Discover millions of ebooks, audiobooks, and so much more with a free trial

Only $11.99/month after trial. Cancel anytime.

Vyuha
Vyuha
Vyuha
Ebook187 pages1 hour

Vyuha

Rating: 0 out of 5 stars

()

Read preview

About this ebook

ಇದೊಂದು ತಿರುವುಗಳಿಂದ ಕೂಡಿರುವ ಕತೆ. ನಾ ಬರೆದ ಮೊದಲ ಕತೆಯಿದಾಗಿದ್ದು, ಕನಸಿನ ಕೂಸು ಹೌದು. ಬರಿ ಕವಿತೆಗಳು ಬರೆಯುತ್ತಿದ್ದ ನನ್ನ ಮನದಲ್ಲಿ ಈ ಕತೆ ಜನ್ಮ ತಳೆದಿದ್ದೇ ಒಂದು ಸೋಜಿಗ. ಈ ಕತೆಗೆ ಮುನ್ನುಡಿ ಬರೆದ ಸನ್ನಿವೇಶ ಇಂತಿದೆ "ನನ್ನ ಗೆಳೆಯನ ಪರಿಚಯಸ್ಥರೊಬ್ಬರು ಕಾಣೆಯಾಗುತ್ತಾರೆ. ಅವರು ಪ್ರೀತಿಸಿ ಮದುವೆಯಾಗಿ ಹಿಂದಿರುಗುತ್ತಾರೆ. ಆದರೆ ಆ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ನಾನು ಕೇಳ್ಪಟ್ಟ ಸಮಯದಲ್ಲೇ ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆದ ಸುದ್ದಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಯಿತು." ಈ ಎರಡೂ ವಿಷಯಗಳು ನನ್ನ ಮನದಲ್ಲಿ ಅಚ್ಚಾಗಿ ಉಳಿಯಿತು...ಇದು ಒಂದೆರಡು ದಿನ ನಿದ್ದೆಗೆಡಿಸಿತ್ತು. ಇದನ್ನ ನನ್ನ ಬರವಣಿಗೆಗೆ ಹೇಗೆ ಉಪಯೋಗಿಸಬಹುದು ಎಂಬ ಸಣ್ಣ ಮಿಂಚಂತೆ ಹೊಳೆಯಿತು. ಅಲ್ಲಿಂದ ಕತೆ ಬರೆಯಲು ಆರಂಭಿಸಿದ್ದು. "ಒಂದು ಮನೆಯ ಹೆಣ್ಣು ಮಗಳು ಕಾಣೆಯಾದಾಗ, ಆ ಮನೆಯ ತಳಮಳ, ಅವಳ ಸುತ್ತಮುತ್ತಲಿನವರ ಕಳವಳ ವ್ಯಕ್ತ ಪಡಿಸುವ ಒಂದು ಸಣ್ಣ ಪ್ರಯತ್ನ ಇದು. ಕಾಣೆಯಾದವು ಹೆಣ್ಣು ವ್ಯಭಿಚಾರದ ವ್ಯೂಹದಲ್ಲಿ ಸಿಕ್ಕಿದ್ದಾಳೆ ಎಂಬ ಅನುಮಾನ ಬಂದ ಕೂಡಲೇ, ಪೊಲೀಸ್, ಕೋರ್ಟ್ ಎಂಬ ತಾಪತ್ರಯದ ಬಗ್ಗೆ, ಹೆಣ್ಣಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ತನ್ನ ಬುದ್ಧಿಶಕ್ತಿಯಿಂದ ಹೇಗೆ ಪಾರು ಮಾಡಲು ಯೋಜನೆ ಹೂಡಬಹುದೆಂಬ ಕಲ್ಪನೆ ಇದು. ಈ ಬುದ್ಧಿವಂತಿಕೆಯೊಂದಿಗೆ, ಲಾ & ಆರ್ಡರ್, ರಾಜಕೀಯ ಬಲವಿದ್ದರೆ ಹೇಗೆ? ಎಂದು ಯೋಚಿಸಿದೆ. ಕಾರಣ ಇಷ್ಟೇ ... ನಾವು ಅದೆಷ್ಟೋ ಕತೆಗಳಲ್ಲಿ, ನಾಟಕದಲ್ಲಿ, ಸಿನಿಮಾದಲ್ಲಿ ಈ ಲಾ & ಆರ್ಡರ್, ಹಾಗೂ ರಾಜಕೀಯ ಶಕ್ತಿ ಹೇಗೆ ದುರುಪಯೋಗ ಮಾಡಿಕೊಳ್ಳಬಹುದು, ಮಾಡಿಕೊಳ್ಳುತ್ತಿದ್ದಾರೆ ಎಂದು ನೋಡಿದೆವು, ಓದಿದೆವು. ಇದನ್ನು ವೈರುಧ್ಯವಾಗಿ ಅಂದರೆ ಒಂದು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಹೇಗೆ? ಎಂಬ ಚಿಂತನೆ ಮೂಡಿತು. ಅದಕ್ಕೆ ಈ ಎರಡೂ ಅಸ್ತ್ರಗಳನ್ನು ನಾನು ನಾಯಕ, ನಾಯಕಿಯ ಪರವಾಗಿ ಬಳಸಿಕೊಂಡೆ. ಕತೆ ಓದುತ್ತಿರುವವರಿಗೆ ಒಂದು ಪ್ರಶ್ನೆ ಮೂಡುವುದು ಸಹಜ "ಅಯ್ಯೋ ...ಇದೇನಿದು ಎಲ್ಲ.ಇವರ ಪರವಾಗೇ ನಡೆಯುತ್ತಿದೆ? ಏನೂ ಇಲ್ಲಿರೋ ಎಲ್ಲರನ್ನೂ ದೇವರಾಗಿಸಿದ್ದಾರೆ ಲೇಖರು ಎಂದು" ಆದರೆ ನಾನು ಸ್ವಲ್ಪ ಹೊಸತಾಗಿ ಯೋಚನೆ ಮಾಡ ಬಯಸಿದೆ. ಅದು ನಿಮ್ಮ ಮುಂದಿಟ್ಟಿದ್ದೇನೆ. ಓದುಗರ ಗಮನಕ್ಕೆ - ನಾನು ವ್ಯಭಿಚಾರದ ಆಳಕ್ಕೆ, ಅದರ ಆಗಲ ಬಣ್ಣಿಸಲು ನನ್ನ ಮನಸ್ಸು ಇಳಿಯಲಿಲ್ಲ. ಜಾಲತಾಣದಲ್ಲಿ ನಡೆಸಿದ ಸಂಶೋಧನೆಯಿಂದ ತಳಿದಿದು ಅವರುಗಳ ನಿರ್ಲಿಪ್ತತೆ ಮಾತ್ರ. ಆದ್ದರಿಂದ ಯಾಕೋ ಅವರುಗಳು ಪಡುವ ಮಾನಸಿಕ ಯಾತನೆಯನ್ನು ಬರೆಯಲು ಹೊರಟಾಗ ಮನಸಿಗೆ ತುಂಬಾನೆ ಕಸಿವಿಸಿಯಾಯ್ತು. ನನ್ನ ಬರವಣಿಗೆಯನ್ನು ಒಂದುವರೆ ವರುಷ ನಿಲ್ಲಿಸಿದರೂ, ಮತ್ತೆ ಬರೆತಯುವಾಗಲೂ ಹಿಂಸೆ ತಪ್ಪಲಿಲ್ಲ. ಅದಕ್ಕಾಗಿ ಅಷ್ಟು ಆಳಕ್ಕೆ ಬರೆಯಲಿಲ್ಲ. ಬರಿ ಸಿಕ್ಕಿ ಹಾಕಿಕೊಂಡವರ ಬಿಡಿಸಿಕೊಳ್ಳಲು ಮಾಡುವ ಯೋಜನೆ, ಕಾರ್ಯರೂಪ ಮಾತ್ರ ಬರೆಯಲು ನಿರ್ಧರಿಸಿದೆ.
LanguageKannada
Release dateAug 12, 2019
ISBN6580206500918
Vyuha

