕಾರರಾಗಿದ್ದು, ಈ ವಿದ್ಯೆಯನ್ನು ಅವರಿಗೆ ಕಲಿಸುವ ಅಗತ್ಯ ಇರಲಿಲ್ಲ.

    ಜೀಮ್ಸ್‍ನನ್ನು ಮನೆಗೆ ಕಳುಹಿಸಿ, ತಾವು ಏಬಲ್‍ನಲ್ಲಿಗೆ ಹೋಗುವುದು ಅವಳಿಗಳ ವಿಚಾರವಾಗಿತ್ತು. ಆದರೆ, ತಾನೊಬ್ಬನೇ ಮಿಸ್ ಬ್ರೀಟಿಸ್‍ಳನ್ನು ಎದುರಿಸುವ ಬದಲು, ಕಾಡುಪಾಲಾದರೂ ಆಗಲು ಸಿದ್ದನೆಂದು ಜೀಮ್ಸ್ ನಿರ್ಧಾರದಿಂದ ನುಡಿದುಬಿಟ್ಟ. ಕೊನೆಗೆ, ಆತ ಏಬಲ್‍ನಲ್ಲಿ ಅವರ ಊಟವನ್ನು ಹಳಿವ ಧಾಷ್ಟ್ರ್ಯ ತೋರಕೂಡದೆಂಬ ಎಚ್ಚರದೊಂದಿಗೆ ಅವನನ್ನೂ ಜೊತೆಗೆ ಒಯ್ಯಲು ಅವಳಿಗಳು ಸಮ್ಮತಿಸಿದರು. ಜೀಮ್ಸ್ ಅಸಮಾಧಾನದಿಂದ, ತನ್ನೊಡತಿ ತನಗೂ ಉತ್ತಮ ನಡತೆ ಕಲಿಸಿರುವಳೆಂದು ನುಡಿದ. ಆದರೂ, ತಮ್ಮ ಮೂವರಲ್ಲೂ ಆಕೆ ವಿಫಲಳೇ ಆಗಿರುವಳೆಂದ ಸ್ಟ್ಯುವರ್ಟ್ ಹೊರಡೋಣವೆಂದು ಸೂಚಿಸಿ ತನ್ನ ಕುದುರೆಯನ್ನು ಬೇಲಿ ಹಾರಿಸಿ, ಜೆರಾಲ್ಡ್ ಒಹಾರಾನ ಪ್ಲಾಂಟೇಶನ್‍ನ ಗದ್ದೆಗಳ ಮುಲಕ ಶಗಿದ. ಉಳಿದಿಬ್ಬರೂ ಅಂತೆಯೇ ಹಿಂಬಾಲಿಸಿದರು.

    ಅಧ್ಯಾಯ-2

    ಅವಳಿಗಳು ಹೊರಟುಹೋದ ಬಳಿಕ, ಸ್ಕಾರ್ಲೆm, ನಿದ್ದೆಯಲ್ಲಿ ನಡೆದಂತೆ ನಡೆದು ತನ್ನ ಕಿರ್ಚಿಯಲ್ಲಿ ಕುಳಿತುಬಿಟ್ಟಳು. ಅವಳ ಹೃದಯ ನೋವಿನಿಂದ ಬಿರಿಯುತ್ತಿತ್ತು. ಗೆಳೆಯರೆದುರು ತನ್ನ ಮನದ ತುಮುಲವನ್ನಡಗಿಸಿ ಸುಮ್ಮ ಸುಮ್ಮನೆ ನಕ್ಕುದರಿಂದ ಮುಖದ ಸ್ನಾಯುಗಳೂ ಬಿಗಿಯಾಗಿ ತನಗೆ ಬೇಕಿದ್ದನ್ನೆಲ್ಲ ಪಡೆದ ಮಗುವು, ಮೊದಲ ಬಾರಿಗೆ ಜೀವನದಲ್ಲಿ ಅಸಂತೋಷವನ್ನೆದುರಿಸಬೇಕಾಗಿ ಬಂದಾಗಿನ ನೋವು, ದಿಗ್ಬ್ರಮೆ, ಅವಳ ಮುಖದಲ್ಲಿ ಬಿಂಬಿಸಿತ್ತು.

    ಆಶ್‍ಲಿಯೊಡನೆ ಮೆಲನಿಯ ಮದುವೆಯೇ?!

    ಇದು ಖಂಡಿತ ನಿಜವಿರದು! ಅವಳಿಗಳು ಏನೋ ತಮಾಷೆ ಮಾಡುತ್ತಿದ್ದಿರಬೇಕು. ಆಶ್‍ಲಿ ಎಂತಾದರೂ ಅವಳನ್ನು ಪ್ರೀತಿಸುವುದು ಸಾಧ್ಯ? ಆ ಎಳೆಯ ದೇಹಾಕೃತಿಯ, ಹೃದಯದ ಆಕಾರದ ಗಂಭೀರ ಮುಖದ, ಅತಿ ಸದಾ ಚಹರೆಯ ಪೀಚುಹುಡುಗಿ ಮೆಲನಿಯನ್ನು? ಆತ ಅವಳನ್ನು ಪ್ರೀತಿಸುವುದು ಹೇಗಾದರೂ ಸಾರ್ಧಯ? ಆತ ಪ್ರೀತಿಸುವುದು ತನ್ನನ್ನು- ಸ್ಕಾರ್ಲೆಟ್‍ಳನ್ನು –ತಾನು ಬಲ್ಲೆ!

    ಒಳಗೆ ಹಾಲ್‍ನಲ್ಲಿ ಮ್ಯಾಮಿಯ ಹೆಜ್ಜೆ ಸದ್ದು ಕೇಳಿಸಿದೊಡನೆ ಸ್ಕಾರ್ಲೆಟ್‍ಎಚ್ಚುತ್ತು ಸರಿಯಾಗಿ ಕುಳಿತಳು. ಮ್ಯಾಮಿಗೆ ಏನೇನೂ ತಿಳಿಯಕೂಡದು. ಒಹಾರಾ ಕುಟುಂಬವನ್ನು ದೇಹಾತ್ಮ ಸಮೇತ ತನ್ನದಾಗಿಸಿಕೊಂಡಿರುವ ಮ್ಯಾಮಿಗೆ ಸಂಶಯ ಬಂದರೆ ಆಗಿಹೋಯಿತು! ಸೀಳುನಾಯಿಯಂತೆ ಸುಳುವು ಹತ್ತುವದರೆಗೆ ಬಿಡಲಾರಳು!

    ಮ್ಯಾಮಿ ಹಾಲ್‍ನಿಂದ ಹೊರಬಂದಳು. ಮಹಾಕಾಯದ, ಆನೆಯಂಥ ಸೂಕ್ಷ್ಮ, ಚುರುಕು ಕಂಗಳ, ಹೊಳೆವ ಕಪ್ಪುವರ್ಣದ ಶುದ್ದ ಆಪ್ರಿಕನ್ ಮಹಿಳೆ! ಒಹಾರಾ ಕುಟುಂಬಕ್ಕೆ ತನ್ನನ್ನೇ ಸಮರ್ಪಿಸಿಕೊಂಡ, ತಾಯಿ ಎಲೆನ್‍ಳ ಮುಖ್ಯಾಧಾರವಾದ, ಎಲೆನ್‍ಳ ಮೂವರು ಪ್ರತಿಯರನ್ನೂ ಕಂಗೆಡಿಸುವ, ಕೆಲಸದಾಳುಗಳಿಗೆ ಸಿಂಹಸ್ವಪ್ನವಾದ ಶಿಸ್ತಿನ ಆಗರ! ಬಣ್ಣದಲ್ಲಿ ಕಪ್ಪಾದರೂ, ಚಾರಿತ್ರ್ಯಬೋಭರ ಹಾಗೂ ಆತ್ಮಾಭಿಮಾನದಲ್ಲಿ ತನ್ನೊಡೆಯರಿಗೆ ಸಮ ಅಥವಾ ಅವರನ್ನೂ ಮೀರಿಸಿದಾಕೆ! ಎಲೆನ್ ಒಹಾರಾಳ ತಾಯಿ- ಶ್ರೀಮತಿ ರೋಬಲ್ಲಾರ್ಡ್‍ಳೂ ಮನೆಯ ಶಿಸ್ತು ಗತ್ತಿನಲ್ಲಿ ರೂಪುಗೊಂಡಾಕೆ! ಎಲೆನ್‍ಗೂ ಮ್ಯಾಮಿಯಾಗಿದ್ದ ಆಕೆ ಸಾವನ್ನಾದಿಂದ ಎಲೆನ್‍ಳೊಡನೇ ಇಲ್ಲಿಗೆ ಬಂದಿದ್ದಳು. ತಾವು ಪ್ರೀತಿಸಿದವರ ಪಾವಿತ್ತ್ಯವನ್ನೂ ಕಾಯುವ ಹೊಣೆಯನ್ನು ಹೊತ್ತುಕೊಂಡಾಕೆ ಸದಾ ಈ ದಿಸೆಯಲ್ಲಿ ಕಾರ್ಯನಿರತಳೇ ಅಗಿರುತ್ತಿದ್ದಳು.

    ಅವರು ಹೊರಟುಹೋದರೇ? ಅವರನ್ನು ಊಟಕ್ಕೆ ನಿಲ್ಲುವಂತೆ ಹೇಳಲಿಲ್ಲವೇಕೆ ಸ್ಕಾರ್ಲೆಟ್? ಅವರಿಗಾಗಿ ಎರಡು ಹೆಚ್ಚಿಗೆ ಬಟ್ಟಲುಗಳನ್ನಿಡುವಂತೆ ನಾನು ಪೋರ್ಕ್‍ಗೆ ಹೇಳಿದ್ದೆ. ಇದೇ ಏನು ನಿನ್ನ ಸಭ್ಯತೆ?

    ಓಹ್! ಅವರು ಯುದ್ದದ ಬಗ್ಗೆ ಮಾತಾಡುವುದನ್ನು ಕೇಳಿಯೇ ರೋಸಿ ಹೋಗಿದ್ದೆ. ಇನ್ನು ಊಟದುದ್ದಕ್ಕೂ ಪಪ್ಪಾನೂ ಅವರೊಡನೆ ಸೇರಿಕೊಂಡು ಬೊಬ್ಬಿರಯುವುದನ್ನು ಕೇಳುವುದೆಂತು?

    ಮಿಸ್ ಎಲೆನ್ ಹಾಗೂ ನಾನು ಎಷ್ಟು ಯತ್ನಿಸಿದರೂ ಒಂದು ಕೆಲಸದಾಳಿಗಿಂತ ಹೆಚ್ಚಿನ ಸಭ್ಯತೆಯು ನಿನಗಿಂತೂ ಬಂದಿಲ್ಲ, ನೋಡು. ಇರುಳಗಾಳಿ ಬೀಸತೊಡಗಿದೆ; ಆದರೂ ಶಾಲು ಹೊದೆಯೆದೆ ಕುಳಿತಿರುವೆ. ಏಳು; ಒಳಗೆ ನಡೆ,

    ಇಲ್ಲ: ನಾನಿಲ್ಲೇ ಕುಳಿತು ಸೂರ್ಯಾಸ್ತ ನೋಡಬಯಸುವೆ. ಎಷ್ಟೊಂದು ಚೆನ್ನಾಗಿದೆ! ಪ್ಲೀಸ್, ಮ್ಯಾಮಿ; ನೀನೇ ಹೋಗಿ ನನ್ನ ಶಾಲಿ ತೆಗೆದುಕೊಂಡು ಬಾ. ನಾನು ಪಪ್ಪ ಬರುವವರೆಗೆ ಇಲ್ಲೇ ಇರಬಯಸುವೆ.

    ಮ್ಯಾಮಿ ಶಾಲು ತರುವುದನ್ನು ಕಾಯುತ್ತಾ ಕುರುವುದು ಸ್ಕಾರ್ಲೆಟ್‍ಳ ಉದ್ದೇಶವಾಗಿರಲಿಲ್ಲ. ಹಿಂದಿರುಗಿದ ಆಕೆ ಪುನಃ ತನ್ನ ನಡತೆಯ ಬಗ್ಗೆ ಮಾತೆತ್ತುವುದನ್ನು ಕೇಳಿ ಸಹಿಸುವುದು ಅವಳಿಂದ ಅಸಾಧ್ಯವಿತ್ತು. ಅಲ್ಲದೆ, ವಿಲ್ಕ್ಸ್ ಮನೆಗೆ ಹೋಗಿರುವ ತಂದೆಯನ್ನು ಊಟಕ್ಕೆ ಮೊದಲು ಏಕಾಂತದಲ್ಲಿ ಬೇಟಿಯಾಗಿ. ಅಲ್ಲಿಯ ಸಮಾಚಾರವನ್ನೂ ಅರಿಯಬೇಕಿತ್ತು. ಹಾಲು ಬಿಳಿಯ ಬಣ್ಣದ ಟೊಪ್ಪಿಗೆಯಿಂದ ಅವೇತವಾದ ಮ್ಯಾಮಿಯ ಅಗಲವಾದ ಕರಿಯ ಮುಖವು ಮೇಲಣ ಕಿಟಕಿಯಿಂದ ತನ್ನನ್ನು ನೋಡುತ್ತಿಲ್ಲವೆಂದು ಖಚಿತಪಡಿಸಿಕೊಂಡ ಸ್ಕಾರ್ಲೆಟ್, ತನ್ನ ಲಂಗವನ್ನು ಎತ್ತಿ ಹಿಡಿಸು ಪುಟ್ಟ ರಿಬ್ಬನ್ ಲೇಸ್‍ನ ತನ್ನ ಚಪ್ಪಲಿಗಳ ತನ್ನನ್ನು ಒಯ್ದಷ್ಟು ವೇಗವಾಗಿ ಮುಂದನ ದಾರಿಗುಂಟ ಸಾಗಿದಳು.

