Discover millions of ebooks, audiobooks, and so much more with a free trial

Only $11.99/month after trial. Cancel anytime.

Vaarasudhara
Vaarasudhara
Vaarasudhara
Ebook316 pages3 hours

Vaarasudhara

Rating: 0 out of 5 stars

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateMar 10, 2016
ISBN6580202700358
Vaarasudhara

Read more from Geetha Bu

Related authors

Related to Vaarasudhara

Related ebooks

Reviews for Vaarasudhara

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Vaarasudhara - Geetha BU

    http://www.pustaka.co.in

    ವಾರಸುದಾರ

    Vaarasudaara

    Author :

    ಗೀತಾ ಬಿ.ಯು.

    Geetha.B.U

    For more books

    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಮುನ್ನುಡಿ

    ನಾನು ‘ಮುನ್ನುಡಿ’ ಅಂತ ಸಿನಿಮಾ ಮಾಡಿರಬಹುದು; ಆದ್ರೆ ಪುಸ್ತಕಗಳಿಗೆ ಮುನ್ನುಡಿ ಬರೆದು ಹೆಚ್ಚು ಅಭ್ಯಾಸ ಇರಲಿಲ್ಲ.  ಈವರೆಗೆ ಒಂದಿಬ್ಬರು ಸ್ನೇಹಿತರ ಪುಸ್ತಕಗಳಿಗೆ ನನ್ನ ಅನಿಸಿಕೆಗಳನ್ನ ಬರೆದುಕೊಟ್ಟಿದ್ದೆ ಅಷ್ಟೆ.  ನನ್ನ ಪ್ರಸ್ತುತ ಪೋಸ್ಟ್ ಪೋನ್ ಆಗ್ತಾ ಹೋಯಿತು.  ಈ ಡೈಲಿ ಸೀರಿಯಲ್ ಮಾಡೋವರ ಹಣೆಬರಹ ನಿಮಗೆ ಗೊತ್ತಲ್ಲ… ಓದೋಕೆ ಆಗಲೇ ಇಲ್ಲ . ಹಾಗೇ ಇದರ ಪ್ರತಿ ಇಟ್ಟಿದ್ದೆ. ಟೇಬಲ್ ಬಳಿ ಒಂದು ಸೀನ್ ಬರೆಯೋಕೆ ಕೂತಾಗಲೆಲ್ಲಾ ನಿಮ್ಮ ‘ವಾರಸುದಾರ’ ಕಣ್ಣು ಕುಕ್ತಾ ಇದ್ದ.  ನಿನ್ನೆ ಮೊನ್ನೆ ಗೌರಿ ಗಣೇಶ ಹಬ್ಬ ಇದ್ದದ್ದರಿಂದ ಶೂಟಿಂಗ್‍ಗೆ ಕಡ್ಡಾಯ ರಜ ಇತ್ತು.  ಹಾಗಾಗಿ ಇದನ್ನು ಓದಲೇ ಬೇಕು ಅಂತ ಕೈಗೆತ್ತಿಕೊಂಡೆ...

    ಇದಕ್ಕೂ ಮುಂಚೆ ಇನ್ನೂ ಒಂದು ಮಾತು ಹೇಳಬೇಕು.

    ನಾನು, ಪ್ರಹ್ಲಾದ್ ಸೇರಿ ಮೂರು ವರ್ಷಗಳ ಹಿಂದೆ ದೈನಂದಿನ ಧಾರವಾಹಿಗೆ ಅಂತ ಒಂದು ಕಥೆ ಮಾಡಿದ್ವಿ.  ಅದಕ್ಕೆ ಹೆಸರು ಇಟ್ಟಿರಲಿಲ್ಲ. ಅದ್ರೆ ಅದರ ಕಥೆ ಶುರುವಾಗುತ್ತಿದ್ದದ್ದು ಅಪ್ಪನ ವಿಲ್‍ನಿಂದ ! ಅಪ್ಪ ವಿಲ್ ಮಾಡಿರುತಾನೆ.  ಆವತ್ತು ಅವನ ಎಪ್ಪತ್ತೈದನೇ ವರ್ಷದ ಹುಟ್ಟುಹಬ್ಬ.  ಮಕ್ಕಳನ್ನೆಲ್ಲಾ ಸಮಾರಂಭಕ್ಕೆ ಕರೆದಿರುತ್ತಾನೆ. ಅದ್ರೆ ವಿಲ್ ಓದೋಕೆ ಮುಂಚೇನೆ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ಸತ್ತು ಹೋಗ್ತಾನೆ... ಆಮೇಲೆ ವಿಲ್ ಬದಲಾಯಿಸೋ ಪ್ರಯತ್ನ... ಹೀಗೆ ಕಥೆ ಮುಂದುವರಿದಿತ್ತು.