Read more from Lohith

Related to Vyuha

Related ebooks

Reviews for Vyuha

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Vyuha - Lohith

    http://www.pustaka.co.in

    ವ್ಯೂಹ

    Vyuha

    Author :

    ಲೋಹಿತ್

    Lohith

    For more books

    http://www.pustaka.co.in/home/author/lohith

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ವ್ಯೂಹ

    ಇದೊಂದು ತಿರುವುಗಳಿಂದ ಕೂಡಿರುವ ಕಥೆ.

    ನಾ ಬರೆದ ಮೊದಲ ಕತೆಯಿದಾಗಿದ್ದು, ಕನಸಿನ ಕೂಸು ಕೂಡ ಹೌದು. ಬರಿ ಕವಿತೆಗಳು ಬರೆಯುತ್ತಿದ್ದ ನನ್ನ ಮನದಲ್ಲಿ ಈ ಕತೆ ಜನ್ಮ ತಳೆದಿದ್ದೇ ಒಂದು ಸೋಜಿಗ.

    ಈ ಕತೆಗೆ ಮುನ್ನುಡಿ ಬರೆದ ಸನ್ನಿವೇಶ ಇಂತಿದೆ ನನ್ನ ಗೆಳೆಯನ ಪರಿಚಯಸ್ಥರೊಬ್ಬರು ಕಾಣೆಯಾಗುತ್ತಾರೆ. ಅವರು ಪ್ರೀತಿಸಿ ಮದುವೆಯಾಗಿ ಹಿಂದಿರುಗುತ್ತಾರೆ. ಆದರೆ ಆ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ನಾನು ಕೇಳ್ಪಟ್ಟ ಸಮಯದಲ್ಲೇ ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆದ ಸುದ್ದಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಯಿತು.

    ಈ ಎರಡೂ ವಿಷಯಗಳು ನನ್ನ ಮನದಲ್ಲಿ ಅಚ್ಚಾಗಿ ಉಳಿಯಿತು...ಇದು ಒಂದೆರಡು ದಿನ ನಿದ್ದೆಗೆಡಿಸಿತ್ತು. ಇದನ್ನ ನನ್ನ ಬರವಣಿಗೆಗೆ ಹೇಗೆ ಉಪಯೋಗಿಸಬಹುದು ಎಂಬ ಸಣ್ಣ ಮಿಂಚಂತೆ ಹೊಳೆಯಿತು.

    ಅಲ್ಲಿಂದ ಕತೆ ಬರೆಯಲು ಆರಂಭಿಸಿದ್ದು.

    "ಒಂದು ಮನೆಯ ಹೆಣ್ಣು ಮಗಳು ಕಾಣೆಯಾದಾಗ, ಆ ಮನೆಯ ತಳಮಳ, ಅವಳ ಸುತ್ತಮುತ್ತಲಿನವರ ಕಳವಳ ವ್ಯಕ್ತ ಪಡಿಸುವ ಒಂದು ಸಣ್ಣ ಪ್ರಯತ್ನ ಇದು.

    ಕಾಣೆಯಾದ ಹೆಣ್ಣು ವ್ಯಭಿಚಾರದ ವ್ಯೂಹದಲ್ಲಿ ಸಿಕ್ಕಿದ್ದಾಳೆ ಎಂಬ ಅನುಮಾನ ಬಂದ ಕೂಡಲೇ, ಪೊಲೀಸ್, ಕೋರ್ಟ್ ಎಂಬ ತಾಪತ್ರಯದ ಬಗ್ಗೆ, ಹೆಣ್ಣಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ತನ್ನ ಬುದ್ಧಿಶಕ್ತಿಯಿಂದ ಹೇಗೆ ಪಾರು ಮಾಡಲು ಯೋಜನೆ ಹೂಡಬಹುದೆಂಬ ಕಲ್ಪನೆ ಇದು.