    ಅಳು ಮಗಳು ಡಿಲ್ಲಿಯನ್ನು ಕೊಂಡು ತರಲೆಂದು ಅಂದು ಮಧ್ಯಾಹ್ನ ಅವಳ ತಂದೆ ವಿಲ್ಕ್ಸ್ ಪ್ಲಾಂಟೇಶನ್‍ಗೆ ಹೋಗಿದ್ದರು. ಅಲ್ಲಿನ ಮುಖ್ಯ ಹೆಣ್ಣಾಳಾಗಿದ್ದ ಡಿಲ್ಸಿಯನ್ನು ಆರುತಿಂಗಳ ಹಿಂದೆ ಮದುವೆಯಾಗಿದ್ದ ಪೋರ್ಕ್, ಆಕೆಯನ್ನು ಕೊಂಡುಕೊಳ್ಳುವಂತೆ ಅಂದಿನಿಂದಲೂ ತನ್ನೆಜಮಾನನನ್ನು ಒತ್ತಾಯಿಸುತ್ತಲೇ ಇದ್ದ.

    ಕಾಲುದಾರಿಯ ಇಕ್ಕೆಡೆಗಳಲ್ಲಿ ಒತ್ತಾಗಿ ಬೆಳೆದು ಕೊನೆಯಲ್ಲಿ ಒಂದಾಗಿ ಮೇಲೆ ಹೆಣೆದು ಕಮಾನು ನಿರ್ಮಿಸಿದ್ದು ಸಿಡರ್ ವೃಕ್ಷಗಳ ಮರೆಯಲ್ಲಿ, ತಿರುವನ್ನು ದಾಟಿ ಮರೆಯಾಗಿ ಕುಳಿತು ತಂದೆಯಾಗಿ ವಿಹ್ವಳಳಾಗಿ ಕಾಯತೊಡಗಿದಳು ಸ್ಯಾರ್ಲೆಟ್. ಮುಂದೆ ಹರಡಿದ್ದ ರಕ್ತಕೆಂಪಿನ ದಾರಿಗುಂಟ, ಬೆಟ್ಟದ ಕೆಳಗಿನ ಫ್ಲಿಂಟ್ ನದಿಯಾಚೆಗೆ ಮತ್ತೊಂದು ಬೆಟ್ಟದ ಮೇಲಿತ್ತು ವಿಲ್ಕ್ಸ್ ಮನೆ ಟ್ವೆಲ್ವ್ ಓಕ್ಸ್! ಅವಳ ಮನ ಅಲ್ಲೇ ನಿಂತಿತ್ತು.

    ಬಾಲ್ಯದಿಂದ ಒಟ್ಟಿಗೆ ಬೆಳೆದಿದ್ದರೂ, ಎರಡು ವರ್ಷಗಳ ಕೆಳಗೆ ತನ್ನ ಯೋರೋಪ್ ಪ್ರವಾಸದಿಂದ ಆಶ್‍ಲಿ ಹಿಂದಿರುಗಿದಾಗಲಷ್ಟೇ ಸ್ಕಾರ್ಲೆಟ್ ಅವನತ್ತ ಆಕರ್ಷಿತಳಾಗಿದ್ದಳು. ತನ್ನನ್ನು ಭೇಟಿಯಾಗಲೆಂದು ಬಂದಿದ್ದ ಆತನ ಉಡುಪಿನ ವಿನ್ಯಾಸವು ಅವಳಿಗೆ ಅಕ್ಷೆಶಃ ನೆನಪಿತ್ತು. ತನ್ನನ್ನು ಕಂಡೊಡನೆ ತಲೆಯಲ್ಲಿನ ಅಗಲವಾದ ಪನಾಮಾ ಹ್ಯಾಟ್ ತೆಗೆದು ಕೈಯಲ್ಲಿ ಹಿಡಿದು, ಮೆಟ್ಟಲ ಕೆಳಗಿಂದ ತನ್ನನ್ನು ದಿಟ್ಟಿಸಿ, ಮಾಸಲು ಬೂದು ಕಂಗಳನ್ನರಳಿಸಿ ನಗುತ್ತಾ ನಿಂತಿದ್ದನಾತ. ಆ ಬೆಳ್ಳಿಕೂದಲು ಬಿಸಿಲಿಗೆ ಹೊಳೆಯುತ್ತಿತ್ತು. ತನ್ನ ಇಂಪಾದ ಮಾದಕ ಸ್ವರದಲ್ಲಿ ನೀನು ಬೆಳೆದಿರುವೆ, ಸ್ಕಾರ್ಲೆಟ್ ಎಂದ ಆತ ಅವಳ ಕೈಗೆ ಮುತ್ತಿಟ್ಟಿದ್ದ. ಅವಳ ಹೃದಯ ಅವೆಂತು ಕುಣಿದು ಕುಪ್ಪಳಿಸಿತ್ತು! ಆ ಗಳಿಗೆಯಲ್ಲೇ ಆತ ತನಗೆ ಬೇಕೆಂದು ಅವಳಿಗನಿಸಿತ್ತು.

    ಅವನೆಂದೂ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿರಲಿಲ್ಲ. ಇಂತರ ಪುರುಷರಾತೆ ಅವನ ಕಂಗಳಲ್ಲಿ ಬಯಕೆಯ ಕಿಡಿ ಪ್ರಜ್ವಲಿಸಿರಲಿಲ್ಲ. ಆದರೂ ಆತ ತನ್ನನ್ನು ಪ್ರೀತಿಸುತ್ತಿರುವನೆಂದು ಅವಳಿಗರಿವಾಗಿತ್ತು. ಅಂತಃಪ್ರಜ್ಷೆ ಹಾಗೂ ಅನುಭವದ ಜ್ಞಾನ ಇದನ್ನವಳಿಗೆ ತಿಳಿಸಿತ್ತು. ಎಷ್ಟೋ ಬಾರಿ ಅವನ ಕಂಗಳು ತಿಳಿಯಾದಾಗ ಅವುಗಳಲ್ಲಿ ಬಯಕೆಯ ಕಾತರದೊಡನೆ ಏನೋ ದುಃಖ ಮೇಳವಿಸಿ ಕಂಡು ಆಕೆಯನ್ನು ದಿಗಿಲಿಗೀಡು ಮಾಡಿದ್ದೆವು. ಅವನನ್ನು ಅರಿಯುವುದು ಅಸಾಧ್ಯವೇ ಇತ್ತು.

    ಆಶ್‍ಲಿ ಸ್ನೇಹಪರನಾಗಿದ್ದರೂ ದೂರ ಕೈಗೆಟುಕಂದತಿದ್ದನು. ಅನಿಸಿದ್ದನ್ನು ಆಡಿಯೋ ಬಿಡುವಂತಹ ಸುತ್ತಣ ಜನರ ಮಧ್ಯೆ ಆತನ ಭಿನ್ನ ವ್ಯಕ್ತಿತ್ವವು ಕಂಗೆಡಿಸುವಂತಿತ್ತು. ಕೌಂಟಿಯ ಇತರ ಹುಡುಗರಂತೆ ಬೇಟೆ, ನೃತ್ಯ, ಜೂಜು, ರಾಜಕೀಯ ಎಲ್ಲದರಲ್ಲೂ ಆತ ಪ್ರಖ್ಯಾತನಿದ್ದ. ಕುದುರೆ ಸವಾರಿಯಲ್ಲಂತೂ ಅಪ್ರತಿಮನೇ ಅಗಿದ್ದ. ಆದರೂ ಇವೇ ಅವನ ಜೀವನದ ಗುರಿಯಾಗಿರಲಿಲ್ಲ, ಪುಸ್ತಕ, ಸಂಗೀತ, ಕವಿತಾ ಎಚನೆಯ ಅಭಿರುಚಿಗಳಲ್ಲಂತೂ ಆತ ಅನನ್ಯವಾಗಿದ್ದ. ಇವುಗಳಲ್ಲಿ ತನಗೇನೂ ರುಚಿ ಇರದಿದ್ದರೂ ಆತ ಮಾತ್ರ ತನಗೆ ಬೇಕೆ ಬೇಕೆನಿಸಿತ್ತು. ಪ್ರತಿದಿನವೂ ಆತ ತನ್ನೊಡನೆ ಪ್ರೇಮ ನಿವೇಧನೆ ಮಾಡುವನೆಂದುಕೊಂಡು ಮತ್ತೆ ನಿರಾಶಳಾಗುತ್ತಿದ್ದಳಾಕೆ. ಆಕೆ ಅವನನ್ನು ಪ್ರೀತಿಸುತ್ತಿದ್ದಳು; ಬಯಸುತ್ತಿದ್ದಳು; ಆದರೆ ಅವನನ್ನು ಅರಿತಿರಲಿಲ್ಲ. ಅವನನ್ನು ಅರಿಯುವುದು ಸುಲಭವಿರಲಿಲ್ಲ. ಕ್ರಿಯಾಸೀಲವಲ್ಲದ, ಕನಸುಗಳ ಬಣ್ಣದ ಲೋಕದಲ್ಲಿ ವಾಸ್ತವವನ್ನು ಮರೆವ, ಜೀವನವನ್ನು ನಿರ್ಲಿಪ್ತತೆಯಿಂದ ಕಾಣುವ ಜನರಲ್ಲಿ ಅವನು ಒಬ್ಬನಾಗಿದ್ದ. ತನ್ನ ಅರಿವಿಗೆ ನಿಲುಕದ ಆತ ತನ್ನ ಮನವನ್ನೇಕೆ ಸೆರೆಹಿಡಿದಿರುವನೆಂಬುದು ಸ್ಕಾರ್ಲೆಟ್‍ಗೆ ಸಮಸ್ಯೆಯೇ ಆಗಿತ್ತು.

    ಈ ರಹಸ್ಯವೇ ಅವಳು ಅವನೆಡೆಗೆ ಇನ್ನೂ ಹೆಚ್ಚು ಆಕರ್ಷಿತಳಾಗುವಂತೆ ಮಾಡಿತ್ತು. ಬಯಸಿದ್ದನ್ನೆಲ್ಲ ಪಡೆದ ಆಕೆ ಈಗ ಆಶ್‍ಲಿಯು ತನಗೆ ಸಿಕ್ಕೇ ಸಿಗುವನೆಂದು ದೃಢವಾಗಿ ನಂಬಿದ್ದಾಗ ಬರಸಿಡಿಲಿನಂತೆ ಬಂದೆರಗಿತ್ತು, ಈ ವಾರ್ತೆ!

    ಕಳೆದ ವಾರದಷ್ಟೇ, ಒಂದು ಮುಸ್ಸಿಂಜೆ ‘ಫ್ವೇರ್‍ಹಿಲ್’ ನಿಂದ ಹಿಂದಿರುಗುವಾಗ, ಆತ ಅವಳಿಗೇನೋ ಮುಖ್ಯವಾದ್ದನ್ನು ಹೇಳಬಯಸಿ ಹೇಳಲಾರದೆ, ತನ್ನನ್ನೇ ಹೇಡಿಯೆಂದು ಕರೆದುಕೊಳ್ಳುತ್ತಾ ಹೊರಟುಹೋಗಿದ್ದ. ಸಂತಸದಿಂದ ಉಬ್ಬಿದ ಹೃದಯದಿಂದ ಅಂದು ಆತನ ಮಾತುಗಳಿಗೆ ಕಾದಿದ್ದಳು, ಸ್ಯಾರ್ಲೆಟ್. ಇಂದು ಅದರರ್ಥ ಬೇರೆಯೇ ಇರಬಹುದು ಎಂಬ ಅರಿವಿನಿಂದ ಅವಳ ಹೃದಯ ಕುಸಿಯಿತು.