    ನಾವು ಈ ಕತೇನೆ ಧಾರವಾಹಿ ಮಾಡಬೇಕು ಅಂತ ಯೋಜನೆ ಮಾಡ್ತಾ ಇರೋವಾಗಲೇ ‘ ತರಂಗ’ ದಲ್ಲಿ ನಿಮ್ಮ ‘ವಾರಸುದಾರ’ ಮೊದಲ ಕಂತು ಪ್ರಕಟ ವಾಗಿತ್ತು.  ನೀವು ಬರೆದಿರೋದು ಅನ್ನೋ ಕಾರಣಕ್ಕೆ ಮೊದಲ ಕಂತನ್ನ ಆಸಕ್ತಿ ಯಿಂದ ಓದಿದ್ದೆ.  ಅದನ್ನ ಓದಿ ನನಗೆ ನಿಜಕ್ಕೂ ಆಶ್ಚರ್ಯಯ್ತು.  ನಿಮ್ಮ ಕಥೆಯ ಆರಂಭಕ್ಕೂ ನಾವು ಮಾಡಿದ ಕಥೆಗೂ ಸಾಕಷ್ಟೂ ಸಾಮ್ಯಗಳಿದ್ದವು.  ನಮ್ಮ ಕಥೆ ನಿಮಗೆ ಗೊತ್ತಿರೋಕೆ ಚಾನ್ಸೇ ಇರಲಿಲ್ಲ.  ನಾನು ತಕ್ಷಣ ಪ್ರಹ್ಲಾದ್‍ಗೆ ಪೋನ್ ಮಾಡಿ.  ನಾವು ಸೀರಿಯಲ್‍ಗೆ ಅಂತ ಮಾಡಿದ ಕಥೆಯ ಹಾಗಿರೋ ಇನ್ನೊಂದು ಕಥೆ ತರಂಗದಲ್ಲಿ ಧಾರವಾಹಿಯಾಗಿ ಬರ್ತಾ ಇದೆ.  ನೀನು ಯಾವಾಗೂದ್ರೂ ಗೀತಾಗೆ ಈ ಎಳೆ ಹೇಳಿದ್ದೆಯಾ ಅಂದೆ.  ಪ್ರಹ್ಲಾದ್ ಇಲ್ಲ ಅಂತ ಹೇಳ್ದ.  ಪ್ರಾಯಶಃ ಕಾಕತಾಳೀಯ ಇರಬಹುದು ಅಂತ ನಾನು ಸುಮ್ಮನಾಗಿಬಿಟ್ಟೆ.  ಆಮೇಲೆ ಬೇರೆ ಬೇರೆ ಕಾರಣಗಳಿಂದ ನಂಗೆ ತರಂಗದಲ್ಲಿ ಬಂದ ಕಂತುಗಳನ್ನು ಓದಲಾಗಿರಲಿಲ್ಲ.

    ‘ವಾರಸುದಾರ’ ಮೊದಲ ಪುಟಗಳನ್ನು ತೆರೆದ ಮೇಲೆ ನನಗೆ ಇದೆಲ್ಲಾ ನೆನಪಾಗತೊಡಗಿತು.

    ನಿಮ್ಮ ಕಥೆ ಓದ್ತಾ ಓದ್ತಾ ಹೋದ ಹಾಗೆ ಗೊತ್ತಾಯಿತು.  ಎರಡು ಕಥೆಯ ಆರಂಭ ಒಂದೇ ತರಹ ಕಂಡರೂ ಆಮೇಲೆ ಎರಡೂ ಬೆಳೆದ ರೀತಿ ಬೇರೆ ಬೇರೆಯದು ಎಂದು.  ನನ್ನ ಕಥೆ ಬಿಡಿ, ಈಗ ನಿಮ್ಮ ಕಥೆಗೆ ಬರುತ್ತೇನೆ.  ಮೊದಲಿಗೆ ಕಂಗ್ರಾಟ್ಸ್ ! ಯಾಕೆಂದರೆ ನಾನು ಸಾಮಾನ್ಯವಾಗಿ ಒಂದೇ ಓದಿಗೆ ಯಾವುದೇ ಪುಸ್ತಕ ಓದುವುದಿಲ್ಲ. ಸ್ವಲ್ಪ ಸ್ವಲ್ಪವೇ ಓದುತ್ತಾ ಹೋಗುತ್ತೇನೆ. ಮಧ್ಯೆ ಬೇರೆ ಯಾವುದಾದರೂ ಬೇರೆ ಕೆಲಸ ಮಾಡುತ್ತೇನೆ.  ಹೀಗೆ ಎರಡು ಮೂರು ದಿನಗಳ ಕಾಲ ಓದುತ್ತಾ ಹೋದ ಹಾಗೆ ನನಗೆ ಕಥೆಯ ಸನ್ನಿವೇಶ ಪಾತ್ರಗಳು ಆಪ್ತವಾಗುತ್ತಾ ಹೋಗುತ್ತವೆ. ಆದರೆ ‘ವಾರಸುದಾರ’ ನನ್ನ ನಿಯಮಗಳನ್ನು ಮುರಿದುಬಿಟ್ಟ !

    ಒಂದೇ ಓದಿಗೆ ನಿಮ್ಮ ಕಾದಂಬರಿಯನ್ನೂ ಓದಿ ಮುಗಿಸಿದೆ.  ಕಾದಂಬರಿ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡದ್ದು ಮುಖ್ಯ ಕಾರಣ... ಕಂಗ್ರಾಟ್ಸ್ !

    ನಿಮ್ಮ ಈ ಹಿಂದಿನ ಒಂದೆರಡು ಕಾದಂಬರಿಗಳನ್ನೂ ನಾನು ಓದಿದ್ದೇನೆ.  ಇಲ್ಲಿ ನಿಮ್ಮ ಶೈಲಿ ಕೊಂಚ ಬದಲಾವಣೆಯಾಗಿರುವುದನ್ನು ನಾನು ಗುರುತಿಸಿದೆ.  ಬಹುಶಃ ಈ ಕಥೆಯ ಕ್ಯಾನ್ವಾಸ್ ಕಾರಣವಿರಬಹುದು.  ಕಥೆ ಹೇಳುವುದರಲ್ಲಿ ಒಂದು ತಂತ್ರ ಬಳಸಿದ್ದೀರಿ.  ಆ ತಂತ್ರ ಇಲ್ಲಿ ಪೂರಕವಾಗಿ ಹೊಂದಿಕೊಂಡಿರುವುದು ವಿಶೇಷ.  ಇಡೀ ಕಥೆ ನಡೆಯುವುದು ಸುಮಾರು ಹತ್ತರಿಂದ ಹದಿನೈದು ದಿನಗಳ ಅಂತರದಲ್ಲಿ.  ಪ್ರಮುಖವಾಗಿ ಬರುವುದು ನಾಲ್ಕು ಪಾತ್ರಗಳು.  ಹಯವದನರಾವ್ , ಡಾ.  ಶ್ರೀಕಾಂತ್. ಕೃಷ್ಣಕಾಂತ್ ಹಾಗೂ ವೆಂಕಟರಾಮನ್.