    ಈ ಬುದ್ಧಿವಂತಿಕೆಯೊಂದಿಗೆ, ಲಾ & ಆರ್ಡರ್, ರಾಜಕೀಯ ಬಲವಿದ್ದರೆ ಹೇಗೆ? ಎಂದು ಯೋಚಿಸಿದೆ.

    ಕಾರಣ ಇಷ್ಟೇ ... ನಾವು ಅದೆಷ್ಟೋ ಕತೆಗಳಲ್ಲಿ, ನಾಟಕದಲ್ಲಿ, ಸಿನಿಮಾದಲ್ಲಿ ಈ ಲಾ & ಆರ್ಡರ್, ಹಾಗೂ ರಾಜಕೀಯ ಶಕ್ತಿ ಹೇಗೆ ದುರುಪಯೋಗ ಮಾಡಿಕೊಳ್ಳಬಹುದು, ಮಾಡಿಕೊಳ್ಳುತ್ತಿದ್ದಾರೆ ಎಂದು ನೋಡಿದೆವು, ಓದಿದೆವು. ಇದನ್ನು ವೈರುಧ್ಯವಾಗಿ ಅಂದರೆ ಒಂದು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಹೇಗೆ? ಎಂಬ ಚಿಂತನೆ ಮೂಡಿತು.

    ಅದಕ್ಕೆ ಈ ಎರಡೂ ಅಸ್ತ್ರಗಳನ್ನು ನಾನು ನಾಯಕ, ನಾಯಕಿಯ ಪರವಾಗಿ ಬಳಸಿಕೊಂಡೆ.

    ಕತೆ ಓದುತ್ತಿರುವವರಿಗೆ ಒಂದು ಪ್ರಶ್ನೆ ಮೂಡುವುದು ಸಹಜ ಅಯ್ಯೋ ...ಇದೇನಿದು ಎಲ್ಲಾ ಇವರ ಪರವಾಗೇ ನಡೆಯುತ್ತಿದೆ? ಏನೂ ಇಲ್ಲಿರೋ ಎಲ್ಲರನ್ನೂ ದೇವರಾಗಿಸಿದ್ದಾರೆ ಲೇಖರು ಎಂದು ಆದರೆ ನಾನು ಸ್ವಲ್ಪ ಹೊಸತಾಗಿ ಯೋಚನೆ ಮಾಡ ಬಯಸಿದೆ, ಹಾಗೆ ಅದನ್ನು ನಿಮ್ಮ ಮುಂದಿಟ್ಟಿದ್ದೇನೆ.

    ಓದುಗರ ಗಮನಕ್ಕೆ -  ವ್ಯಭಿಚಾರದ ಆಳಕ್ಕೆ, ಅದರ ಆಗಲ ಬಣ್ಣಿಸಲು ನನ್ನ ಮನಸ್ಸು ಇಳಿಯಲಿಲ್ಲ. ಜಾಲತಾಣದಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದಿದ್ದು ಅವರುಗಳ ನಿರ್ಲಿಪ್ತತೆ ಮಾತ್ರ. ಆದ್ದರಿಂದ ಯಾಕೋ ಅವರುಗಳು ಪಡುವ ಮಾನಸಿಕ ಯಾತನೆಯನ್ನು ಬರೆಯಲು ಹೊರಟಾಗ ಮನಸಿಗೆ ತುಂಬಾನೆ ಕಸಿವಿಸಿಯಾಯ್ತು. ನನ್ನ ಬರವಣಿಗೆಯನ್ನು ಒಂದುವರೆ ವರುಷ ನಿಲ್ಲಿಸಿದರೂ, ಮತ್ತೆ ಬರೆಯುವಾಗಲೂ ಹಿಂಸೆ ತಪ್ಪಲಿಲ್ಲ. ಅದಕ್ಕಾಗಿ ಅಷ್ಟು ಆಳಕ್ಕೆ ಬರೆಯಲಿಲ್ಲ.