    ದಿಗಂತದಂಚಿನಲ್ಲಿ ಅಸ್ತಂಗತನಾಗುತ್ತಿದ್ದ ಸುರ್ಯನೊಡನೆ ಕೆಂಪು ಪ್ರಭೆ ಕರಗಿ ಗುಲಾಬಿಯಾಯಿತು. ಮೇಲೆ ಆಕಾಶದ ಕಡುನೀಲಿ ಬಣ್ಣ ಕರಗಿ ರೋಬಿನ್ ಹಕ್ಕಿಯ ಮೊಟ್ಟೆಯಂತೆ ನಿಲಿ-ಹಸಿರು ಬಣ್ಣವಾಯ್ತು. ಕತ್ತಲು ಮುಸುಕುತ್ತಾ ಬಂದಂತೆ ನೆಲದ ರಕ್ತವರ್ಣವು ಸಾಧಾರಣ ಕಂದುಬಣ್ಣಕ್ಕೆ ತಿರುಗಿತು. ಹುಲ್ಲುಗಾವಲ ಬೇಲಿಗೆ ತಲೆಯೊರಗಿಸಿ ನಿಂತು., ಕೊಟ್ಟಿಗೆಗೆ ಕರೆದೊಯ್ಯಲ್ಪಡುವುದನ್ನೇ ಕಾಯುತ್ತಿದ್ದ ದನ, ಕರು, ಕತ್ತೆ, ಕುದುರೆಗಳು ಅಪ್ರಿಯವಾದ ಅವರಿಸುವ ಕತ್ತಲ ನೆರಳಲ್ಲಿ ಸ್ಕಾರ್ಲೆಟ್: ಇರವು ಪ್ರಿಯವೆನಿಸಿದಂತೆ ಅವಳತ್ತ ಕಿವಿಗಳನ್ನು ನಿಮಿರಿಸಿ ಕಾದಿದ್ದವು.

    ದಿನದಲ್ಲಿ ಹಸಿರಾಗಿ ಹೊಳೆಯುತ್ತದ್ದ ಪೈನ್‍ವೃಕ್ಷಗಳ ಕಾಡು ದಟ್ಟಕಪ್ಪಿನ ಸಮೂಹಿಕವಾಗಿ, ಬುಡದಲ್ಲಿ ಹರಿಯುತ್ತಿದ್ದ ಹಳದಿ ಹೊಳಡಯಾಚೆಗಿನ ಬೆಟ್ಟದ ತುದಿಯಲ್ಲಿನ ವಿಲ್ಕ್ಸ್ ಮನೆಯ ಬಿಳಿ ಚಿಮಿಣಿಗಳು ಸುತ್ತಣ ಓಕ್ ವೃಕ್ಷಗಳ ದಟ್ಟ ನೆರಳಲ್ಲಿ ಕರಗಿ ಹೋದವು. ವಸಂತದ ಪ್ರಿಯವಾದ ತಂಪಿನಲ್ಲಿ ಸುತ್ತಣ ಹಸಿರತೇವದ ಕಂಪು ಹಿತವಾಗಿತ್ತು.

    ಸೂರ್ಯಾಸ್ತ, ವಸಂತ ಹಾಗೂ ಹಸಿರಿನ ಬೆಡಗು ಸ್ಯಾರ್ಲೆಟ್‍ಗೆ ಹೊಸದಾದುದಾಗಿರಲಿಲ್ಲ. ಆದರೆ ಎಂದೂ ಪ್ರಜ್ಞಾಪೂರ್ವಕವಾಗಿ ಸ್ತ್ರಿಯರ ಮುಖ, ಸಿಲ್ಕ್ ಉಡುಪುಗಳು, ಕುದುರೆಗಳು ಇಂಥವಲ್ಲದೆ ಇತರ ವಿಷಯಗಳಲ್ಲಿ ಸೌಮದರ್ಯಪ್ರಜ್ಞೆಯೇ ಇರದಿದ್ದ ಆಕೆಯನ್ನೂ ಇಂದಿನ ಇ ಪ್ರಕೃತಿಯ ಪ್ರಶಂತತೆ ತಣಿಸಿತು.

    ಸ್ಕಾರ್ಲೆಟ್ ಕತ್ತು ಉದ್ದಮಾಡಿ ನೋಡುತ್ತಿದ್ದಂತೆಯೇ ಹುಲ್ಲುಗಾವಲ ತಪ್ಪಲಲ್ಲಿ ಕೇಳಿ ಬಂದ ಜೆರಾಲ್ಡ್ ಒಹಾರಾನ ತೀವ್ರಗತಿಯ ಕುದುರೆಯ ಖುರಪುಟ ಸದ್ದು ಬೇಲಿಯ ಬಳಿ ಕಾದಿದ್ದ ಕುದುರೆಗಳನ್ನೂ, ದನಗಳನ್ನೂ ಬೆಚ್ಚಿ ಬೀಳಿಸಿತು. ಧಾವಿಸಿ ಬರುತ್ತಿರುವ ಎತ್ತರದ ಅಶ್ವಾರೂಢನಾಗಿದ್ದ ಜೆರಾಲ್ಡ್ ಒಹಾರಾ ಪುಟ್ಟ ಬಾಲಕನಂತೆ ಕಾಣಿಸುತ್ತಿದ್ದನು. ಚಾಟಿ ಬೀಸುತ್ತಾ, ಬೊಬ್ಬಿರಿಯುತ್ತಾ ಸಾಗಿದ ಆ ಸವಾರನ ನೀಳ ಚೆಳ್ಗೂದಲು ಗಾಳಿಗೆ ಹಿಂದೆ ಸರಿದು ಹಾರಾಡುತ್ತಿತ್ತು.

    ತನ್ನೆಲ್ಲ ಕಾತರದ ನಡುವೆಯೂ, ಆಕೆ ಪ್ರೀತಿಪೂರ್ಣ ಹೆಮ್ಮೆಯಿಂದ ಅಸಾಮಾನ್ಯ ಸವಾರನಾದ ತನ್ನ ತಂದೆಯನ್ನು ದಿಟ್ಟಿಸಿದಳು. ಅಲ್ಪಸ್ವಲ್ಪ ಪಾನಮತ್ತನಾದೊಡನೆ ಬೇಲಿ ಹಾರುವುದರಲ್ಲಿನ ಆತನ ರುಚಿಯು – ಅದೂ ಕಳೆದ ಬಾರಿ ಇದೇ ಸ್ಥಳದಲ್ಲಿ ಬಿದ್ದು ಮೊಣಕಾಲು ಮುರಿದುಕೊಂಡ ಬಳಿಕ ತಾಯಿಗಿತ್ತ ಭಾಷೆಯ ಹೊರತಾಗಿಯೂ – ಅವಳಿಗೆ ಬಹು ಕೌತುಕವೆನಿಸುತ್ತಿತ್ತು. ತಪ್ಪು ಮಾಡಿಯೂ ಸಿಕ್ಕಿ ಬೀಳದಿರುವ ಹುಡುಗನ ಹೆಮ್ಮೆ, ಸಂತಸಗಳ ಪ್ರತಿರೂಪವಾದ ತಂದೆ ತನ್ನ ಸಮಕಾಲೀನಂತೆ ಅವಳಿಗನಿಸುತ್ತಿತ್ತು.

    ಬಹುಸುಲಭವಾಗಿ ಬೇಲಿಹಾರಿದ ಕುದುರೆಯನ್ನು ಕಡಿವಾಣ ಹಿಡಿದು ನಿಲ್ಲಿಸಿ, ಪ್ರೀತಿಯಿಂದ ತಲೆದಡವಿ, ಅದರ ಅಸಾಮಾನ್ಯ ಸಾಮಥ್ರ್ಯವನ್ನು ಹೊಗಳಿದ ಸವಾರ, ತನ್ನ ತಲೆಗೂದಲು ಉಡುಪುಗಳನ್ನು ನೇರ್ಪಡಿಸತೊಡಗಿದ. ಒಬ್ಬ ಸಜ್ಜನನಂತೆ ಪತ್ನಿಯೆದುರು ಕಾಣಿಸಿಕೊಳ್ಳುವ ತಯಾರಿ ಇದೆಂದರಿತ ಸ್ಯಾರ್ಲೆಟ್‍ನಕ್ಕುಬಿಟ್ಟಳು.

    ಆ ನಗುವಿನ ಸ್ವರಕ್ಕೆ ಬೆಚ್ಚಿಬಿದ್ದ ಜೆರಾಲ್ಡ್ ಒಹಾರಾ ಮಗಳನ್ನು ಗುರುತಿಸಿದನು. ಕಳ್ಳತನದ ಭಾವನೆಯೊಡನೇ ಸ್ವಸಮರ್ಥನೆಯ ಮುಖಭಾವವನ್ನೂ ತೋರುತ್ತಾ ಕುದುರೆಯಿಂದಿಳಿದು ಬಳಿಬಂದ ಆತ, ಮಗಳ ಕೆನ್ನೆ ಚಿವುಟಿ ನುಡುದ: "ಸರಿ, ಹುಡುಗೀ, ನನ್ನ ಮೇಲೆ ಹೊಂಚಿ ಕೂತಿದೆಯಲ್ಲ! ಇನ್ನು ಕಳೆದ ಬಾರಿ ನಿನ್ನ ತಂಗಿ ಸ್ಯುಲೆನ್ ಮಾಡಿದಂತೆ ತಾಯ ಬಳಿಗೆ ದೂರು ಕೊಂಡೊಯ್ಯುವೆಯಲ್ಲ?!

    ಸ್ಯಾರ್ಲೆಟ್ ನಕ್ಕು, ತಂದೆಯನ್ನಣಕಿಸಿ, ಕೈಚಾಚಿ ಆತನ ಟೊಪ್ಪಿಗೆ ಸರಿಪಡಿಸಿದಳು. ‘ಇಲ್ಲ, ಪಾ! ನಾನು ಸ್ಯುಲೆನ್‍ಳಂತೆ ಚಾಡಿಕೋರಳಲ್ಲ," ಎಂದಳಾಕೆ. ಆತನ ಉಸಿರಿನಲ್ಲಿ ಕುಡಿದ ಮಾದಕ ಪೃಯದ ವಾಸನೆಯು ಮಿಂಟ್‍ನ ಪರಿಮಳದೊಡನೆ ಮಿಳಿತವಾಗಿತ್ತು. ಜೊತೆಗೇ ತಂಬಾಕು, ಕುದುರೆ ಹಾಗೂ ಪಾಲಿಶ್ ಮಾಡಿದ ಚರ್ಮದ ಪರಿಮಳವೂ ಸೇರಿಕೊಂಡಿತ್ತು. ತನ್ನ ತಂದೆಯ ಈ ಸ್ಥಾಯೀ ವಾಸನೆಯನ್ನು ಅರಿತಿದ್ದ ಸ್ಯಾರ್ಲೆಟ್ ಇತರ ಗಂಡಸರಲ್ಲೂ ಅದನ್ನು ಮೆಚ್ಚಿದ್ದಳು.

    ಗಿಡ್ಡ ದೇಹದ – ಐದಡಿಗಿಂತ ಸ್ವಲ್ಪವೇ ಎತ್ತರವಿದ್ದ – ಜೆರಾಲ್ಡ್ ಒಹಾರಾ ಸ್ಥುಲಕಾಯನಾಗಿದ್ದು, ಗಿಡ್ಡ ಸದೃಫ ಕಾಲ್ಗಳನ್ನು ಮಕ್ಕಳಂತೆ ಅಡ್ಡವರಿಸಿ ನಡೆಯುತ್ತಿದ್ದ. ಆರುವತ್ತರ ಪ್ರಾಯದ ಆತನ ಗುಂಗುರು ಕೂದಲು ಬೆಳ್ಳಿ ಬಿಳುಪಾಗಿದ್ದು, ಮುಖದಲ್ಲಿ ಸುಕ್ಕುಗಳಿರದೆ, ನೀಲಿ ಕಂಗಳಲ್ಲಿ ಇನ್ನೂ ಅಗಲವಾದ ಬಾಯಿ ಆತನ ಸಂಪೂರ್ಣ ಐರಿಶ್ ಚಹರೆಯನ್ನು ನಿಖರವಾಗಿಸಿತ್ತು.

    ತನ್ನ ಗಡಸು ಹೊರರುಪದ ಮರೆಯಲ್ಲಿ, ಜೆರಾಲ್ಡ್ ಒಹಾರಾ ಅತಿಮೃದುವಾದ ಹೃದಯವನ್ನು ಹೊಂದಿದ್ದ. ಶಿಕ್ಷಾರ್ಹನಾದ ಜೀತದಾಳಿನ ಮೊರೆಯಾಗಲೀ, ಬೆಕ್ಕಿನ ಮರಿಯೊಂದರ ಮಿಸುಕಾಟವಾಗಲೀ, ಮಗುವಿನ ಅಳುವಾಗಲೀ – ಯಾವುದನ್ನೂ ಸಹಿಸುವುದು ಅವನಿಂದ ಸಾಧ್ಯವಿರಲಿಲ್ಲ. ಆದರೆ, ತನ್ನ ಈ ದುರ್ಬಲತೆಯನ್ನು ಇತರರು ಅರಿತಾರೆಂಬ ಭಯ ಆತನಿಗಿದ್ದೇ ಇತ್ತು. ಅದನ್ನು ಮರೆಮಾಡಲು ದೊಡ್ಡಸ್ವರದಲ್ಲಿ ಬೊಬ್ಬಿಡುವ ಅಭ್ಯಾಸವನ್ನು ಬೆಳೆಸಿಕೊಂಡ ಆತ. ತನ್ನ ಈ ಬೆದರುವಾಣಿಗೆ ಎಲ್ಲರೂ ಅಂಜುವವರೇ ಎಂದಂದುಕೊಂಡಿದ್ದ. ಆತನ ಈ ಭಾವವನ್ನು ಸಮರ್ಥಿಸುವಂತೆಯೇ ಎಲ್ಲರೂ ವರ್ತಿಸುತ್ತಿದ್ದರೇ ವಿನಹ, ಸರ್ವಮಾನ್ಯವಾದುದು ಒಡತಿ ಎಲೆನ್‍ಳ ಮೃದುದನಿ ಮಾತ್ರವೆಂಬ ಸತ್ಯವನ್ನು ಅಥನಿಗೆ ಅರಿವಾಗಗೊಟ್ಟಿರಲೇ ಇಲ್ಲ.