    ಕಥೆಯ ಉದ್ದಕ್ಕೂ ಮೌಲ್ಯಗಳನ್ನು ಪ್ರತಿಪಾದಿಸುªiÀ  ಪಾತ್ರವಾಗಿ ಹಯವದರಾವ್ ಕಾಣಿಸುತ್ತಾರೆ.  ಅವರು ಓದುಗರಿಗೆ ಮುಖಾಮುಖಿ ಯಾಗದಿದ್ದರೂ ಇತರ ಪಾತ್ರಗಳ ಮೂಲಕ ಪ್ರಸ್ತಾಪವಾಗುತ್ತ ಹೆಚ್ಚು ಆಪ್ತವಾಗುತ್ತಾ ಹೋಗುತ್ತಾರೆ. ಹೀಗೆ ಪಾತ್ರವೊಂದನ್ನ ವಿಶಿಷ್ಟ ರೀತಿಯಲ್ಲಿ ಕಟ್ಟಿ ಕೊಡುವ ಕೆಲಸದಲ್ಲಿ ನೀವು ವಿಜಯಿಯಾಗಿದ್ದೀರಿ.  ನಂತರ ನ್ಯಾಯ-ಅನ್ಯಾಯದ ಜಿಜಾÐಸೆ ಮಾಡುವ ಪಾತ್ರವಾಗಿ ಡಾ.  ಶ್ರೀಕಾಂತ್ ಕಾಣಿಸುತ್ತಾನೆ; ನಮ್ಮೊಳಗಿರುವ ಎಲ್ಲ ದ್ವಂದ್ವಗಳ ಪ್ರತಿಮೂರ್ತಿ ಈ ಶ್ರೀಕಾಂತ.  ಮಧ್ಯಮ ವರ್ಗದ ವ್ಯಕ್ತಿಯ ಎಲ್ಲ ಗುಣ-ಲಕ್ಷಣಗಳನ್ನು ಇವನಿಗೆ ಆರೋಪಿಸಿದ್ದಿರಿ.  ವೃತ್ತಿಯಿಂದ ವೈದ್ಯನಾಗಿ ಈತ ಬೇರೆ ತರದಲ್ಲಿ ಬಿಹೇವ್ ಮಾಡಲು ಶಕ್ಯ ವಿದ್ದರೂ ಇಲ್ಲಿಗೆ ವಿಚಾರಗಳಿಗೆ ಹೊಂದಿರುವುದರಿಂದ ಅಪಾಯವಾಗಿಲ್ಲ.  ಹಾಗೆ ನೋಡಿದರೆ ಎರಡನೆಯ ಮಗ ಕೃಷ್ಣಕಾಂತನಿಗೆ ಪೋಷಣೆ ಸ್ವಲ್ಪ ಕಡಿಮೆ ಯಾಯಿತೇನೋ ಎನ್ನಿಸುತ್ತದೆ.  ಉಳಿದವು ಎಷ್ಟು ಬೇಕೋ ಅಷ್ಟೇ ತಮ್ಮ ಕೆಲಸಗಳನ್ನು ನಿಭಾಯಿಸುತ್ತವೆ.

    ಕಥೆ ಏಕಮಯವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.  ಇದರಲ್ಲಿ ಬರುವ ವಿಷಯ ಗಂಭೀರವಾದದ್ದಾದರೂ, ಘಟನೆಗಳಿಗೆ ವಿವಿಧ ಆಯಾಮದಕ್ಕದೆ;  ಅಂತರ್ಮುಖ ತೆರೆದುಕೊಳ್ಳದೆ ಸರಳಗೊಂಡಿರುವುದರಿಂದ ಅನುಕೂಲ-ಅನಾನೂಕೂಲ ಎರಡೂ ಉಂಟಾಗಿದೆ.  ಮಾಸ್ ಮೆಂಟಾಲಿಟಿಯ ಫಾರ್ಮುಲಾವನ್ನು ಗಮನದಲ್ಲಿಟ್ಟುಕೊಂಡು ಕಾದಂಬರಿಯ ರಚನೆಯಾಗಿದೆ ಎನ್ನಿಸುತ್ತದೆ.  ಇದು ಈ ಕಾದಂಬರಿಗಿರುವ ಲಿಮಿಟೇಷನ್ ಕೂಡ ಹೌದು...

    ನೀವು ಅಲ್ಲಲ್ಲಿ ಬಳಸಿರುವ ‘ಎಣ್ಣೆ ಸೀಗೆಕಾಯಿ ಸಂಬಂಧ’, ‘ಹೊಟ್ಟೆಯಲ್ಲಿ ಹುಣೆಸೆ ಕಿವುಚಿದಂತಾಯಿತು’, ‘ಊರಿಗೆ ಉಪಕಾರಿ; ಮನೆಗೆ ಮಾರಿ’,  ‘ಮುಖ ಕಪ್ಪಿಟ್ಟುಹೊಯಿತು’ ಮುಂತಾದ ಕ್ಲೀಷೆಯ ನುಡಿಗಟ್ಟು ಗಳಿಗಿಂತ ನೀವೇ ಒಂದೆಡೆ ಬಳಸಿರುವ ‘ಸುಳ್ಳು ಎಂಬುದು ಮಂಜಿನ ತೆರೆ ಅಷ್ಟೇ ಎಂಬಂತಹ ವಾಕ್ಯ ನನಗೆ ಇಷ್ಟವಾಯಿತು.