    ಬರಿ ಸಿಕ್ಕಿ ಹಾಕಿಕೊಂಡವರ ಬಿಡಿಸಿಕೊಳ್ಳಲು ಮಾಡುವ ಯೋಜನೆ, ಕಾರ್ಯರೂಪ ಮಾತ್ರ ಬರೆಯಲು ನಿರ್ಧರಿಸಿದೆ.

    ಕೃತಜ್ಞತೆಗಳು

    ಈ ನನ್ನ ಕಲ್ಪನೆಯ ಕೂಸಿಗೆ ಬೆಂಬಲ ಕೊಟ್ಟ ನನ್ನ ಎಲ್ಲ ಆತ್ಮೀಯರಿಗೆ ಕೃತಜ್ಞತೆಗಳು.ತಮ್ಮ ಕೆಲಸ ಕಾರ್ಯಗಳ ನಡುವೆಯು ನಾನು ಕಳುಹಿಸಿದ ಭಾಗಗಳನ್ನು ಓದಿ, ತಪ್ಪುಗಳನ್ನು ತಿದ್ದಿ ಒಂದು ರೂಪ ಕೊಟ್ಟ ಗೆಳೆಯರಾದ ಲೋಹಿತ್, ಬೃಂದ, ಜನಾರ್ಧನ ತುಂಬು ಹೃದಯದ ಧನ್ಯವಾದಗಳ ಅರ್ಪಿಸುತ್ತೇನೆ.

    ನನ್ನ ತಂದೆ-ತಾಯಿ, ತಮ್ಮ ಇವರುಗಳ ಸಹಕಾರ ಅಪಾರ.

    ಈ ನನ್ನ ಕತೆಯನ್ನು ಪುಸ್ತಕ ರೂಪದಲ್ಲಿ ಹೊರತರಲು ಸಹಕರಿಸಿ, ಪ್ರೋತ್ಸಾಹಿಸಿದ ಪ್ರಕಾಶಕರಾದ ಪುಸ್ತಕ ತಂಡಕ್ಕೂ ಹೃತ್ಪೂರ್ವಕ ವಂದನೆಗಳು......

    ನಿಮ್ಮ ಲೋಹಿತ್

    ಬೆಳಿಗ್ಗೆ ಹಾಸಿಗೆಯ ಮೇಲೆ ಹೊದಿಕೆಯಿಂದ ಕೈ ತೆಗೆದು ಒಂದು ಕಡೆ ಹೊಡೆದುಕೊಳ್ಳುತ್ತಿದ್ದ alarm ಅನ್ನು off ಮಾಡಿ, ಇನ್ನೊಂದು ಕಡೆ ರಿಂಗಣಿಸುತ್ತಿದ್ದ ಮೊಬೈಲ್ ಅನ್ನು ನೋಡುತ್ತಾನೆ. ಅದರಲ್ಲಿ ತೋರಿಸುತ್ತಿರುವ ಹೆಸರು ಸಾಧನ

    ಪವನ್ - ಹೇಳು ಸಾಧನ....

    ಸಾಧನ - ಏನೂ ರಾಯ್ರು ಇನ್ನು ಮಲ್ಗಿದ್ರ?

    ಪವನ್ - ಹೌದು ಎಲ್ಲ exams ಮುಗಿತಲ್ಲ jobಗೆ ರಿಪೋರ್ಟ ಆಗೋದಕ್ಕೆ ಇನ್ನು 15 days ಇದ್ಯಲ್ಲ.

    ಸಾಧನ - ಸರಿ ನಿನ್ನ ಹತ್ರ ನಾನೊಂದು ಸ್ವಲ್ಪ ಮಾತಾಡ್ಬೇಕಿತ್ತು ಸಿಕ್ತಿಯ please.....