    ತನ್ನ ತಂದೆಯ ಕೋಪ-ತಾಪಗಳಿಗೆ ಅಂಜದ ಸ್ಯಾರ್ಲೆಟ್ ಸ್ವಭಾವದಲ್ಲೂ ತಂದೆಯಂತೆಯೇ ಇದ್ದಳು. ಹುಟ್ಟಿದ ಮೂರು ಗಂಡುಮಕ್ಕಳನ್ನೂ ಕುಡುಂಬದ ರುದ್ರಭೂಮಿಯ ಮಣ್ಣಲ್ಲಿ ಹುಗಿದ ಬಳಿಕ, ಇನ್ನು ತನಗೆ ಗಂಡುಮಗುವಾಗುವ ಸಂಭವ ಇಲ್ಲವೆಂದರಿತ ಜೆರಾಲ್ಡ್ ಒಹಾರಾ ತನ್ನ ಈ ಪ್ರಿಯಪುತ್ರಿಯನ್ನೇ ಮಗನಂತೆ ಕಾಣುತ್ತಿದ್ದನು. ಕ್ಯಾರಿನ್ ಎಂದು ಕರೆಯಲ್ಪಡುತ್ತಿದ್ದ ಕೆರೊಲಿನ್ ಐರಿನ್ ಸ್ವಪ್ನ ಕಾಣುವ, ನಾಜುಕು ಸ್ವಬಾವದ ಹುಡುಗಿಯಾಗಿದ್ದಳು. ಸ್ಯುಲೆನ್ ಎಂದು ಕರೆಯಲ್ಪಡುತ್ತಿದ್ದ ಸೂಸಾನ್ ಎಲಿನರ್ ತನ್ನ ಸ್ತ್ರೀಸಹಜ ಹಿರಿಮೆ, ಗರಿಮೆಗಳ ಬಗ್ಗೆ ಹೆಮ್ಮೆಯಿರಿಸಿಕೊಂಡಿದ್ದಳು.

    ಪರಸ್ಪರದ ದೋಷಗಳನ್ನು ಮುಚ್ಚಿಡುವುದರಲ್ಲಿ ಸಹವರ್ತಿ ಆಘಿದ್ದ ಈ ತಂದೆ-ಮಗಳ ಜೋಡಿಯು, ಅವುಗಳ ಬಗ್ಗೆ ಎಲೆನ್‍ಗೆ ದುರಿಕೊಳ್ಳುವುದರಿಂದ ಅಕೆಯ ಮೃದುಮನಕ್ಕೆ ವ್ಯರ್ಥ ನೋಡವಷ್ಟೇ ಎಂಬ ಹಿರಿದಾದ ವಿಚಾರವನ್ನು ಪೋಷೊಸೊಕೊಂಡಿದ್ದರು.

    ತನ್ನ ತಂದೆ ಹೋದ ಕೆಲಸವಾಯಿತೇ ಎಂದು ವಿಚಾರಿಸಿದ ಮಗಳಿಗೆ ತಂದೆ ತನ್ನ ಕೆಲಸದ ವಿವರಣೆಯತ್ತ. ಡಿಲ್ಲಿಯೊಡನೆ ಮಗು ಪ್ರಿನ್ಸಿಯನ್ನೂ ಒಟ್ಟು ಮೂರು ಸಾವಿರ ಕೊಟ್ಟು ಕೊಂಡ ತಂದೆಯ ಕರುಣಾಸ್ವಬಾವವನ್ನು ಮೂದಲಿಸಿದ ಮಗಳನ್ನು ಗದರಿ, ಇನ್ನೆಂದು ತನ್ನ ಕರಿಯಾಳುಗಳನ್ನು ಹೊರಗಿನಿಂದ ಮದುವೆಯಾಗಲು ಬಿಡಲಾರೆನೆಂದು ಉಡಿದು ಮಗಳೊಡನೆ ಮನೆಯತ್ತ ಹೊರಟ, ಜೆರಾಲ್ಡ್ ಒಹಾರಾ.

    ಟೈಲ್ವ್ ಓಕ್ಸ್‍ನಲ್ಲಿ ಎಲ್ಲ ಹೇಗಿದ್ದಾರೆ?

    ಎಂದಿನಂತೇ! ಕೇಡ್ ಕ್ಯಾಲ್ವರ್ಟ್ ಬಂದಿದ್ದ, ಯುದ್ದದ ಬಗ್ಗೆ-

    ನಾಳಿನ ಮನಭೋಜನದ ಬಗ್ಗೆ ಏನಾದರೂ ಹೇಳಿದರೇ?

    ಹೌದು! ಆ ಮುದ್ದಾದ ಹುಡುಗಿ- ಏನವಳ ಹೆಸರು –ಮಿಸ್ ಮೆಲನಿ ಹ್ಯಾಮಿಲ್ಟನ್- ಅವಳ ತಮ್ಮ ಚಾಲ್ರ್ಸ್ ಅಟ್ಲಾಂಟಾದಿಂದ ಬಂದುರುವರು.

    ಆಶ್‍ಲಿ ಕುಡ ಇದ್ದನೇ?

    ಹೌದು: ಅವನೂ ಇದ್ದ, ಎಂದವನೇ ತಡೆದು ನಿಂತು ಜೆರಾಲ್ಡ್ ಒಹಾರಾ ಮಗಳ ಮುಖವನ್ನೇ ದಿಟ್ಟಿಸುತ್ತಾ ಕೇಳಿದ, ಇದನ್ನು ಕೇಳಲೆಂದೇ ಬಂದಿದ್ದರೆ ಮತ್ತೇಕೆ ಹಾಗೆಂದು ಹೇಳಲಿಲ್ಲ?

    ಸ್ಕಾರ್ಲೆಟ್ ಏನೂ ಉತ್ತರಿಸದಾದಳು.

    ಮಗಳೇ, ಏನಿದು ನಿನ್ನ ಹಾಗೂ ಆಶ್‍ಲಿಯ ವಿಷಯ?

    ಏನಿಲ್ಲ, ಪಾಪ; ಬಾ ಹೋಗೋಣ.

    ಹೋಗೋಣ, ಖಂಡಿತ, ಮೊದಲು ನನ್ನ ಪ್ರಶ್ನೆಗೆ ಉತ್ತರಿಸು, ನಿನ್ನೊಡನೆ ಆತ ಮದುವೆಯ ಬಗ್ಗೆ ಮಾತಾಡಿದ್ದನೇ?

    ಇಲ್ಲ.

    ಆತ ಮಾತಾಡಲಾರ: ನಾನು ಬಲ್ಲೆ. ನಾಳೆ ಅವರ ಮದುವೆಯ ನಿಶ್ಚಯದ ಘೋಷಣೆಯಾಗಲಿದೆ.

    ..............

    ಏನಿದು, ಮಗೂ? ನಿನ್ನನ್ನು ಪ್ರೀತಿಸದ ಮನುಷ್ಯನ ಬೆಂಬಿದ್ದರುವೆ? ನನ್ನ ಮಾತು ಕೇಳು, ಟಾರ್ಲ್‍ಟನ್ ಅವಳಿಗಳಲ್ಲಿ ಯಾರನ್ನಾದರೂ ಆರಿಸಿಕೋ. ನಾವು ನಮ್ಮ ಎಸ್ಟೇಟ್‍ಗಳನ್ನು ಕೊಡಿಸಿ, ಅವು ಕೊಡುವಲ್ಲಿ ನಿನಗೊಂದು ಮನೆ ಕಟ್ಟಿಸಿ ಕೊಡುತ್ತೇವೆ.

    ಇಲ್ಲ; ನನಗೇನೂ ಬೇಡ; ಯಾರೂ ಬೇಡ. ನನಗೆ ಕೇವಲ-

    ಬಲ್ಲೆ; ನಿನಗೆ ಕೇವಲ ಆಶ್‍ಲಿ ಬೇಕಾಗಿದೆ, ಎಂದ ಆತ ಶಾಂತಸ್ವರದಿಂದ ಮುಂದುವರಿಸಿದ, ಆದರೆ ಅವನನ್ನುಮದುವೆಯಾದರೆ ನೀನೆಂದೂ ಸುಖಿಯಾಗಿರಲಾರೆ. ವಿರುದ್ಧ ವ್ಯಕ್ತಿತ್ವಗಳು ಹೊಂದಿಕೊಂಡು ಹೋಗಲಾರವು. ಅವರೊಂದು ವಿಚಿತ್ರ ಜನ. ಮಗೂ, ಈದು, ಬರಹ, ಸಂಗೀತ, ಕಲೆಗಳನ್ನು ಪ್ರತೀಸುವವರು-

    ಆದರೆ ಆಶ್‍ಲಿ ಒಳ್ಳೆಯ ಸವಾರ ಕೂಡ; ಆಟಗಳಲ್ಲೂ ಮುಂದು-

    ಹೌದು; ಇಲ್ಲವೆನ್ನಲಾರೆ, ಆದರೆ ಅದಾವುದರಲ್ಲೂ ಅವನ ಮನವಿಲ್ಲ; ಅದಕ್ಕೇ ಅವರೆಲ್ಲ ವಿಚಿತ್ರವೆಂದೆ,

    ಈ ಮಾತಿನ ಸತ್ಯತೆಯನ್ನರಿತ ಸ್ಯಾರ್ಲೆಟ್ ಉತ್ತರಿಸದಾದಳು.

    ಮಗೂ, ಅವಳಿಗಳ ಬಗ್ಗೆ ಮಾತಿಗೆ ಹೇಳಿದೆನಷ್ಟೇ. ಬೇಕಿದ್ದರೆ ಕೇಡ್ ಕ್ಯಾಲ್ವರ್ಟ್‍ನನ್ನು ಮದುವೆಯಾಗು, ನನ್ನ ಈ ‘ಬಾರಾ’ವನ್ನೂ ನಿನ್ನ ಹೆಸರಿಗೇ ಬರೆಯುತ್ತೇನೆ.

    ಇಲ್ಲ; ನನಗೇನು ಬೇಡ. ‘ಟಾರಾ’ದಲ್ಲೇನಿದೆ-

    -ಬೇಕಾದವನೇ ಸಿಗದಿರುವಾಗ’ ಎಂದು ಅವಳನ್ನಲಿದ್ದಳು. ಆದರೆ ಪತ್ನಿ ಎಲೆನ್‍ಳ ನಂತರ ತನಗೆ ಪ್ರಾಣಪ್ರಿಯವಾದ ತನ್ನ ಭೂಮಿಯನ್ನು ಈ ರೀತಿ ತುಚ್ಚೇಕರಿಸಿದ ಮಗಳ ಬಗ್ಗೆ ಕುಪಿತನಾಗಿ ಆತ ನುಡಿದ, ಏನು? ಭೂಮಿಗಿಂತ ಮಿಗಿಲಾದುದು ಏನಿದೆ, ಈ ಲೋಕದಲ್ಲಿ? ಮರೆಯದಿರು, ಸ್ಕಾರ್ಲೆಟ್; ಭೂಮಿಗಾಗಿ ದುಡುಯಬಹುದು; ಕಾದಬಹುದು; ಮಡಿಯಲೂ ಬಹುದು."

    ಓ ಪಾಪಾ! ನೀನಂತೂ ಕುದ್ದ ಐರಿಶ್ ಮನುಷ್ಯನಂತೇ ಆಡುತ್ತಿರುವಿ!