    ನಿಮ್ಮ ಕಾದಂಬರಿ ಬರೀ ಟೈಂ ಪಾಸ್‍ಗಷ್ಟೇ ಅಲ್ಲ;  ಅಲ್ಲೊಂದು ಮೆಸೇಜ್ ಇದೆ.  ‘ಪ್ರಪಂಚ ಬದಲಾಯಿಸಬಲ್ಲೆ ಎಂಬ ವಿಶ್ವಾಸ ನಂಗಿಲ್ಲ - ನಾನು ಬದಲಾಗಬಲ್ಲೇ ಎಂಬುದಷ್ಟೇ ನಂಗೆ ಅರಿವಾಗುತ್ತದೆ’ ಅನ್ನೋ ಶ್ರೀಕಾಂತನ ಮಾತು ನಿಮ್ಮ ಇಡೀ ಕತೆಯ ಆಶಯವನ್ನು ನಿಚ್ಚಳವಾಗಿ ಹೇಳುತ್ತೆ.

    ಕೊನೆಯದಾಗಿ,  ನಿಮ್ಮಿಂದ ಇನ್ನೂ ಉತ್ತಮ ಕಾದಂಬರಿಗಳು ಬರಲಿ ಎಂಬುದು ನನ್ನ ಆಸೆ;  ನಿಮಗೆ ಆ ಶಕ್ತಿಯಿದೆ.

    ಶುಭವಾಗಲಿ,

    ಬೆಂಗಳೂರು    -ಪಿ.  ಶೇಷಾದ್ರಿ

    31 ನೇ ಆಗಸ್ಟ್, 2006

    ಕಾದಂಬರಿ ಓದುವ ಮುನ್ನ....

    ಮಕ್ಕಳು ತಂದೆ ತಾಯಿಯ ಆಸ್ತಿಗೆ ವಾರಸುದಾರರು.  ಹುಟ್ಟಿನಿಂದ ಬರುವ ಈ ವಾರಸುದಾರತ್ವ ಬರೀ ಹಣಕಾಸಿನ ವಿಚಾರಕ್ಕೆ ಸೀಮಿತವಾಗಿರುತ್ತದೆ ಯಾಕೆ? ತಂದೆಯ ಆಸ್ತಿಗೆ ವಾರಸುದಾರನಾಗುವ ಮಗ, ಆ ತಂದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರೆ,  ಆ ಸೇವೆಯನ್ನು ಮುಂದುವರಿಸುವ ಬಾಧ್ಯತೆಯನ್ನೂ ಅವನು ಹೊರಬೇಕಾಗುತ್ತದೆ ಅಲ್ಲವೆ?

    ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವ ಮಕ್ಕಳು ಅವರ ಬಾಧ್ಯತೆಗಳ ಬಗ್ಗೆ ಏಕೆ ಅರಿವುಗೇಡಿಗಳಂತೆ ವರ್ತಿಸುತ್ತಾರೆ?  ಎಂಬ ಯೋಜನೆ ಕಾಡುತ್ತಿರುವಾಗ,  ಜಾನ್ ಗ್ರಿಶಾಮ್ ಅವರ ಕಾದಂಬರಿಯೊಂದನ್ನು ಓದಿದೆ.  ಅದರಲ್ಲಿ ಇದ್ದದ್ದು ಆಸ್ತಿಯ ಪಾಲಿನ ವಿಚಾರ, ಅನೀರೀಕ್ಷಿತವಾಗಿ ಸಿಕ್ಕ ಹಣ,  ಅದಕ್ಕಾಗಿ ಜಗಳ, ಚೇಸ್ ಇತ್ಯಾದಿ ಇತ್ಯಾದಿ.  ಆ ಕಾದಂಬರಿಯನ್ನು ‘ತರಂಗ’ ವಾರಪತ್ರಿಕೆಯ ಸಂಪಾದಕರಾದ ಶ್ರೀ ಸಂಧ್ಯಾ ಪೈ ಅವರು ಸೂಚಿಸಿದ್ದು.  ಕನ್ನಡದಲ್ಲಿ ಹೀಗೆ ಬರೆಯೋಕೆ ಸಾಧ್ಯವೇ ಎಂದು ಕೇಳಿದರು.  ಅನಿರೀಕ್ಷಿತವಾಗಿ ಸಿಗುವ ಹಣ,  ಅದರ ವಾರಸುದಾರತ್ವ ನನ್ನ ಕಲ್ಲನೆಯನ್ನು ಕೆರಳಿಸಿತು.  ಬರೆಯಲು ಶುರು ಮಾಡಿದೆ.  ನನ್ನ ಭಾವನೆ, ಕಲ್ಪನೆ, ನಮ್ಮ ಸಾಮಾಜಿಕ ಒತ್ತಡಗಳು, ಆ ಪಾತ್ರಗಳ ಸಂಬಂಧಗಳು ಎಲ್ಲಾ ಸೇರಿ ಇದೊಂದು ವಿಭಿನ್ನ ಕಾದಂಬರಿ ಆಯಿತು.

    ನನ್ನ ನೆಚ್ಚಿನ ಸಂಧ್ಯಾ ಪೈ ಅವರು ಪ್ರೋತ್ಸಾಹಿಸದಿದ್ದಲ್ಲಿ ನಾನು ಈ ಕಾದಂಬರಿ ಬರೆಯುತ್ತಿರಲಿಲ್ಲ.  ಅವರಿಗೆ ನನ್ನ ವಂದನೆಗಳು.

    ಈ ಕಾದಂಬರಿ, ‘ವಾರಸುದಾರ’ ತರಂಗ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿತು. ಒಂದೂವರೆ ಪುಟವಷ್ಟೇ ಹಾಕುತ್ತಿದ್ದರಿಂದ ಮುಂದೆ ಏನಾಗುತ್ತೆ ಎಂಬ ಓದುಗರ ಕುತೂಹಲಕ್ಕೆ ಕಾರಣವಾಗಿತ್ತು, ವಾರಸುದಾರ.