    ಪವನ್ - ಸರಿ ಎಲ್ಲಿ ?

    ಸಾಧನ - ನೀನೆ ಹೇಳು....

    ಪವನ್ - ಸರಿ ಮಂತ್ರಿ ಮಾಲ್

    ಸಾಧನ - ನಂಗೆ ಜಾಸ್ತಿ time ಇಲ್ಲ please ನಾನು ಸಿಕ್ಕಾಗ ಹೇಳ್ತೀನಿ ಎಲ್ಲಾದ್ರು ಒಂದು ಕಡೆ ಕೂತು ಮಾತಾಡ್ಬೇಕು ಅಷ್ಟೆ......

    ಪವನ್ - ok no issues let's meet at hotel Rajadhani in Manthri Mall. Is that fine?

    ಸಾಧನ - sure.....by 11 ok

    ಪವನ್ - sure see you there......

    ಮಾತಾಡಿಕೊಂಡಂತೆ ಇಬ್ಬರು ಹೇಳಿದ ಜಾಗಕ್ಕೆ ಬಂದು ಸೇರುತ್ತಾರೆ.... ಅಲ್ಲಿದ್ದ ನೀರನ್ನು ಲೋಟಕ್ಕೆ ಬಗ್ಗಿಸುತ್ತ

    ಪವನ್ - ಯಾಕೆ ಏನಾಯ್ತು are you ok?

    ಸಾಧನ - I am fine. ಪವನ್ I am leaving bangalore. ಅಪ್ಪಂಗೆ commissioner ಆಗಿ promotion ಆಗಿದೆ ಹಾಗೆ ಅವ್ರನ್ನ ಮೈಸೂರಿಗೆ transfer ಮಾಡಿದ್ದಾರೆ.

    ಪವನ್ - ಇಷ್ಟೇನಾ..... ಖುಷಿ ಪಡು ನೀನು commissioner ಮಗಳು ಅಂತ!!! ಅದು ಅಲ್ಲದೆ ಮೈಸೂರೊಳ್ಳೆ ಹಿಮಾಲಯದಲ್ಲಿರೊ ಥರ ಹೇಳ್ತಿದ್ದೀಯ...ಅವಾಗ್ ಅವಾಗ friends ಎಲ್ಲರು ಆಕಡೆ ಬರ್ತೀವಿ. ನಿಂಗ್ ಯಾವಾಗ್ free ಆಗುತ್ತೊ ಆವಾಗ್ ಬಾ.... I am there 24/7..... ಎಂದು ಕಣ್ಣು ಹೊಡೆಯುತ್ತಾನೆ...

    ಸಾಧನ - ಪವನ್ please listen to me clearly and please don't make me to repeat this again.

    (ಇದಕ್ಕೆ ಸರಿ ಎಂಬಂತೆ ಬಾಯಿ ಮೇಲೆ ಬೆರಳಿಟ್ಟು ಕೂರುತ್ತಾನೆ)

    ಮಾತು ಮುಂದುವರೆಸುತ್ತ‌ ಸಾಧನ - ನೋಡು ಇನ್ಮೇಲೆ ನೀನು ನಂಗೆ phone, message, Facebook, whatsapp, ಎಲ್ಲೂ ಕೂಡ ಸಿಗ್ಬೇಡ. To be honest I ve blocked you everywhere. ಈಗ ಇಲ್ಲಿಂದ ಹೊರ್ಟಮೇಲೆ ನಿನ್ನ number delete ಮಾಡ್ತಾಯಿದ್ದೀನಿ. ಹಾ....!!!! number ಕೂಡ change ಮಾಡ್ತೀನಿ.... ನಂಗೆ ಇನ್ಮೇಲೆ ನೀನ್ಯಾರು ಅಂತ ಗೊತ್ತಿಲ್ಲ ನಿಂಗೆ ನಾನ್ಯಾರು ಅಂತ ಗೊತ್ತಿಲ್ಲ.