    ಮತ್ತಲ್ಲವೇ! ಆಬಗ್ಗೆ ನನಗೆ ಹೆಮ್ಮೆಯಿದೆ. ದೇಹದಲ್ಲಿ ಒಂದು ತೊಟ್ಟಾದರೂ ರಕ್ತ ಇರುವವರೆಗೆ ಈ ಭೂಮಿಯು ತಾಯಿಗೆ ಸಮಾನ! ನೀನು ಅರಿಯದೆ ಆಡಿದ ಮಾತು ನನಗೆ ಅಜ್ಜಾಸ್ಪದವೆನಿಸಿದೆ. ಆದರೆ, ನೀನಿನ್ನೂ ಸಣ್ಣವಳು. ಒಂದಿಲ್ಲೊಂದು ದಿನ ಈ ಭೂಮಿಯ ಮೇಲಿನ ಪ್ರೀತಿ ನಿನ್ನಲ್ಲಿ ಮೂಡುವುದು ಖಂಡಿತ; ಐರಿಶ್ ಆದವರಾರೂ ಅದರಿಂದ ತಪ್ಪಿಸಿಕೊಳ್ಳಲಾರದು. ಇನ್ನು ಮದುವೆಯ ವಿಷಯ- ದಕ್ಷಿಣದವನೂ, ಸಜ್ಜನನೂ, ಅಭಿಮಾನಿಯೂ ಆದ ಯಾರನ್ನೇ ಆದರೂ ಮದುವೆಯಾಗು, ಹೆಣ್ಣಿಗೆ ಪ್ರೇಮವು ಮದುವೆಯ ಬಳಿಕವೇ ಆರಂಭವಾಗುತ್ತದೆ.

    "ಓ ಪಾಪಾ!? ಅಳು ಅವಳ ಬಾಯಿಂದ ಹೊಮ್ಮೆ ಬಂತು.

    ಅಳುತ್ತಿಲ್ಲವಷ್ಟೇ ಮಗೂ? ಮಗಳನ್ನು ಸಂತೈಸುತ್ತಾ ತಂದೆ ನುಡಿದ.

    ಇಲ್ಲ’ ಎಂದು ಅಸಹನೆಯಿಂದ ಬಿಡಿಸಿಕೊಂಡ ಮಗಳನ್ನೇ ಹೆಮ್ಮೆಯಿಂದ ನೋಡುತ್ತಾ, ಮಾನಂಧನೆ, ನೀನು! ನನಗೆ ಬಹಳ ಹೆಮ್ಮೆಯೆನಿಸುತ್ತಿದೆ. ಮಗೂ, ನಾಳೆಯೂ ಹೀಗೇ ಇರು.

    ಬಾ. ಹೋಗೋಣ. ನಿಮ್ಮಮ್ಮನಿಗೇನೂ ಅರಿಯಗೊಡಬೇಡ. ಸರಿ, ತಾನೇ?" ಎಂದು ಮಗಳೊಡನೆ ಮನೆಯತ್ತ ನಡೆದ, ಜೆರಾಲ್ಡ್ ಒಹಾರಾ.

    ಮನೆಯ ವೆರಾಂಡಾದಲ್ಲಿ ಟೊಪ್ಪಿಗೆ, ಶಾಲು, ಕೈ ಕವಚದೊಡನೆ ಸಿದ್ದಳಾಗಿ ತೋರುತ್ತಿದ್ದ ಎಲೆನ್ ಒಹಾರಾಳ ಬೆನ್ನ ಹಿಂದೆ ತುಟಿಯುದ್ದ ಮಾಡಿ ಅಸಮಾಧಾನ ಸೂಸುತ್ತಿದ್ದ ಮ್ಯಾಮಿಯ ಕೈಯಲ್ಲಿ, ಒಡತಿಯು ತನ್ನಾಳುಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಔಷಧ, ಬ್ಯಾಂಡೇಜ್‍ಗಳ ಚರ್ಮದ ಚೀಲವಿತ್ತು.

    ಮಿಸ್ಟರ್ ಒಹಾರಾ ಅವರನ್ನು ಕಾಣುತ್ತಲೇ ಎಲೆನ್ ಕರೆದಳು. ಮದುವೆಯಾಗಿ ಹದಿನೇಳು ವರ್ಷಗಳ ಬಳಿಕವು ನಿಯಮಬದ್ದವಾಗಿಯೇ ಸಂಭಾಷಿಸುವ ಪರಂಪರೆಗೆ ಸೇರಿದ್ದಳಾಕೆ. ಎಮ್ಮಿಯ ಮಗು ಜನಿಸಿದಂತೆಯೇ ಮರಣಿಸುವುದರಲ್ಲಿದೆ. ಅಲ್ಲಿಗೆ ಹೋಗಿ ಬರುತ್ತೇನೆ ಎಂದ ಆಕೆ ಮಗಳ ಕೆನ್ನೆ ತಟ್ಟಿ ಊಟದ ಮೇಜಲ್ಲಿ ನನ್ನ ಸ್ಥಾನವನ್ನು ನಿರ್ವಹಿಸು, ಮಗೂ ಎಂದು ಹೊರಡುಹೋದಳು.

    ಎಂದಿನಂತೇ ತಾಯ ಕೈಯ ಸ್ಪರ್ಶ ಮಾತ್ರಕ್ಕೇಸ್ಯಾರ್ಲೆಟ್ ಪುಳಕಿತಳಾದಳು. ಅವಳ ಪಾಲಿಗೆ ತಾಯು ಎಲೆನ್, ಸದಾ ತನ್ನನ್ನು ಸಂತವಿಸುವ, ಮೋಹಕ, ದಿವ್ಯಮೂರ್ತಿಯಾಗಿದ್ದಳು.

    ಜೆರಾಲ್ಡ್ ಮಡದಿಯನ್ನು ಗಾಡಿ ಹತ್ತಿಸಿ, ಜಾಗರೂಕತೆಯಿಂದ ಗಾಡಿ ನಡೆಸುವಂತೆ ನುಡಿದಾಗ, ಇಪ್ಪತ್ತು ವರ್ಷಗಳಿಂದಲೂ ಅವರ ಗಾಡಿಯೊಳಗಿದ್ದ ಟೋಬಿ, ತನ್ನ ಕರ್ತವ್ಯದ ಕುರಿತು ಹೇಳಿಸಿಕೊಂಡ ಬಗ್ಗೆ ಅಸಮಾಧಾನದಿಂದ ತುಡಿಯುದ್ದ ಮಾಡಿದ.

    ಗಾಡಿ ಸರಿದೊಡನೆ, ಹೊಳೆದ ಅಲೊಚನೆಗೆ ಜೆರಾಲ್ಡ್ ಒಹಾರಾನ ಕಂಗಳು ಮಿಂಚಿದುವು. ಮಗಳ ಸಮಸ್ಯೆಯನ್ನೇ ಮರೆತ ಆತ ನುಡಿದ, ಬಾ. ಮಗಳೇ; ಡಿಲ್ಸಿಯನ್ನು ಕೊಳ್ಳುವ ಬದಲಿಗೆ ಅವನನ್ನೇ ಮಾರಿದೆವೆಂದು ಪೊರ್ಕ್‍ಗೆ ಹೇಳುವ, ಬಾ.

    ಎಂದಿನಂತೆ ತಂದೆಯ ನಿಜರೂಪವನ್ನು ಕಂಡ ಸ್ಕಾರ್ಲೆಟ್, ಈ ಪರಿಯ ತದ್ವಿರುದ್ದ ಸ್ವಬಾವದ ಹುಟ್ಟು, ಸಂಸ್ಕøತಿಯ ತನ್ನ ತಾಯ್ತಂದೆಯರು ಅದೆಂತು ವಿವಾಹ ಬಂಧನದಲ್ಲಿ ಸಿಲುಕಿ ದಾಂಪತ್ಯ ನಡೆಸಿದರೆಂದು ಕೌತುಕಗೊಂಡಳು.

    ಅಧ್ಯಾಯ-3

    ಮೂವತ್ತೆರಡರ ಪ್ರಾಯದ ಎಲೆನ್ ಒಹಾರಾ ಆರು ಮಕ್ಕಳನ್ನು ಹೊತ್ತು, ಹೆತ್ತು, ಮೂರನ್ನು ಮನ್ಣಿಗಿರಿಸಿದ್ದಳು. ಗಾತ್ರದಲ್ಲಿ ತನ್ನ ಪತಿಗಿಂತ ತುಂಬ ಎತ್ತರವಿದ್ದರೂ, ಆ ಶಾಂತ, ಸುಮ್ಮಾನದ ನಡೆಯು ಅವಳ ಎತ್ತರವನನ್ನು ಮಹತ್ವದ್ದಾಗಿ ತೋರಿಸುತ್ತಿರಲಿಲ್ಲ. ವಿಪುಲವಾದ ಕಪ್ಪುಕೂದಲ ರಾಶಿಯ ಹಿನ್ನೆಲೆಯಲ್ಲಿ ಎದ್ದುಕಾಣುವ ಕೆನೆಬಣ್ಣದ ನಾಜೂಕು ಉರುಟು ಕತ್ತು ಹಾಗೂ ಕಡುವರ್ಣದ ಕಂಗಲನ್ನು ಮರೆಮಾಡುವ ಕಣ್ರೆಪ್ಪೆಗಳನ್ನು ಆಕೆ ತನ್ನ ಫ್ರೆಂಚ್ ತಾಯಿಂಯಿಂದಲೂ, ಉದ್ದವಾದ ನೇರಮೂಗನ್ನು ತನ್ನ ತಂದೆಯಿಂದಲೂ ಪಡೆದಿದ್ದಳು. ಆ ಕಂಗಳಲ್ಲಿ ಮಿನುಗುವ ಬೆಳಕಿದ್ದಿದ್ದರೆ, ನಗೆಯಲ್ಲಿ ಸಂವಹನದ ಬಿಸುಪಿದ್ದಿದ್ದರೆ ಆಕೆ ಅಸಾಧಾರಣ ರುಪವತಿಯಾಗಿ ತೋರಬಹುದಿತ್ತು. ಆಳುಗಳಿಗೆ ಅಣತಿಯೀಯುವಾಗಲೇ ಅಗಲಿ, ಮಕ್ಕಳನ್ನು ಎಚ್ಚರಿಸುವಾಗಲೇ ಆಗಲೀ ಎಂದೂ ಅವಳ ದನಿ ಏರಿರದಿದ್ದರೂ, ತಕ್ಷಣವೇ ವಿಧೇಯತೆಯಿಂದ ಪಾಲಿಸಲ್ಪಡುವ ಮೃದು, ಮಧುರದನಿ ಅವಳದಾಗಿತ್ತು.

    ಸ್ಯಾರ್ಲೆಟ್ ತನ್ನ ತಾಯಿಯನ್ನು ಸ್ಥಿರತೆಯ ಮೂರ್ತಿಯಾಗಿ ಕಂಡಿದ್ದಳು. ಎಂದೂ ಆಕೆ ಕುರ್ಚಿಗೆ ಬೆನ್ನೊರಗಿ ಕುಳಿತುದನ್ನಾಗಲೀ, ಹೊಲಿಗೆಯ ಕೆಲಸವಿರದೆ ಸುಮ್ಮನೆ ಇದ್ದುದನ್ನಾಗಲೀ ಅವಳು ಕಂಡಿರಲಿಲ್ಲ. ಎಷ್ಟೋ ಮುಂಹಾವುಗಳಲ್ಲಿ ಕರಿಯ ಪಾದಗಳು ಮೆಲುವಾಗಿ ನಡೆದುಬಂದು ಬಾಗಿಲು ತಟ್ಟಿದಾಗ ತನ್ನ ಔಷಧದ ಪೆಟ್ಟಿಗೆಯೊಡನೆ ಶಿಸ್ತಿನಿಂದ ಹೊರಬಿದ್ದು ಸದ್ದಿಲ್ಲದೆ ನಡೆವ, ಹಾಗೂ ಬೀತಜೀವಗಳನ್ನು ಮೆಲುದನಿಯಲ್ಲಿ ಸಮಾಧಾನಗೈವ ತನ್ನ ಮೆಚ್ಚಿನ ತಾಯನ್ನು ಅವಳು ಕಂಡಿದ್ದಳು. ಎಲೆನ್‍ಳ ಈ ಕೋಮಲ ಸ್ವಭಾವದ ಮರೆಯಲ್ಲಿ ಕಬ್ಬಣದ ಕಠಿಣತೆಯೂ ಇತ್ತೆಂಬುದನ್ನು ಎಲ್ಲರೂ ಅಂತಿದ್ದರು.

    ವರ್ಷಗಳ ಹಿಂದೆ ಎಲೆನ್ ಹೀಗಿರಲಿಲ್ಲ, ಅಂದು-ಹದಿನೈದರ ಚಂಚಲ ನಗುವಿನ ಉತ್ಸಾಹಮೂರ್ತಿಯಾಗಿದ್ದ ಆಕೆಯ ಬಾಳಿನಿಂದ-ಆ ಕಪ್ಪು ಕಂಗಳ ಬಂಧು ಫಿಲಿಫ್ ರೋಬಿಲ್ಲಾರ್ಡ್ ಹೊರಡುಹೋಗುವವರೆಗೆ! ಎಲೆನ್‍ಳ ಕಣ್ಮನ ಸೆಳೆದ ಫಿಲಿಪ್, ಹೋಗುವಾಗ ಆಕೆಯ ಹೃದಯದ ಬೆಳಕನ್ನೂ ಒಯ್ದ. ಅದೇ ವರ್ಷ ಅವಳ ಬಾಳಲ್ಲಿ ಬಂದ, ಆಕೆಗಿಂತ ಇಪ್ಪತ್ತೈದು ವರ್ಷ ಹಿರಿಯನಾದ ಜೆರಾಲ್ಡ್ ಒಹಾರಾಗೆ ಆಂತರ್ಯವಿಲ್ಲದ ನಾಜೂಕು ಹೊರಕವಚವನ್ನು ಮಾತ್ರ ಉಳಿಸಿದ್ದನಾತ.