    ನಾನು ಯಾವಾಗಲೂ ಹೇಳುವ ಒಂದು ಮಾತನ್ನು ಇಲ್ಲಿ ತಿರುಗಿ ಹೇಳಲು ಇಷ್ಟಪಡುತ್ತೇನೆ.  ಕಥೆ ಕಾದಂಬರಿಯ ಮೂಲ ಉದ್ದೇಶ, ನನ್ನ ಪ್ರಕಾರ ಓದುಗರ ಗಮನವನ್ನು ಹಿಡಿದಿಟ್ಟುಕೊಳ್ಳಬೇಕು,  ಓದಿಸಿಕೊಂಡು ಹೋಗಬೇಕು ಇದು ಎರಡನೇ ಉದ್ದೇಶ.  ಭಾಷೆ ಹೇಳಿಕೊಡಬೇಕು, ಜಾÐನ ಹೆಚ್ಚಿಸಬೇಕು,  ತಿದ್ದಬೇಕು, ದಾರಿ ತೊರಬೇಕು... ಅದು ಅದಕ್ಕೂ ಮುಂದಿನ ಹಂತ.  ಆದರೆ ಮೊದಲು ಓದುಗರು ಪುಸ್ತಕ ಕೈಗೆ ತೆಗೆದುಕೊಂಡು ಓದಬೇಕು.  ಶುರು ಮಾಡಿದ (ಓದಲು) ಓದುಗ ಪೂರಾ ಓದಬೇಕು.  ಆ ಶಕ್ತಿ ಆ ಕೃತಿಗಿರಬೇಕು.

    ಈ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಹೊರತಂದಿರುವ ಹೇಮಂತ ಸಾಹಿತ್ಯದ ಶ್ರೀ ವೆಂಕಟೆಶ್ ಅವರಿಗೆ ನನ್ನ ವಂದನೆಗಳು.  ಮುಖಪುಟ ರಚಿಸಿ ಕೊಟ್ಟ ಕಲಾವಿದರಿಗೂ ನನ್ನ ವಂದನೆಗಳು.

    ಟಿ.ವಿ. ಮಾಧ್ಯಮದ ದಾಳಿಯಿಂದ ಓದುಗರ ಸಂಖ್ಯೆ ಇಳಿದಿದೆ ಎಂಬ ಮಾತು ಒಂದು ನಿಟ್ಟಿನಲ್ಲಿ ನಿಜವಿರಬಹುದು.  ಆದರೆ ಪುಸ್ತಕ ಕೊಡುವ ಖುಷಿಯೇ ಬೇರೆ.  ಇಲ್ಲಿ ಲೇಖಕ /ಕಿ ಬರೆದಿರುವುದು ಅಷ್ಟೆ ಅಲ್ಲ, ಓದುಗರ ಕಲ್ಪನೆಗೂ ಅವಕಾಶವಿದೆ. ಮತ್ತೊಮ್ಮೆ ಓದಿ ಆಸ್ವಾದಿಸುವ,  ಹೀಗಿರಬಹುದು ಎಂದು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯವಿದೆ.  ಆದರೆ ಟಿ.ವಿ.  ಮಾಧ್ಯಮದಲ್ಲಿ ಸುಲಭವಾಗಿ ಕೊಡುವ ಚಿತ್ರವಿದೆ.  ನಟಿನಟಿಯರ ಮಿತಿ, ದಿಗ್ದರ್ಶಕರ ಕಲ್ಪನೆಯ ಚೌಕಟ್ಟು ಇದೆ.  ಅಲ್ಲಿ ಚಾಲೆಂಜ್ ಕಡಿಮೆ.  ನೀವೇನಂತೀರಿ?

    ಈ ವಿಚಾರ ಒತ್ತಟ್ಟಿಗಿರಲಿ, ಈ ಕಾದಂಬರಿ ‘ವಾರಸುದಾರ’ ಈಗ ನಿಮ್ಮ ಕೈಲಿದೆ. ಕಾದಂಬರಿಯ ಬಗ್ಗೆ ಹೆಚ್ಚು ಹೇಳಲ್ಲ.  ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

    ವಂದನೆಗಳು.

    -ಗೀತ ಬಿ.ಯು.

    ವಾರಸುದಾರ

      ಡಾಕ್ಟರ್... ಡಾಕ್ಟರ್... ಟೆಲಿಗ್ರಾಮ್ ಬಂದಿದೆ ಓಳಗೆ ಬಂದ ಸುಜಾತಳತ್ತ ಹುಬ್ಬೇರಿಸಿದ ಶ್ರೀಕಾಂತ.

    ಸೈನ್ ಮಾಡಿ ತಗೊಂಡಾಯ್ತಲ್ವಾ ?

    ಯೆಸ್ ಡಾಕ್ಟರ್... ಸುಜಾತಾ ಸುಮ್ಮನೆ ನಿಂತಳು.

    ಇಡಿ... ಇಲ್ಲಿಟ್ಟು ಹೋಗಿ.  ನಾನು ಆಮೇಲೆ ನೋಡ್ತಿನಿ.  ಹಾಂ, ಮಿ. ರಾಮನಾಥ್.  ತನ್ನ ಮುಂದೆ ಕುಳಿತಿದ್ದ ಪೇಷಂಟ್ ನತ್ತ ತಿರುಗಿದ ಶ್ರೀಕಾಂತ್. 

    ನೋಡಿ – ಇನ್ನೊಂದು ವಾರ ಬಿಟ್ಟು ಬನ್ನಿ.  ನೋಡೋಣ.  ಆದ್ರೆ ನಿತ್ಯ ಕ್ರೇಪ್ ಬ್ಯಾಂಡೇಜ್ ಕಟ್ಟಿಕೊಳ್ಳೋದು ಮರಿಬೇಡಿ.