    ಪವನ್ - are u kidding?

    ಸಾಧನ - I am serious..... dammn serious

    ಪವನ್ - Inspite of calling me and humiliating me u should 've just gone. Damid. ನಿನಗೋಸ್ಕರ ಎಷ್ಟು ರಿಸ್ಕ ತಗೊಂಡ್ಡಿದ್ದೀನಿ ಅನ್ನೋದು ನಿಂಗೆ ಗೊತ್ತು. ಈಗ ನಿನ್ನ safety ಆಯ್ತಲ್ಲ so u wanna ditch me is it? Look ನಾನು ಬಯಸಿದ್ದು ನಿನ್ನ ಸ್ನೇಹ. ಅದು ನಂಗೆ ಸಿಕ್ಕಿದೆ...thanks for that. Ok I 'll never disturb you. ನಿನ್ನಿಷ್ಟದಹಾಗೆ ಆಗಲಿ. Anything else?

    If not I would be leaving.

    ಏನೂ ಇಲ್ಲ ಎನ್ನುವಂತೆ ತಲೆಯಾಡಿಸುತ್ತಾಳೆ.....

    ಈ ಮನ ಮುರಿಯುವ ಮಾತುಗಳಾಡಿದ ಮೇಲೆ ಇಬ್ಬರು ಕಣ್ಣು ಒರೆಸಿಕೊಂಡು ಕಾಲ್ಕೀಳುತ್ತಾರೆ.

    ನಡೆಯುವಾಗ ಪವನ್ ತಿರುಗಿ ನೋಡುತ್ತಾನೆ. ಆದರೆ ಸಾಧನ ತಿರುಗಿ ನೋಡದೆ ಹಾಗೆಯೆ ನೆಡೆಯುತ್ತಾಳೆ.

    ಆಗ ಸಾಧನಾಳ ಮನದಲ್ಲಿ

    ಕ್ಷಮಿಸಿಬಿಡು ....... ನೀ ನನ್ನ

    ಗೆಳೆಯ ಎಂದೆಂದಿಗೂ.....

    ತಪ್ಪು ಮಾಡದೆ ನೀನು

    ದೂರಮಾಡಿದೆ ನಿನ್ನನು....

    ತಪ್ಪುಮಾಡಿದೆ ನಾನು

    ಕ್ಷಮಿಸುಬಿಡು ನನ್ನನು.....

    ಮೂರು ವರ್ಷಗಳ ನಂತರ......

    ಪವನ್ ತಾನು ವಾಸವಿದ್ದ ಮನೆಯನ್ನು ಬದಲಾಯಿಸಲು ಮುಂದಾಗುತ್ತಾನೆ. ಹದಿನೈದು ವರ್ಷದ ಆವನ ಮತ್ತು ಅವನ ಕುಟುಂಬದವರ ಜೊತೆ ಹೊಂದಿದ್ದ ಅಲ್ಲಿನ ಜನರ ಅವಿನಾಭಾವ ಸಂಬಂಧ ಅಲ್ಲಿಗೆ ತೆರೆ ಬೀಳುವ ಕ್ಷಣ ಎಲ್ಲರು ಭಾವುಕವಾಗುವಂತದು. ಎಲ್ಲರು ಬಂದು ಸಹಾಯ ಮಾಡುತ್ತಾರೆ.

    ಮಹಡಿಯ ಮನೆಯಿಂದ ಕೆಳಗಿಳಿದು ತನ್ನ ಸ್ನೇಹಿತ ಲೋಹಿತ್ ಮನೆಯ ಸಾಮಾನುಗಳನ್ನು ಸಾಗಿಸುವ ವ್ಯವಸ್ಥೆಯ ಸಲುವಾಗಿ ದೊಡ್ಡ ದೊಡ್ಡ ಎರಡು ವಾಹನ ತಂದಿರುವವನೇನೊ ಎಂದು ನೋಡುತ್ತಾನೆ. ಅಷ್ಟರಲ್ಲಿ ಎರಡು ಭಾರಿ ವಾಹನದೊಂದಿಗೆ ಪ್ರತ್ಯಕ್ಷವಾಗುತ್ತಾನೆ. ಇಳಿದ ಕೂಡಲೆ

    ಲೋಹಿತ್ - ಲೋ ಎಷ್ಟು ಸಲ call ಮಾಡೊದು? ಎಂದು ಕೇಳುತ್ತಾನೆ.