    ಅನಥನೂ, ಬರಿಗಯಯವನೂ ಆಗಿ ಬಂದು ಇಲ್ಲೀಗ ತನ್ನ ಕಾಲಮೇಲೆ ತಾನು ನಿಂತಿದ್ದ ಜೆರಾಲ್ಡ್‍ನ ಪಾಲಿಗಂತೂ ಇದು ಅಯಾಚಿತ ಮಹಾಭಾಗ್ಯವೇ ಆಗಿತ್ತು.

    ಇಪ್ಪತ್ತೊಂದರೆ ಹರೆಯದಲ್ಲಿ ತಾಯಿಯ ಪ್ರೀತಿಯ ಮುತ್ತುಗಳು ಹಾಗೂ ಆಶೀರ್ವಾದದೊಂದಿಗೆ ತಾಯ್ನಾಡನ್ನು ಬಿಟ್ಟು ಅಮೇರಿಕಾಗೆ ಬಂದಿದ್ದ ಜೆರಾಲ್ಡ್ ಒಹಾರಾ ತನ್ನ ಅಣ್ಣಂದಿರಾದ ಜೇಮ್ಸ್ ಹಾಗೂ ಆ್ಯಂಡ್ರೂರನ್ನು ಸೇರಿ ಉತ್ಕøಷ್ಟನಾಗುತ್ತಾ ನಡೆದಿದ್ದ.

    ಒಂದು ಪೂರ್ಣರಾತ್ರಿಯ ಪೋಕರ್ ಆಟದಲ್ಲಿ ಸೈಂಟ್ ಸೈಮನ್ ದ್ವೀಪದ ಪ್ಲಾಂಟರ್ ಒಬ್ಬಾತನನ್ನು ಸೋಲಿಸಿ, ಆತನ ಒತ್ತೆಯಾಳಾಗಿದ್ದ-ಕರಾವಳಿಯಲ್ಲೇ ಅತ್ಯುತ್ತಮ ಆಳಾಗಿದ್ದ- ಪೋರ್ಕನನ್ನು ತನ್ನ ಪ್ರಥಮ ಅಳಾಗಿ ಪಡೆದ ಜೆರಾಲ್ಡ್, ಬಳಿಕ ಇಮ್ಮಡಿ ಬೆಲೆಗೂ ಅವನನ್ನು ಹಿಂದಿರುಗಿಸಲು ಒಪ್ಪಿರಲಿಲ್ಲ.

    ಜಾರ್ಜಿಯಾ ಕರಾವಳಿ ಪ್ರಾಂತ್ಯದ ಪ್ರತಿಷ್ಠಿತ ಸಮಾಜದಲ್ಲಿ ಆತನ ಕನಸುಗಳು ನನಸಾಗುವುದು ಸುಲಬವಿರಲಿಲ್ಲ. ಸ್ವಂತ ಭೂಮಾಲಿಕನಾಗುವ, ಆಳುಗಳನ್ನು ಹೊಂದುವ, ಕುದುರೆಗಳನ್ನು ಸಾಕುವ ಆತನ ಕನಸು ಕೊನೆಗೂ ಕೈಗೊಡುವಂತೆ, ಒಂದು ವಸಂತದ ರಾತ್ರಿ ಸಾವನ್ನಾದ ಪಾನಗೃಹವೊಂದರಲ್ಲಿ ಜೂಜಿನಲ್ಲಿಆತನ ಕೈಮೇಲಯಿತು. ತನಗೆ ನಿರಥ್ಕವೆನಿಸಿದ ಜಮೀನಿಗೆ ಕಂದಾಯ ತೆರುವ ಬಗ್ಗೆ ಅಸಂತುಷ್ಟನಾಗಿದ್ದ, ಹಾಗೂ ಸುಟ್ಟುಹೋದ ಮನೆಯಿಂದ ನಿರಾಶನಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಸೋಲಿಗೆ ಪ್ರತಿಯಾಗಿ ತನ್ನ ಜಮೀನನ್ನು ಅಲ್ಲಿಯೇ ಜೆರಾಲ್ಡ್ ಒಹಾರಾನ ಕೈಗೆ ಒಪ್ಪಿಸಿಬಿಟ್ಟ.

    ತನ್ನ ಸೋದರರ ಆರ್ಥಿಕ ಸಹಾಯದಿಂದ ಭೂಮಿಯನ್ನು ಒತ್ತೆಯಿಟ್ಟು, ಅಳುಗಳನ್ನು ಕೊಂಡು ತನ್ನ ಹೊಸಭೂಮಿಯಲ್ಲಿ ಹತ್ತಿ ಬೆಳೆಯ ಕೃಷಿಆರಂಭಿಸಿದ ಜೆರಾಲ್ಡ್ ಒಹಾರಾ. ಒಹಾರಾ ಬಂಧುಗಳು ಕಷ್ಟ, ಸುಖಗಳೆರಡರಲ್ಲೂ ಪರಸ್ಪರರನ್ನು ಬಿಡದೆ ಒಟ್ಟಿಗೆ ಜಗತ್ತನ್ನೆದುರಿಸುವ ವಿವೇಕವಂತ ಕುಟುಂಬವಾಗಿದ್ದರು. ತನ್ನ ದಣಿವರಿಯದ ಪರಿಶ್ರಮದಿಮದ ಗಳಿಸಿದ ಸಂಪತ್ತಿನಿಂದ ಜೆರಾಲ್ಡ್ ತನ್ನ ಅಣ್ಣಂದಿರಿಂದ ಪಡೆದ ಧನವನ್ನು ಬಡ್ಡಿಸಮೇತ ತೀರಿಸಿಬಿಟ್ಟ. ತನ್ನ ಭೂಮಿಯ ಸುತ್ತಮುತ್ತ ಇನ್ನೂ ಹೆಚ್ಚಿನ ಬೂಭಾಗಗಳನ್ನು ಕೊಂಡು ತನ್ನ ಜಮೀನನ್ನು ವಿಸ್ತರಿಸಿದ. ಸಕಾಲದಲ್ಲಿ ಬಿಳಿಗೋಡೆಗಳ ಮನೆ ‘ಟಾರಾ’ ಕೂಡ ಸಿದ್ಧವಾಗಿ ಎದ್ದು ನಿಂತಿತು. ಹಸಿರಿನ ನಡುವೆ ಎದ್ದು ನಿಂತ ಆ ಶ್ವೇತಭವನವು ಪ್ರತಿನೋಟದಲ್ಲೂ ನವೋನ್ನವವೆನಿಸಿ ಆತನನ್ನು ಪುಳಕಿತನನನ್ನಾಗಿಸುತ್ತಿತ್ತು.

    ನೆರೆಯವರೊಂದಿಗೆ ಅತ್ಯುತ್ತ, ಸೌಹಾರ್ದದಿಂದಿದ್ದ ಜೆರಾಲ್ಡ್‍ಗೆ ಎರ-ಬಲಗಳಲ್ಲಿದ್ದ ಮೆಂಕಿಟೋಶ್ ಹಾಗೂ ಸ್ಸಾಟ್ಟರಿ ಪರಿವಾರಗಳೊಂದಿಗೆ ಮಾತ್ರ ಸರಿಯಾದ ಹೊಂದಾಣಿಕೆ ಇರಲಿಲ್ಲ. ಮೊದಲನೆಯದು ನೆರೆಯವರೊಡನೆ ಬೆರೆಯದ, ಮಾತನಾಡದ, ಪರಕೀಯವೆನಿಸುವ ಕುಟುಂಬವಾಗಿದ್ದರೆ, ಎರಡನೆಯದು ತನ್ನ ಬಡತನದ ಕಾರಣ ಸದಾ ನೆರೆಮನೆಯ ಮೊರೆಹೋಗುವ ಯಾಚಕ ಕುಟುಂಬವಾಗಿತ್ತು. ಈ ಯಾಚಕ ಪ್ರವೃತ್ತಿಯ ಬಡ ಬಿಳಿಯರ ಬಗ್ಗೆ ಸಿರಿವಂತ ಕೌಂಟಿ ಕುಡುಂಬಗಳ ಕರಿಯ ಅಳುಮಕ್ಕಳಿಗೂ ಯಾವುದೇ ಸದ್ಬಾವನೆಯಾಗಲೀ, ಗೌರವವಾಗಲೀ ಇರಲಿಲ್ಲ. ಒಹಾರಾ ಹಾಗೂ ವಿಲ್ಸ್ಕ್ ಭೂಮಿಯ ನಡುವೆ ಇದ್ದ ತನ್ನ ಕೆಲವೇ ಎಕರೆ ಭೂಮಿಯನ್ನು ಯಾವುದೇ ಮೊತ್ತದ ಅಮಿಷಕ್ಕೂ ಕೈಬಿಡಲು ಈ ಪರಿವಾರ ಸಿದ್ಧವಿರಲಿಲ್ಲ. ವರ್ಷವರ್ಷವೂ ಹೊರುವ ಬಸಿರು ಹಾಗೂ ಹೆರುವ ಮಕ್ಕಳೊಡನೆ ಸ್ಲಾಟ್ಟರಿ ದಂಪತಿಗಳ ಬಟತನವೂ ಬೆಳೆಯುತ್ತಾ ಹೋಗುತ್ತಿತ್ತು.

    ಉಳಿದಂತೆ ನೆರೆಯ ವಿಲ್ಕ್ಸ್, ಕ್ಯಾಲ್ವರ್ಟ್, ಟಾರ್ಲ್‍ಟನ್, ಫೊಂಟೇನ್ ಪರಿವಾರಗಳಿಗೆಲ್ಲ ಜೆರಾಲ್ಡ್ ಒಹಾರಾ ಪರಮಪ್ರಿಯನಾಗಿದ್ದ. ಮಕ್ಕಳೂ, ನೀಗ್ರೋಗಳೂ, ನಾಯಿಗಳೂ ಮೊದಲ ನೋಡದಲ್ಲೇ ಅರಿತುಕೊಂಡ ಆತನ ದಯಾದ್ರ್ರ, ಅನುಕಂಪ ಪೂರ್ಣ ಹೃದಯದ ಪರಿಚಯ ಕ್ರಮೇಣ ಎಲ್ಲರಿಗೂ ಆಗಿತ್ತು. ಅಂತೆಯೇ ಜೆರಾಲ್ಡ್ ಒಹಾರಾ ಬಂದಲ್ಲೆಲ್ಲ ಬೇಟೆನಾಯಿಗಳ ಉತ್ಸಾಹಪೂರ್ಣ ಬೊಗಳಾಟವೂ, ಕರಿಯ ಮಕ್ಕ ಸಂತೋಷಾತಿರೇಕದ ಸ್ಪರ್ಧಾತ್ಮಕ ಬೊಬ್ಬಾಟವೂ ಕೇಳಿ ಬರುತ್ತಿದ್ದು, ಆತನ ಆಗಮನವನ್ನು ಸಾರುತ್ತಿದ್ದವು. ಬಿಳಿಯರ ಮಕ್ಕಳು ಆತನ ಮಡಿಲಲ್ಲಿ ಕುಳಿತು ಆಡಿರ್ಕೊಳಳಬಯಸಿದರೆ, ಆತನ ಗೆಳೆಯರ ಕವರಿಯರು ತಮ್ಮ ಪ್ರೇಮಪ್ರಕರಣಗಳ ಬಗ್ಗೆ ಹೇಳಿಕೊಳ್ಳಲು, ಕುವರರು ತಮ್ಮ ಸಾಲ-ಸೋಲಗಲ ಬಗ್ಗೆ ಹೇಳಿಕೊಳ್ಳಲೂ, ಪರಿಹಾರ ಪಡೆಯಲೂ ಆತನನ್ನೊಂದು ಸಾಧನವಾಗಿ ಕಂಡರು. ಒರಟುನುಡಿಯ ಮರೆಯಲ್ಲಿ ಆತನ ಪ್ರೀತಿಯ ಹೃದಯವು, ಸಹಾಯ ಹಸ್ತವು ಎಲ್ಲರಿಗಾಗಿ ತೆರೆದಿತ್ತು. ಮಿತಭಾಷಿಣಿಯಾದ ಶ್ರೀಮತಿ ವಿಲ್ಕ್ಸ್ ಕೂಡ, ಆತನೊಬ್ಬ ಸಜ್ಷನನೆಂದು ತನ್ನ ಪತಿಯೊಡನೆ ನುಡಿದಿದ್ದಳು.