    ಓಕೆ ಡಾಕ್ಟರ್, ಥ್ಯಾಂಕ್ ಯು.  ನೆಕ್ಟ್ಸ್ ವೀಕ್ ಬರ್ತೀನಿ.  ಇದೇನು ಟೆಲಿಗ್ರಾಮ್ ? ಈಗಿನ ಕಾಲದಲ್ಲೂ ಟೆಲಿಗ್ರಾಮ್ ಕಳಿಸೋರು ಇದಾರಾ?

    ಕುತೂಹಲದಿಂದ ತನ್ನತ್ತ ನೋಡಿದ ರಾಮನಾಥ್ ಅವರನ್ನು ನೋಡಿ ಜೋರಾಗಿ ನಕ್ಕ ಶ್ರೀಕಾಂತ್.

    ನಮ್ಮ ತಂದೆ ಕಳಿಸಿರ್ತಾರೆ.  ಅವ್ರು ಹೆಚ್ಚಾಗಿ ಪೋನ್ ಉಪಯೋಗಿಸಲ್ಲ...

    ತನ್ನ ಮುಂದಿದ್ದ ಟೆಲಿಗ್ರಾಮ್ ಕೈಗೆ ತೆಗೆದುಕೊಂಡು ತೆರೆದು ಓದಿದ ಡಾ. ಶ್ರೀಕಾಂತ್.

      ಈ ಭಾನುವಾರ ಬೆಳಗ್ಗೆ ಹತ್ತೂವರೆಗೆ ಬೆಂಗಳೂರಿನ ನನ್ನ ಮನೆಯಲ್ಲಿ ಇರತಕ್ಕದ್ದು - ಹಯವದನರಾವ್.

      ಅರೆ, ನಿಮ್ಮನ್ನು ಬನ್ನಿ ಅಂತ ಕರೆದಿದ್ದಾರೆ.  ಒಂದು ಪೋನ್ ಮಾಡಿದ್ರೆ... ಆಗ್ತಿತ್ತು.

    ನಮ್ಮ ತಂದೆಗೆ ಅದೆಲ್ಲ ಆಗಲ್ಲ.  ಈ ಟೆಲಿಗ್ರಾಮ್ ಕೊಡೋಕ್ಕೆ ತಮ್ಮ ಕಚ್ಚೆ ಪಂಚೆ ಉಟ್ಟುಕೊಂಡು, ಪೇಟೆ ಇಟ್ಟುಕೊಂಡು, ತಮ್ಮ ಗಂಧದ ಮರದ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಬೀದಿಯ ಕೊನೆಯಲ್ಲಿರುವ ಪೋಸ್ಟ್ ಆಪೀಸ್‍ಗೆ ಹೋಗಿ ಅಲ್ಲಿರುವವರೆಲ್ಲರ ಪ್ರಾಣ ತಿಂದು ನಂಗೆ, ನನ್ನ ತಮ್ಮನಿಗೆ ಈ ತರಹ ಏಡೆಂಟಿಕಲ್ ಟೆಲಿಗ್ರಾಮ್ ಕಳಿಸಿರ್ತಾರೆ.  ಪೋನ್ ಮಾಡಿದ್ರೆ....  ನಾನು ಭಾನುವಾರ, ನಂಗೆ ಆಗೋಲ್ಲ ಅನ್ನಬಹುದು.  ನನ್ನ ತಮ್ಮ ಹತ್ತೂವರೆಗೆ ಆಗಲ್ಲ ಆರೂವರೆಗೆ ಬರ್ತೀನಿ ಅನ್ನಬಹುದು.  ಅದಕ್ಕೆಲ್ಲಾ ಅವಕಾಶ ಕೊಡಲ್ಲ ನಮ್ಮಪ್ಪ ನಗುತ್ತಾ ಮೇಲೆದ್ದ ಡಾ. ಶ್ರೀಕಾಂತ್.

    ನೀವು ಫೋನು ಮಾಡಿ ಹೇಳಬಹುದಲ್ವಾ...

    ಅವ್ರ ಫೋನ್ ಸದಾ ಕೆಟ್ಟಿರುತ್ತೆ.  ಜತೆಗೆ ಆ ಸಮಯವಾದ ಮೇಲೆ ಹೋದ್ರೆ ಅವ್ರು ಮಾತಾಡಿಸುವುದೂ ಇಲ್ಲ.  ಎಲ್ಲದಕ್ಕೂ ಒಂದು ಟೈಮ್ ಅಷ್ಟೇ... ನಿಮ್ಗೆ ನಮ್ಮಪ್ಪ ಗೊತ್ತಿಲ್ಲ.

    ನಿಮ್ಮ ಅಪ್ಪ ಹಯವದನರಾವ್ ಗೊತ್ತಿಲ್ದೆ ಏನು? ಈ ರಾಜ್ಯವನ್ನು ಕಟ್ಟಿದವರ ಪೈಕಿ ಅವರೂ ಒಬ್ಬರಲ್ಲವೇ... ಅಂಥ ತಂದೆಯನ್ನು ಪಡೆದಿರುವುದಕ್ಕೆ ನೀವು ಬಹಳ ಲಕ್ಕಿ... ಬರ್ತೀನಿ... ಮುಂದಿನ ವಾರ ಬರ್ತೀನಿ...

    ಹಾಂ... ಬನ್ನಿ, ಕ್ರೇಪ್ ಬ್ಯಾಂಡೇಜ್ ಭದ್ರವಾಗಿ ಕಟ್ಕೊಳ್ಳಿ.  ಸರಿ ಹೋಗ್ದೆ ಇದ್ರೆ ಮುಂದಿನವಾರ ಪ್ಲಾಸ್ಟರ್ ಹಾಕಿಬಿಡ್ತೀನಿ.

    ರಾಮನಾಥ್ ಆಚೆ ಹೋದ ಕೂಡಲೆ ಸಿಸ್ಟರ್ ಒಳಗೆ ಬಂದಳು.