    ಪವನ್ - ಅಯ್ಯೊ phone ಎಲ್ಲಿದ್ಯೊ ಗೊತ್ತಿಲ್ಲ. ಸರಿ ಬಾ ತಿಂಡಿ ತಿನ್ನೋಣ.

    ಇಬ್ಬರು ತಿಂಡಿ ತಿನ್ನಲು ಹೊರಟಾಗ ಲೋಹಿತ್ ಪವನ್ ಕೈ ಹಿಡಿದು are u alright? ಎನ್ನುತ್ತಾನೆ. ಹೌದೆಂಬಂತೆ ತಲೆಯಾಡಿಸುತ್ತಾನೆ. ಅದಕ್ಕೆ ಲೋಹಿತ್ - ನಾ ನಿನ್ನ ಇವತ್ತಿಂದ ನೋಡ್ತಾಯಿಲ್ಲ. ನೋಡು ನಾ ಹೇಳೊದನ್ನ ಕೇಳು, ಹೋಗು ಅವಳ ಹತ್ರ ಒಂದೆ ಒಂದು ಸಲ ಮಾತಾಡು please. ನಿನ್ನ ಮುಖ ನೋಡೋಕಾಗ್ತಿಲ್ಲ.

    ಪವನ್ - ಏನಂತ ಮಾತಾಡ್ಲಿ? ನಾನು ಅವಳ್ನ ಇಷ್ಟ ಪಡ್ತಿರೊ ವಿಷ್ಯ ಆವಳಿಗೆ ಚೆನ್ನಾಗಿ ಗೊತ್ತಿದೆ. ನಾನವಳಿಗೆ ಎಲ್ಲ ಹೇಳಿ ಮೂರು ವರ್ಷ ಆಗಿದೆ. ಅವಳು ಏನೂ ಹೇಳಿಲ್ಲ. ನಾನು ಮೂರು ಸರ್ತಿ ಕೇಳಿದ್ದೀನಿ. ಬೇಕಾದ್ರೆ ಮನೆಗೆ ಬಂದು ಮಾತಾಡ್ತೀನಿ ಅಂದ್ರೆ ಬೇಡ ಅಂತಾಳೆ. ಏನೂ ಅಂತ ಮಾತಾಡ್ತೀಯ? ಏನೂ ಬೇಡ. ನೋಡು ಜೀವನಕ್ಕೆ ಪ್ರೀತಿ ಬೇಕು, ಪ್ರೀತಿನೆ ಜೀವನ ನಿಜ ಹಾಗಂತ ಸಿಗದೇಯಿರೊ ಪ್ರೀತಿ ಹಿಂದೆ ಹೋಗೋದು ಸರಿಯಲ್ಲ. ಈಗೇನು ಕಮ್ಮಿಯಾಗಿದೆ ನಂಗೆ ಹೇಳು? ಜೀವಕ್ಕಿಂತ ಹೆಚ್ಚಾಗಿ ಪ್ರೀತ್ಸೊ ತಂದೆ ತಾಯಿ ಇದ್ದಾರೆ, ಹೆಗಲು ಕೊಡೊ ಜನ ಇದ್ದಾರೆ, ಸುಖ ದುಖಕ್ಕೆ ನೀನಿದ್ಯ.. ಸಾಕು ಬಾ....

    ಏನೂ ಹೇಳದೆ ಲೋಹಿತ್ ಬಿಗಿಯಾಗಿ ಪವನ್

    Enjoying the preview?
    Page 1 of 1