    ಜೆರಾಲ್ಡ್‍ನ ಮೃದುಹೃದಯದ ಪರಿಣಾಮವಾಗಿ ಮನೆಯ ಸ್ಚಚ್ಚತೆಯಲ್ಲಿ ಅವ್ಯವಸ್ಥೆ ಹೆಚ್ಚಿಕೊಂಡಿತ್ತು. ತಮ್ಮ ಒಡೆಯ ಬೊಗಳಬಲ್ಲನಷ್ಟೇ, ಕಚ್ಚಲಾರ ಎಂದರಿತಿದ್ದ ಕರಿಯಾಳುಗಳು ಕೆಲಸದ ಬಗ್ಗೆ ಹೆಚ್ಚು ಮುತುವರ್ಜಿ ಬಹಿಸುತ್ತಿರಲಿಲ್ಲ. ‘ಟಾರಾ’ಕ್ಕೆ ಮನೆಯೊಡತಿಯ ಅಗತ್ಯ ಸ್ಪಷ್ಟವಿತ್ತು.

    ಪರದೇಶಿಯಾಗಿ ಬಂದ ಜೆರಾಲ್ಡ್ ಒಹಾರಾಗೆ ಕೌಂಟಿಯ ಉಚ್ಚ ಪರಿವಾರಗಳಲ್ಲಿ ಹೆಣ್ಣು ಸಿಗುವುದು ಸುಲಭವಿರಲಿಲ್ಲ. ಬಂದು ಹತ್ತು ವರ್ಷಗಳೇ ಕಳೆದಿದ್ದರೂ ಉತ್ತಮ ಸಾಂಸಾರಿಕ ಹಿನ್ನೆಲೆಯಿರದ ಈ ಪರಕೀಯನಿಗೆ ಹೆಣ್ಣು ಕೊಡಲು ಯಾರೂ ಸಿದ್ಧರಿರಲಿಲ್ಲ. ಕೊಎಗೆ ಆತ ಸಾವನ್ನಾದ ಸೋದರರ ಬಳಿಗೆ ಸಹಾಯ ಯಾಚಿಸಿ ಬಂದಿದ್ದ. ಹೆಚ್ಚಿನ ಭರವಸೆಯಿರದೆ ಇದ್ದರೂ ಆ ಸೋದರರು ಆತನನ್ನು ಮನೆಮನೆಗಳಿಗೂ, ಪಾರ್ಟಿಗಳಿಗೂ ಒಯ್ದರು. ಎಲ್ಲೆಡೆ ಪರಿಚಯ ಮಾಡಿಸಿದರು.

    ಹಲವರನ್ನು ಕಂಡಿದ್ದರೂ, ಜೆರಾಲ್ಡ್‍ನ ಮನಕ್ಕೊಪ್ಪಿದ ಹುಡುಗಿ ಒಬ್ಬಳೇ ಇದ್ದಳು. ಜೆರಾಲ್ಡ್ ಅಮೆರಿಕಾಕ್ಕೆ ಕಾಲಿರಿಸಿದ ನಂತರವಷ್ಟೇ ಆಕೆ ಭುವಿಯಲ್ಲಿ ಜನಿಸಿ ಬಂದಿದ್ದಳು.

    ಆಕೆ-ಎಲೆನ್ ರೊಬಿಲ್ಲಾರ್ಡ್- ತುಂಬ ಚಿಕ್ಕವಳಷ್ಟೇ ಅಲ್ಲ; ತನ್ನ ಕಸಿನ್ ಫಿಲಿಪ್ ರೊಬಿಲ್ಲಾರ್ಡ್‍ನನ್ನು ಪ್ರೇಮಿಸುತ್ತಿರುವಾಕೆ ಎಂದು ತಿಳಿಸಿ ಅಲ್ಲೂ ಜೆರಲ್ಡ್‍ನ ಯತ್ನ ವಿಫಲವಾದಂತೆಯೇ ಎಂದಂದು ಕೊಂಡಿದ್ದರು, ಆತನ ಸೋದರರು.

    ಆದರೆ, ಎಲೆನ್‍ಳ ಒಪ್ಪಿಗೆ ದೊರಕಿದಾಗ, ಸಾವನ್ನಾನಗರವೇ ಪರಮಾಶ್ಚರ್ಯ ಹೊಂದಿತ್ತು. ಎಲೆನ್‍ಳ ತಾಯ್ತಂದೆ ದಿಗ್ಬ್ರಾಮೆಗೊಂಡಿದ್ದರು. ಆದರೆ ನಡೆದುದೇನೆಂದು ಎಲೆನ್ ಹಾಗೂ ಅವಳ ಮ್ಯಾಮಿಯ ಹೊರತು ಬೇರಾರಿಗೂ ತಿಳಿದಿರಲಿಲ್ಲ.

    ಆ ರಾತ್ರಿ ನ್ಯೂ ಅರ್ಲಿನ್ಸ್‍ನಿಂದ ಬಂದ ಚಿಕ್ಕ ಕಟ್ಟಿನೊಂದಿಗಿನ ಸಂದೇಶವು, ಅಲ್ಲಿನ ಬಾರ್ ಒಂದರಲ್ಲಿ ನಡೆದ ಜಗಳದಲ್ಲಿ ಫಿಲಿಪ್ ಹತನಾದ ಸುದ್ದಿಯನ್ನು ತಂದಿತ್ತು. ಎಲೆನ್‍ಳ ಜಗತ್ತು ಅಲ್ಲಿಗೇ ಮುಗಿದಿತ್ತು ರಾತ್ರಿ ಬೆಳಗಾಗುವವರೆಗೆ ಹೃದಯವೇಧಕವಾಗಿ ಅತ್ತು ಗೋಳಿಟ್ಟ ಹುಡುಗಿ, ಬೆಳಗು ಹರಿದಾಗ ಮನೋನಿಶ್ಚಯ ತಳೆದಿದ್ದಳು. ತನ್ನ ತಂದೆ ಹಾಗೂ ಸೋದರಿಯರಾದ ಪಾಲಿನ್ ಹಾಗೂ ಯುಲಾಲಿಯರೇ ಆತನನ್ನು ಸಾವನ್ನಾದಿದಂದ ಹೊರಗಟ್ಟಿ, ಈಗ ಅವನ ಅಂತ್ಯಕ್ಕೆ ಪರೋಕ್ಷವಾಗಿ ಕಾರಣರಾದರು ಎಂದುಕೊಂಡ ಆಕೆ, ಇನ್ನೆಂದೂ ತಾನು ಅವರನ್ನಾಗಲೀ ಈ ನಗರವನ್ನಾಗಲೀ ಕಾಣಲಾರೆ, ಸಹಿಸಲಾರೆ ಎಂದು ನಿರ್ಧಾರವನ್ನು ತಾಳಿದ್ದಳು.

    ಹೀಗೆ ಶ್ರೀಮತಿ ಒಹಾರಾ ಅಗಿ ಮಾರ್ಪಡುವ ತನ್ನ ನಿರ್ಧಾರವನ್ನು ವಿರೋಧಿಸಿದುದೃ ಆದಲ್ಲಿ, ಕನ್ಯಾಮಠ ಸೇರಿ ಸನ್ಯಾಸಿನಿ ಆಗುವೆನೆಂಬ ಬೆದರಿಕೆಯು ಜೆರಾಲ್ಡ್-ಎಲೆನ್‍ರ ವಿವಾಹದಲ್ಲಿ ಪರ್ಯುವಸಾನವಾಯ್ತು. ಜೆರಾಲ್ಡ್ ಧರ್ಮಪತ್ನಿಯಾಗಿ, ಮ್ಯಾಮಿ ಹಾಗೂ ಇಪ್ಪತ್ತು ನೀಗ್ರೋ ಅಳುಗಳ ಜೊತೆ ಎಲೆನ್ ‘ಟಾರಾ’ ಪ್ರವೇಶಿಸಿದಳು.

    ಅವಳು ತೊರೆದುಬಂದ ಪಕ್ವವಾದ ಜೀವನಶೈಲಿಯ ಸುಸಂಸ್ಕøತ ಸಾನನ್ನಾದಿಂದ ಈ ಉತ್ತರ ಭೂಮಿ ಬೇಎಒಂದು ಖಂಡವೇ ಎಂಬಷ್ಟು ಭಿನ್ನವಾಗಿತ್ತು. ‘ಬ್ಲೂರಿಜ್’ ಪರ್ವತದ ತಪ್ಪಲಿನ ಈ ಭೂಮಿಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಪದರಪದರವಾಗಿ ಹಾಸಿ ಹರಡಿಕೊಂಡಿದ್ದ ಕೆಂಪು ಬೆಟ್ಟಗಳ ಮೇಲ್ಮೈಯಲ್ಲಿ ಗ್ರಾನೈಟ್ ಶಿಲೆಗಳೂ, ತಲೆಯೆತ್ತಿ ನಿಂತ ಪೈನ್‍ವೃಕ್ಷಗಳು ಸಮೃದ್ದವಾಗಿ ಮರೆದಿದ್ದವು. ಕರಾವಳಿ ಪ್ರದೇಶದ ಸುಂದರ ಸಾಗರ, ಮರಳ ತೀರ ಹಾಗೂ ಪುಟ್ಟ ಹಸಿರು ದ್ವೀಪಗಳಿಗೆ ಒಗ್ಗಿಕೊಂಡಿದ್ದ ಅಕೆಗೆ ಈ ಒಳನಾಡು ಅನಿರ್ಬಂಧಿತ ಕಾಡು ಪ್ರದೇಶದಂತೆ ಕಂಡಿತ್ತು. ಇಲ್ಲಿನ ಜನರು ದಯಾಳುಗಳಾದ ಸಹೃದಯ ಸಜ್ಜನರಾಗಿದ್ದರೂ, ಶೀಘ್ರಕೊಪಿಗಳೂ ಆಗಿದ್ದರು. ಕರಾವಳಿಯಲ್ಲಿ ಜನಜೀವನವು ಮಾಗಿದ್ದರೆ ಇಲ್ಲಿ ಅದಿನ್ನೂ ಉತ್ಸಾಹಪೂರ್ಣ, ನೂತನ ತರುಣದೆಸೆಯಲ್ಲಿತ್ತು.

    ಜಗತ್ತಿನಲ್ಲಿ ಹತ್ತಿಗಾಗಿ ಬೇಡಿಕೆ ಹೆಚ್ಚಿಕೊಂಡಿದ್ದು, ಹತ್ತಿಬೆಳೆವ ಈ ಪ್ರಾಂತ್ಯದ ಸಂಪತ್ತಿನ ಮೇರು ಶಿಖರದ ಪಯಾಣದಲ್ಲಿ ಉತ್ಸಾಹದಿಂದ ಸಾಗಿತ್ತು. ನಾಳಿನ ಬಗೆಗಿನ ಭರವಸೆಯುಜನರಿಗೆ ಜೀವನೋತ್ಸಾಹ ನೀಡಿತ್ತು. ಹಣ, ಅಳು, ಕಾಳು, ಉತ್ಪಾದನೆಯೊಂದಿಗೆ ವಾರಾಂತ್ಯದಲ್ಲಿ ಮೋಜು, ವಿಹಾರಗಳೂ ಸಾಕಷ್ಟಿದ್ದವು.

    ಕ್ರಮೇಣ, ಎಲೆನ್ ಈ ಜನರನ್ನರಿತು, ಗೌರಿವಿಸಿ ಅವರ ನೇರ ನಡೆ-ನುಡಿಯನ್ನು ಮರಚ್ಚ ತೊಡಗಿದ್ದಳು, ಕೌಂಟಿಯಲ್ಲಿಎಲ್ಲರಿಗೂ ಪರಮಪ್ರಿಯಳಾದ ಆಕೆ ಸಮರ್ಯಳೂ, ಸಯಾಳವೂ ಆದ ಒಟತಿ ಆಗಿದ್ದಳು. ನೆರೆಯವರಿಗೆ ಪರಮಾಪ್ತಳೇ ಅಗಿದ್ದಂತೆ ಮನೆಯಲ್ಲಿ ಒಬ್ಬ ಉತ್ತಮ ತಾಯಿಯೂ ನೆಚ್ಚಿನ ಪತ್ನಿಯೂ ಆಗಿದ್ದಳು.