    ಡಾಕ್ಟರ್, ನಾಲ್ಕು ಗಂಟೆಯ ಮೀಟಿಂಗ್ ಜ್ಞಾಪಿಸಿ ಅಂತ ಡಾ. ಸುಂದರೇಶ್ ಸೆಕ್ರೆಟರಿ ಪೋನ್ ಮಾಡಿದ್ರು....

    ಓಕೆ.... ನೆನಪಲ್ಲಿ ಇದೆ.  ಸಿಸ್ಟರ್, ಇವತ್ತಿಗೆ ಇನ್ಯಾರೂ ಪೇಷಂಟ್ ಇಲ್ಲ ತಾನೇ...? ಮೇಲೆದ್ದು ಕೋಟ್ ಬಿಚ್ಚಿದ ಡಾ. ಶ್ರೀಕಾಂತ್.

    ರೋಹನ್ ಬರಬೇಕು... ಇವತ್ತು ಅವನ ಕಾಲಿನ ಪ್ಲಾಸ್ಟರ್ ತೆಗೀಬೇಕು...  ಏದುವರೆಗೆ ಕರ್ಕೊಂಡು ಬರ್ತೀನಿ ಅಂತ ಅವನಮ್ಮ ಪೋನ್ ಮಾಡಿದ್ರು.

    ಕೋಟನ್ನು ಚೇರಿನ ಮೇಲೆ ಹಾಕಿ, ಮೂಲೆಯಲ್ಲಿದ್ದ ಸಿಂಕ್‍ನ ಬಳಿ ಸಾಗಿದ ಡಾ. ಶ್ರೀಕಾಂತ್.

    "ಏದು ಗಂಟೆ ಮೇಲೆ ಅಪಾಯಿಂಟ್‍ಮೆಂಟ್ ಕೊಡಬೇಡಿ ಅಂತೀನಿ. ಕೆಳೋಲ್ಲ. ಯಾಕೆ ಹೀಗೆ ಮಾಡ್ತೀರಿ?

    ಮಾಮೂಲಾಗಿ ಕೊಡಲ್ಲ.  ಆದ್ರೆ ರೋಹನ್ ನೆನಪಿರಬೇಕಲ್ವಾ ಡಾಕ್ಟರ್. ಅದೇ ಡಾ. ಪ್ರಕಾಶ್ ಹಾಗೂ ಲಾಯರ್ ಹೇಮಾ ಅವರ ಮಗ... ಮೆಟ್ಟಿಲಿಂದ ಬಿದ್ದು ಕಾಲು ಮುರಿದುಕೊಂಡಿದ್ದನಲ್ಲ... ಬೇಗ ಬರೋಕ್ಕೆ ಸ್ಕೂಲಿರುತ್ತೆ ಅಂತ ರಿಕ್ವೆಸ್ಟ್ ಮಾಡಿಕೊಂಡಿದ್ರು....

    ಕಾಲು ಮುರಿದುಕೊಂಡಿದ್ರೂ ಸ್ಕೂಲಿಗೆ ಕಳಿಸ್ತಾ ಇದಾರಂತಾ? ಎಲ್ಲೋ ನಮ್ಮಪ್ಪನಂಥವರು ಶ್ರೀಕಾಂತ್ ಜೋರಾಗಿ ನಕ್ಕಾಗ ಸಿಸ್ಟರ್ ಸುಜಾತಾ ಕಿರುನಗೆ ನಕ್ಕಳು.

    ಅಲ್ಲೇ ಇದ್ದ ಟವಲ್‍ನಲ್ಲಿ ಕೈ ಒರೆಸಿಕೊಂಡು ಕೈಗಡಿಯಾರದತ್ತ ನೋಡಿಕೊಂಡ.

    ಓ... ಆಗ್ಲೆ ಮೂರೂವರೆಯಾಯ್ತು.  ನಂಗೆ ಒಂದು ಕಪ್ ಬಿಸಿ ಬಿಸಿ ಕಾಫಿ ಬೇಕು... ಪ್ಲೀಸ್ ಅರೇಂಜ್ ಫಾರ್ ಇಟ್.  ಮೀಟಿಂಗ್‍ನಲ್ಲಿ ಕೆಟ್ಟ ಟೀ ಆಫರ್ ಮಾಡ್ತಾರೆ ಸುಂದರೇಶ್.  ಹಾಂ...  ಹಾಗೇ ನನ್ನ ಮೊಬೈಲ್ ಫೋನ್ ಎಲ್ಲದ್ರೂ ಚಾರ್ಜ್ ಮಾಡಿ ತಂದುಕೊಡಿ...  ಬ್ಯಾಟರಿ ಡೌನ್ ಆಗಿದೆ. ಚಾರ್ಜರ್ ತಂದಿಲ್ಲ...

    ನಿಮ್ಮ ಬರ್ತ್‍ಡೇ ಯಾವತ್ತು ಡಾಕ್ಟರ್? ಸುಜಾತ ಕೇಳಿದಾಗ ಹುಬ್ಬೇರಿಸಿದ ಶ್ರೀಕಾಂತ್.

    ನಿಮ್ಗೆ ಕಾರಲ್ಲೇ ಚಾರ್ಜ್ ಮಾಡೋ ಚಾರ್ಜರ್ ಗಿಫ್ಟ್ ಮಾಡ್ತೀನಿ... ಸುಜಾತಾ ನಕ್ಕಾಗ ತಾನೂ ನಕ್ಕ ಶ್ರೀಕಾಂತ್

    ಕಾರಲ್ಲಿ ಚಾರ್ಜರ್ ಇದೆ.  ಉಷಾ ತಂದಿಟ್ಟಿದ್ದಾಳೆ.  ಆದ್ರೆ ನಂಗೆ ಚಾರ್ಜ್ ಮಾಡೋದು ಮರೆತುಹೋಗುತ್ತೆ... ಐ ನೀಡ್ ಎ ಮೆಮೊರಿ ಚಾರ್ಜರ್ ಅಷ್ಟೇ...

    ನಕ್ಕಳು ಸುಜಾತ.

    ಕಾಫಿ ಜತೆ ತಿನ್ನೊಕೆ ಏನಾದ್ರೂ ಬೇಕಾ ಡಾಕ್ಟರ್?

    ಬೇಡ, ಸ್ಟ್ರಾಂಗ್ ಹಾಟ್ ಕಾಫಿ ಸಾಕು...

    ಫೈನ್...

    ಸುಜಾತಾ ಹೊರಗೆ ಹೋದ ಮೇಲೆ ಟೇಬಲ್ ಮೇಲಿದ್ದ ಡೈರಿ ತೆಗೆದು ಸೆಪ್ಟಂಬರ್ ಹದಿನಾಲ್ಕರ ಹಾಳೆ ತೆಗೆದ ಶ್ರೀಕಾಂತ್.

    ಶಂಕರಣ್ಣನ ಮನೆಯಲ್ಲಿ ಸತ್ಯನಾರಾಯಣ ಪೂಜೆ.  ಎಲ್ಲರೂ ಬೆಳಗ್ಗೆ ಹತ್ತು ಗಂಟೆಗೆ ಅಲ್ಲಿರಬೇಕು...  ಉಷಾಳ ಅಕ್ಷರಗಳು ದಿಟ್ಟಿಸಿ ತಲೆ ಕೊಡವಿದ ಶ್ರೀಕಾಂತ್.

    ಓ ಗಾಡ್ ! ಈ ಶಂಕರ ಅವತ್ತೇ ಸತ್ಯನಾರಾಯಣ ಪೂಜೆ ಇಟ್ಟುಕೊಳ್ಳ ಬೇಕಾ... ಇವಳು ಬೇರೆ ಇಷ್ಟು ದೊಡ್ಡದಾಗಿ ಡೈರಿಯಲ್ಲಿ ಬರೆದಿಟ್ಟಿದ್ದಾಳೆ.  ಅಪ್ಪ ಬೆಳಿಗ್ಗೆ ಹತ್ತೂವರೆಗೆ ಅಲ್ಲಿ ಇರಬೇಕು ಅಂತ ಟೆಲಿಗ್ರಾಮ್ ಕಳಿಸಿದ್ದಾರೆ.  ಅಂದ್ರೆ, ಮಿನಿಮಮ್ ಏಳು ಗಂಟೆಗೆ ಮನೆ ಬಿಡಬೇಕು.  ಶಂಕರನ ಮನೆಗೆ ಹೋಗೋಕ್ಕೆ ಆಗಲ್ಲ.  ಮನೆಯಲ್ಲಿ ರಾಮಾಯಣ, ಮಹಾಭಾರತ ಎರಡೂ ಶುರು ಮಾಡಿಬಿಡ್ತಾಳೆ ಉಷಾ.

    ಇವತ್ತಾಗಲೇ ಶುಕ್ರವಾರ.  ಟೇಬಲ್ ಮೇಲಿದ್ದ ಪೋನ್ ತೆಗೆದು ತಂದೆಯ ನಂಬರ್ ಡಯಲ್ ಮಾಡಿದ.  ‘ ಈ ನಂಬರ್ ಚಾಲನೆಯಲ್ಲಿ ಇಲ್ಲ’ ಎಂಬ ಮೆಸೇಜ್ ಬಂದಾಗ ರೀಸಿವರ್ ಕುಕ್ಕಿದ.  ಕುಕ್ಕಿದ ಮರುಕ್ಷಣ ಪೋನ್ ರಿಂಗಾಗಲು ತೊಡಗಿದಾಗ ಕಣ್ಣರಳಿಸಿ ಅದರತ್ತ ನೋಡಿ ರೀಸೀವರ್ ಕೈಗೆತ್ತಿ ಕೊಂಡ.

    ಹಲೋ! ಡಾ. ಶ್ರೀಕಾಂತ್ ಹಿಯರ್...

    ಹಲೋ ಅಣ್ಣ! ನಾನು ಕೃಷ್ಣಕಾಂತ್...

    ಓ ! ಕೃಷ್ಣಾ ! ಹೇಗಿದ್ಯ ? ದನಿಯಲ್ಲಿ ಬೇಡವೆಂದರೂ ವ್ಯಂಗ್ಯ ಸುಳಿಯಿತು.

    ಚೆನ್ನಾಗಿದ್ದೇನೆ.  ಮನೆಯಲ್ಲೇ ಇದ್ದೇನೆ...

    ಏನು ? ಆಗಲೇ ಬೆಂಗಳೂರಿನಲ್ಲಿ ಇದೀಯಾ?

    ಅದೇ ಆ ಸಿನಿಮಾ ನಟಿ... ಮಾಜಿ ಸಿನಿಮಾ ನಟಿಯಾ ಮನೇನಾ... ? ಅಂದ್ರೆ ಹಾಸನದಲ್ಲಿ ಇದೀಯಾ?

    ಹೂಂ...

    ಅಲ್ವೋ... ನೀವಿಬ್ರು ಒಂದು ಮದುವೇನಾದ್ರೂ ಮಾಡಿಕೊಬಾರ್ದಾ ? ಶ್ರೀಕಾಂತನ ದನಿಯಲ್ಲಿ ಆಕ್ಷೇಪಣೆ ಇತ್ತು.

    ನಾನು ರೆಡಿ... ಅವಳು ಒಪ್ಪುತ್ತಿಲ್ಲ... ಜೋರಾಗಿ ನಕ್ಕ ಕೃಷ್ಣ.  :ಆಂ... ಟೆಲಿಗ್ರಾಮ್ ಬಂತಾ ಸಾಹೇಬರಿಂದ?"

    ಕೃಷ್ಣ

    Enjoying the preview?
    Page 1 of 1