    ಮ್ಯಾಮಿಯ ಅಭಿಪ್ರಾಯದಂತೆ ಹೆಣ್ಣು ಶಿಸುಗಳಿಗೆ ಇರಬೇಕಾದುದಕ್ಕಿಂತ ಹಚ್ಚಿನ ಆರೋಗ್ಯ, ಚಟುವಟಿಕೆಗಳಿದ್ದ ಮಗು ಸ್ಯಾರ್ಲೆಟ್‍ಗೆ ಒಂದು ವರ್ಷವಾದಾಗ ಎರಡನೆಯ ಹೆಣ್ಣಗು ಸೂಸಾನ್ ಎಲಿನರ್ ಹಾಗೂ ಮತ್ತಿಂದು ವರ್ಷದಲ್ಲಿ ಮೂರನೆ ಹೆಣ್ಮಗು ಕೆರೊಲಿನ್ ಐರಿನ್ ಜನಿಸಿದ್ದರು. ಬಳಿಕ ಹುಟ್ಟಿದ ಮೂರು ಗಂಡು ಶಿಶುಗಳೂ ನಡೆಯಲು ಕಲಿವ ಮೊದಲೇ ಇಹವನ್ನು ತೊರೆದು, ಮನೆಯಿಂದ ನೂರುಗಜಗಳ ದೂರ ಸಿಡರ್‍ವೃಕ್ಷಗಳ ಮರೆಯ ರುದ್ರಭೂಮಿಯಲ್ಲಿ ‘ಜೆರಾಲ್ಡ್ ಒಹಾರಾ ಜೂನಿಯರ್’ ಎಂಬ ನಾಪಫಲಕದೊಡನೆ ಮಣ್ಣು ಮಾಡಲ್ಪಟ್ಟಿದ್ದರು.

    ಹದಿನೈದರ ಎಳೆಹರೆಯವಾಗಿದ್ದರೂ, ವಿಹಾದೊಡನೆ ಫೌಢಳಾದ ಎಲೆನ್, ಪೂರ್ವಸಂಸ್ಕಾರ ಹಾಗೂ ಮ್ಯಾಮಿಯ ಸಹಾಯದಿಂದ ‘ಟಾರಾ’ವನ್ನು ಕೂಡಲೇ ಸುಸ್ಥಿತಿಗೆ ತಂದಳು. ಸಿಡರ್ ವೃಕ್ಷಗಳ ಸಾಲಿನ ಕಾಲುಹಾದಿಯ ಹಸಿರು, ಪೋರ್ಟಿಕೋಗೆ ಹಬ್ಬಿದ್ದ ನೀಲಿ, ಬಿಳಿ, ಗುಲಾಬಿ ಹೂಗಳ ಬಳ್ಳಿಗಳ ಹಸಿರು, ಅಂಗಣದ ಮ್ಯಾಗ್ನೀಲಿಯಾ ಹೂಗಳ ಪೊದೆಯ ಹಸಿರು ಹಾಗೂ ಎದುರು ಲಾನ್‍ಲ್ಲಿ ಬೆಳೆದಿದ್ದ ಕಡುಪಚ್ಚೆಯ ಹುಲ್ಲಿನ ಬಣ್ಣದೊಂದಿಗೆ ಮಲ್ಲಿಗೆ, ಜೀನಿಯಾ ಹೂಗಳು, ಬಳ್ಳಿಗಳ ಅಸಮಖ್ಯಾತ ನಕ್ಷತ್ರ ಸದೃಶಹೂಗಳು, ಮ್ಯಾಗನೀಲಿಯಾ ಪುಪ್ಪಗಳೂ ಸ್ಪರ್ಧಿಸುವಂತಿದ್ದವು. ಇವುಗಳಿಂದ ಆಕಷಿಧತವಾಗಿ ಎದುರು ಅಂಗಣಕ್ಕೆ ಬರುತ್ತಿದ್ದ ಟರ್ಕಿಗಳನ್ನೂ, ಬಾತುಗಳನ್ನೂ ಓಡಿಸಲು ಪುಟ್ಟ ನೀಗ್ರೋ ಬಾಲಕನೊಬ್ಬ ಕೈಯಲ್ಲಿ ಟವೆಲ್ ಹಿಡಿದು ಮೆಟ್ಟಿಲಲ್ಲಿ ಕುಳ್ಳಿರುತ್ತಿದ್ದುದು ‘ಟಾರಾ’ದ ಸ್ಥಿರಚಿತ್ರವೇ ಆಗಿತ್ತು.ನ ಹತ್ತುವರ್ಷ ಈ ಕೆಲಸದಲ್ಲಿ ನುರಿತ ಕರಿಯ ಚಿಣ್ಣರನ್ನು ಆ ಬಳಿಕ ‘ಟಾರಾ’ದ ಜಮೀನಿಗೆ ಸೇರಿದ್ದ ಸಮಗಾರ, ಬಡಗಿ ಇವರಲ್ಲಿಗೂ, ದನಕರುಗಳನ್ನು ಕಾಯುವ ಕೆಲಸಕ್ಕೂ ಕಳುಹಿಸಿದಲಾಗುತ್ತಿತ್ತು. ಈ ಎಲ್ಲ ಕುಶಲಕಾರ್ಯಳಲ್ಲೂ ವಿಫಲರಾಗುವವರನ್ನು ಕೊನೆಗೆ ಗದ್ದೆಯಾಳುಗಳಾಗಿ ಶಾಶ್ವತವಾಗಿ ನೇಮಿಸಲಾಗುತ್ತಿತ್ತು.

    ಗಂಡಿನ ಅಧಿಪತ್ಯದ ಸಮಾಜದಲ್ಲಿ ಹೆಣ್ಣಿನ ಬಾಳು ಸುಲಭವಾಗಲೀ, ಸುಖಕರವಾಗಲೀ ಆಗಿರಲಿಲ್ಲ, ತನ್ನೆಲ್ಲ ಸಂಸ್ಕರದೊಡನೆ, ಸಂಸಾರದ ಭಾರವನ್ನು ಹೊತ್ತೂ ಸೌಂದರ್ಯವನ್ನುಳಿಸಿಕೊಳ್ಳುವ ತರಬೇತು ಪಡೆದಿದ್ದ ಎಲೆನ್ ಈಗ ತನ್ನ ಮಕ್ಕಳನ್ನೂ ಅದೇ ಸಂಸ್ಕøತಿಯಲ್ಲಿ ಬೆಳೆಸಲು ಎಳೆಸಿದಳು. ಕಿರಿಯರಿಬ್ಬರೊಡನೆ ಇದು ಸುಲಭಸಾರ್ಧಯವಾದರೂ ಜೆರಾಲ್ಡ್‍ನ ಮಗಳೇ ಆದ ಸ್ಕಾರ್ಲೆಟ್‍ಗೆ ಸ್ತ್ರೀತ್ವದ ಹಾದಿ ಸುಗಮವಿರಲಿಲ್ಲ.

    ಮ್ಯಾಮಿಯ ಅಸಮಾಧಾನಕ್ಕೆ ಇಂಬಾಗುವಂತೆ ಸ್ಕಾರ್ಲೆಟ್‍ಳ ಜೊತೆಗಾರರು ಅವಳ ಸೋದರಿಯರಾಗಲೀ, ವಿಲ್ಸ್ಕ್ ಕುವರಿಯರಾಗಲೀ ಆಗಿರದೆ, ಜಮೀನಿನ ಕರಿಯರ ಮಕ್ಕಳೂ, ನೆರೆಯ ಹುಡುಗರೂ ಆಗಿದ್ದರು! ಅವರಷ್ಟೇ ದಕ್ಷತೆಯಿಂದ ಆಕೆ ಮರವೇರಬಲ್ಲವಳಿದ್ದಳು; ಕಲ್ಲು ಬಂಡೆಗಳನ್ನು ಎಸೆಯಬ್ಬವಳಿದ್ದಳು. ಕ್ರಮೇಣ, ತಾಯಿ ಹಾಗೂ ಮ್ಯಾಮಿಯ ನಿರಂತರ ಯತ್ನದಿಂದ ಪುರುಷರನ್ನು ಆಕಷಿಸಬಲ್ಲ, ಪರಿಪೂರ್ಣ ಸ್ತ್ರೀ ಸೌಂದರ್ಯವನ್ನು ಹೊಂದುವಲ್ಲಿ ಸ್ಕಾರ್ಲೆಟ್ ಸಫಲಳಾದಳು. ಮುಗ್ಧತೆಯೂ, ಮಾಧುರ್ಯವೂ ಮೇಳವಿಸಿದ ಬಾಹ್ಯರುಪದ ಮರೆಯಲ್ಲಿ ಬುದ್ಧಿವಂತಿಕೆಯನ್ನು ಅಡಗಿಸಿಡುವುದನ್ನು ಆಕೆ ಕಲಿತಳು.

    ಹದಿನಾರರ ಹರೆಯಲ್ಲಿ, ಮ್ಯಾಮಿ, ಎಲೆನ್‍ರು ರೂಪಿಸಿದಂತೆ ಮುದ್ದಾಗಿಯೂ, ಮೋಹಜವಾಗಿಯೂ ಮಾದಕವಾಗಿಯೂ ತೋರತೊಡಗಿದ ಸ್ಕಾರ್ಲೆಟ್, ಆಂತರ್ಯದಲ್ಲಿ ಅಷ್ಟೇ ಮನಸ್ಸಿನಿಯೂ, ಹಟಮಾರಿಯೂ ನಿರರ್ಥಕಳೂ ಆಗಿದ್ದಳು. ತನ್ನ ಐರಿಶ್ ತಂದೆಯ ರಾಗೋದರೇಕಗಳನ್ನು ಸಂಪೂರ್ಣ ಹೊಂದಿದ್ದ ಅವಳಲ್ಲಿ ತಾಯಿಯ ನಿಃಸ್ವಾರ್ಥತೆ ಹಾಗೂ ತಾಳ್ಮೆಯ ಲೇಶಮಾತ್ರ ಲೇಪವಿತ್ತು. ತಾಯಿಯೆದುರು ತನ್ನ ಮಾಧುರ್ಯವನ್ನು ಮಾತ್ರ ಪ್ರಕಟಿಸಿ, ನಿಜರೂಪವನ್ನು ಆಡಗಿಸಿಡುವ ಬಗ್ಗೆ ಆಕೆ ಸದಾ ಎಚ್ಚರದಿಂದಿರುತ್ತಿದ್ದಳು. ಕಾರಣ, ಎಲೆನ್ ತನ್ನ ಆರೋಪಸೂಚಕ ನೋಟಿಮಾತ್ರದಿಂದಲೇ ಮಗಳ ಕಣ್ಗಳಲ್ಲಿ ಕಣ್ಣೀರು ಬರಿಸುವಲ್ಲಿ ಸಫಲಲಾಗುತ್ತಿದ್ದಳು.

    ಆದರೆ, ತಾಯಿತಂತೆ ಮ್ಯಾಮಿಯನ್ನು ಮೋಸಗೊಳಿಸುವುದು ಸಾಧ್ಯವಿರಲಿಲ್ಲ. ಸ್ಕಾರ್ಲೆಟ್‍ಳ ನಿಜಸ್ಥಭವದ ಪೂರ್ನಅರಿವು ಮ್ಯಾಮಿಗೆ ಇದ್ದುದರಿಂದ ಆಕೆ ಎಂದೂ ಮೋಸ ಹೋಗುತ್ತಿರಲಿಲ್ಲ.

    ಯೌವನಕ್ಕೆ ಅಡಿಯಿರಿಸಿದಾಗ, ವರಬೇಟೆಗೆ ಅಗತ್ಯವಾದ ತರಬೇತಿ ಪಡೆದು ಅಂತೆಯೇ ವರ್ತಿಸತೊಡಗಿದ ಸ್ಕಾರ್ಲೆಟ್‍ಗೆ ಪುರುಷರ ಮನವನ್ನು ಅರಿಯುವುದು ಶಕ್ಯವಿರಲಿಲ್ಲ. ಸ್ತ್ರೀಯರ ಬಗೆಗಂತೂ ಆಕೆ ಪೂರ್ಣ ಅಜ್ಞಾನಿಯೇ ಆಗಿದ್ದಳು. ಒಬ್ಬಳೇ ಒಬ್ಬ ಗೆಳತಿಯನ್ನೂ ಹೊಂದಿರದ ಆಕೆಯನ್ನು ಸ್ತ್ರೀಯರು ಎಂದಿಗೂ ಆಕರ್ಷಿಸಲಿಲ್ಲ.

    ಆದರೆ ಎಲೆನ್ ಅವರೆಲ್ಲರಿಂದ ಭಿನ್ನವಾಗಿದ್ದಳು. ಆಕೆಯನ್ನು ಅವಳು ಪವಿತ್ರಳೆಂದೇ ತಿಳಿದಿದ್ದಳು. ಬಾಲ್ಯಲ್ಲಿ ತಾಯಿ ಎಲೆನ್, ದೇವಮಾತೆ ಕನ್ಯೆ ಮೇರಿಯಂತೆ ಅವಳಿಗೆ ಕಂಡಿದ್ದಳು. ಈಗ ತಾನು ದೊಡ್ಡವಳಾಗಿದ್ದರೂ ಆ ಬಾಲ್ಯದೃಷ್ಟಿಯ ಅಭಿಪ್ರಾಯವನ್ನು ಬದಲಿಸುವ ಅಗತ್ಯ ಆಕೆಗೆ ಕಂಡಿರಲಿಲ್ಲ. ಅವಳ ಪಾಲಿಗೆ ತಾಯಿಯು ಸತ್ಯ,

    Enjoying the preview?
    Page 1 of 1